ನವದೆಹಲಿ: ಚಿನ್ನದ ಪ್ರಿಯರಿಗೆ ಮತ್ತೆ ಕಹಿ ಸುದ್ದಿ ನೀಡಿರುವ ಚಿನಿವಾರ ಪೇಟೆಯಲ್ಲಿಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 18 ರೂಪಾಯಿ ಏರಿಕೆಯಾಗಿದೆ. ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಳದಿ ಲೋಹದ ದರ ಹೆಚ್ಚಳಗೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಡಿಸೆಂಬರ್ ವಿತರಣೆಯ ಚಿನ್ನದ ಒಪ್ಪಂದಗಳ 10,402 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ 10 ಗ್ರಾಂಗೆ ಶೇ.0.04ರಷ್ಟು ಹೆಚ್ಚಳದೊಂದಿಗೆ 47,980ಗೆ ತಲುಪಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ 47,100 ರೂಪಾಯಿ ಇದೆ.
ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತಿರುವುದೇ ಬೆಲೆಯಲ್ಲಿ ಏರಿಕೆಗೆ ಕಾರಣವಾಯಿತು. ನ್ಯೂಯಾರ್ಕ್‌ನಲ್ಲಿ ಚಿನ್ನದ ಬೆಲೆಗಳು ಶೇಕಡಾ 0.27 ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 1,803.70 ಡಾಲರ್‌ನಲ್ಲಿ ವಹಿವಾಟು ನಡೆಸಿದೆ.