ETV Bharat / business

ಆಗಸ್ಟ್​​ ಜಿಎಸ್​​​ಟಿ ಆದಾಯ 1,59,069 ಕೋಟಿ ರೂ.; ಕಳೆದ ವರ್ಷಕ್ಕಿಂತ ಶೇ 11ರಷ್ಟು ಹೆಚ್ಚಳ

ಈ ವರ್ಷದ ಆಗಸ್ಟ್ ತಿಂಗಳಲ್ಲಿ ದೇಶದ ಜಿಎಸ್​ಟಿ ಆದಾಯ 1,59,069 ಕೋಟಿ ರೂಪಾಯಿಗಳಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.

GST collections for August at Rs 1,59,069 crore, 3.6% lower than July

author img

By ETV Bharat Karnataka Team

Published : Sep 1, 2023, 5:57 PM IST

ನವದೆಹಲಿ: ಆಗಸ್ಟ್​ನಲ್ಲಿ ದೇಶದ ಒಟ್ಟು ಜಿಎಸ್​ಟಿ ಆದಾಯ 1,59,069 ಕೋಟಿ ರೂ.ಗಳಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಇದು ಜುಲೈನಲ್ಲಿ ಸಂಗ್ರಹವಾದ 1,65,105 ಕೋಟಿ ರೂ.ಗಿಂತ ಶೇ 3.6ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಆಗಸ್ಟ್ 2022ರಲ್ಲಿ ಬಂದಿದ್ದ ಜಿಎಸ್​ಟಿ ಆದಾಯ 1,43,612ಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್​ ಜಿಎಸ್​ಟಿ ಆದಾಯ ಶೇಕಡಾ 11 ರಷ್ಟು ಹೆಚ್ಚಾಗಿರುವುದು ಗಮನಾರ್ಹ.

ಆಗಸ್ಟ್ 2023ರಲ್ಲಿ ಬಂದ 1,59,069 ಕೋಟಿ ರೂ. ಜಿಎಸ್​ಟಿ ಆದಾಯದ ಪೈಕಿ ಸಿಜಿಎಸ್​ಟಿ 28,328 ಕೋಟಿ ರೂ., ಎಸ್​ಜಿಎಸ್​ಟಿ 35,794 ಕೋಟಿ ರೂ., ಐಜಿಎಸ್​ಟಿ 83,251 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 43,550 ಕೋಟಿ ರೂ.ಗಳು ಸೇರಿದಂತೆ) ಮತ್ತು ಸೆಸ್ 11,695 ಕೋಟಿ ರೂ. ಆಗಿದೆ.

ಸರ್ಕಾರವು ಸಿಜಿಎಸ್​ಟಿಗೆ 37,581 ಕೋಟಿ ರೂ., ಎಸ್​ಜಿಎಸ್​ಟಿಗೆ 31,408 ಕೋಟಿ ರೂ.ಗಳನ್ನು ಐಜಿಎಸ್​ಟಿಯಿಂದ ಸೆಟ್ಲ್​ ಮಾಡಿದೆ. ನಿಯಮಿತ ಸೆಟ್ಲ್‌ಮೆಂಟ್​ ನಂತರ ನಂತರ 2023 ರ ಆಗಸ್ಟ್​ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್ಟಿ 65,909 ಕೋಟಿ ರೂ. ಮತ್ತು ಎಸ್​ಜಿಎಸ್​ಟಿ 67,202 ಕೋಟಿ ರೂ. ಗಳಾಗಿದೆ. ಆಗಸ್ಟ್ 2023 ರ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಸ್​ಟಿ ಆದಾಯಕ್ಕಿಂತ ಶೇಕಡಾ 11ರಷ್ಟು ಹೆಚ್ಚಾಗಿದೆ.

ಈ ತಿಂಗಳಲ್ಲಿ ಸರಕುಗಳ ಆಮದಿನಿಂದ ಬರುವ ಆದಾಯವು ಶೇಕಡಾ 3ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ 14 ರಷ್ಟು ಹೆಚ್ಚಾಗಿದೆ. ಇದಕ್ಕೂ ಮುನ್ನ ಶುಕ್ರವಾರ, ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರು ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ಮಾತನಾಡಿ, ಆಗಸ್ಟ್ 2023ರ ಜಿಎಸ್​ಟಿ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದರು.

ಜಿಎಸ್​ಟಿ ಎಂಬುದು ಸರಕು ಮತ್ತು ಸೇವಾ ತೆರಿಗೆಯ ಸಂಕ್ಷಿಪ್ತ ರೂಪವಾಗಿದೆ. ಇದು ಪರೋಕ್ಷ ತೆರಿಗೆಯಾಗಿದ್ದು, ಅಬಕಾರಿ ಸುಂಕ, ವ್ಯಾಟ್, ಸೇವಾ ತೆರಿಗೆ ಮುಂತಾದ ಅನೇಕ ಪರೋಕ್ಷ ತೆರಿಗೆಗಳನ್ನು ಇದು ತೆಗೆದು ಹಾಕಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ನು 2017 ರ ಮಾರ್ಚ್ 29 ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಮತ್ತು ಇದು 2017ರ ಜುಲೈ 1 ರಿಂದ ಜಾರಿಗೆ ಬಂದಿತು.

ಸರಕು ಮತ್ತು ಸೇವಾ ತೆರಿಗೆಯನ್ನು ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ವಿಧಿಸಲಾಗುತ್ತದೆ. ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾನೂನು ತಳಹದಿಯ, ಬಹು-ಹಂತದ, ಗಮ್ಯಸ್ಥಾನ ಆಧಾರಿತ ತೆರಿಗೆಯಾಗಿದ್ದು, ಇದನ್ನು ಪ್ರತಿ ಮೌಲ್ಯವರ್ಧನೆಯ ಮೇಲೆ ವಿಧಿಸಲಾಗುತ್ತದೆ. ಜಿಎಸ್​ಟಿ ಇದು ಇಡೀ ದೇಶಕ್ಕೆ ಒಂದೇ ದೇಶೀಯ ಪರೋಕ್ಷ ತೆರಿಗೆ ಕಾನೂನು ಆಗಿದೆ.

ಇದನ್ನೂ ಓದಿ : ಭಾವಚಿತ್ರ, ಧ್ವನಿ ನಕಲಿಸಿ ಸೈಬರ್​ ವಂಚನೆ; ಕಾಲ್​ ರಿಸೀವ್‌ಗೂ ಮುನ್ನ ಹುಷಾರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.