ETV Bharat / business

ಷೇರುಪೇಟೆಯಲ್ಲಿ ಗೂಳಿ ನಾಗಾಲೋಟ..450 ಅಂಕಗಳ ಆರಂಭಿಕ ಏರಿಕೆ ಕಂಡ ಸೆನ್ಸೆಕ್ಸ್​ - ಅಮೆರಿಕದ ಫೆಡರಲ್ ರಿಸರ್ವ್

ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್​ 450 ಅಂಕಗಳಿಗಿಂತಲೂ ಅಧಿಕ ಏರಿಕೆಯಾಗಿದ್ದು, ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿದಿದೆ.

ಷೇರುಪೇಟೆ
ಷೇರುಪೇಟೆ
author img

By

Published : Sep 23, 2021, 12:34 PM IST

ಮುಂಬೈ: ವಾರದ ಆರಂಭದಲ್ಲೇ(ಸೋಮವಾರ) ತೀವ್ರ ಹಿನ್ನಡೆ ಅನುಭವಿಸಿದ್ದ ಷೇರುಪೇಟೆ ವಹಿವಾಟು, ಕಳೆದ ಮೂರು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 450 ಅಂಕಗಳಷ್ಟು ಏರಿಕೆಯಾಗಿದೆ.

ಸೆನ್ಸೆಕ್ಸ್​​ 487.42 ರಷ್ಟು ಅಂಕಗಳು ಏರಿಕೆಯಾಗಿ, 59,414.75ಕ್ಕೆ ವಹಿವಾಟು ನಡೆಸುತ್ತಿದೆ. ಆರಂಭಿಕ ವ್ಯವಹಾರಗಳಲ್ಲಿ ನಿಫ್ಟಿ 142.50 ಪಾಯಿಂಟ್‌ಗಳಷ್ಟು ಏರಿಕೆಯಾಗಿ 17,689.15 ಕ್ಕೆ ತಲುಪಿದೆ.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಟಾಪ್ ಗೇನರ್ ಆಗಿದ್ದು, ಶೇಕಡಾ 2 ರಷ್ಟು ಏರಿಕೆ ಕಂಡಿದೆ. ನಂತರದ ಸ್ಥಾನದಲ್ಲಿ ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಎಸ್‌ಬಿಐ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ವಹಿವಾಟು ನಡೆಸುತ್ತಿವೆ. ಮತ್ತೊಂದೆಡೆ, ಟೈಟಾನ್ ಮತ್ತು ಟೆಕ್ ಮಹೀಂದ್ರಾ ತೀವ್ರ ಹಿನ್ನಡೆ ಅನುಭವಿಸುತ್ತಿವೆ.

ಆರ್ಥಿಕತೆಯನ್ನು ಬೆಂಬಲಿಸಲು ಫೆಡರಲ್ ರಿಸರ್ವ್ ತನ್ನ ಬೃಹತ್ 120 ಶತಕೋಟಿ ಡಾಲರ್​ ಮಾಸಿಕ ಆಸ್ತಿ ಖರೀದಿ ಕಾರ್ಯಕ್ರಮವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಈ ಹಿನ್ನೆಲೆ ಅಮೆರಿಕದ ಷೇರುಗಳು ಗಣನೀಯವಾಗಿ ಏರಿಕೆ ಕಂಡಿವೆ ಎಂದು ರಿಲಯನ್ಸ್ ಸೆಕ್ಯುರಿಟೀಸ್​ನ ಹೆಡ್ ಸ್ಟ್ರಾಟಜಿ ಬಿನೋದ್ ಮೋದಿ ಹೇಳಿದ್ದಾರೆ.

ಉದ್ಯೋಗ ಮಾರುಕಟ್ಟೆ ತನ್ನ ಸ್ಥಿರತೆ ಕಾಯ್ದುಕೊಂಡರೆ ಫೆಡರಲ್ ತನ್ನ ಮಾಸಿಕ ಬಾಂಡ್​ ಖರೀದಿಗಳನ್ನು ಹೆಚ್ಚಿಸಲು ಪ್ರಾರಂಭಿಸುವುದಾಗಿ ನವೆಂಬರ್​ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎಂದು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಹೇಳಿದ್ದಾರೆ.

ನವೆಂಬರ್ ನೀತಿ ಸಭೆಯಲ್ಲಿ ಸೆಂಟ್ರಲ್ ಬ್ಯಾಂಕ್ ತನ್ನ ಆಸ್ತಿ ಖರೀದಿ ಕಾರ್ಯಕ್ರಮದ ಹಿಂತೆಗೆದುಕೊಳ್ಳುವಿಕೆ ಘೋಷಿಸಬಹುದು. 2022 ರಲ್ಲಿ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಬಹುದು ಎಂದು ಪೊವೆಲ್ ಹೇಳಿದ್ದಾರೆ.

ಇದನ್ನೂ ಓದಿ: 855 ಮೀಟರ್ ಸುರಂಗ ಕೊರೆದು ಹೊರಬಂದ ಊರ್ಜಾ ಯಂತ್ರ.. ಸಿಎಂ ಬೊಮ್ಮಾಯಿ ವೀಕ್ಷಣೆ

ಏಷ್ಯಾದ ಇತರ ಭಾಗಗಳಲ್ಲಿ, ಶಾಂಘೈ ಮತ್ತು ಹಾಂಕಾಂಗ್‌ನಲ್ಲಿನ ಷೇರುಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದವು. ಜಪಾನಿನ ಮಾರುಕಟ್ಟೆ ಮುಚ್ಚಿತ್ತು. ಅಂತಾರಾಷ್ಟ್ರೀಯ ತೈಲ ಬೆಂಚ್‌ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇಕಡಾ 0.25 ರಷ್ಟು​​ ಏರಿಕೆಯಾಗಿ 76.38 ಡಾಲರ್‌ಗೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.