ಮುಂಬೈ: ಸತತ ಕುಸಿತ ಕಂಡಿದ್ದ ಮುಂಬೈ ಷೇಟೆಯಲ್ಲಿ ಇಂದು ದಿನದ ವಾಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 620 ಅಂಕಗಳ ಏರಿಕೆ ಕಂಡು 57,684ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 183 ಅಂಕಗಳ ಜಿಗಿತದೊಂದಿಗೆ 17,166ಕ್ಕೆ ತಲುಪಿದೆ.
ಇಂಡಸ್‌ಇಂಡ್ ಬ್ಯಾಂಕ್ ಹೆಚ್ಚು ಲಾಭಗಳಿಸಿತು. ಈ ಬ್ಯಾಂಕ್‌ನ ಷೇರುಗಳಲ್ಲಿ ಶೇಕಡಾ 5.73 ರಷ್ಟು ಏರಿಕೆಯಾಗಿದೆ. ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಟೆಕ್ ಮಹೀಂದ್ರಾ, ಮಾರುತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನಂತರದ ಸ್ಥಾನದಲ್ಲಿವೆ.
ಮತ್ತೊಂದೆಡೆ ಡಾ ರೆಡ್ಡೀಸ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಟೈಟಾನ್ ಹಾಗೂ ಕೋಟಕ್ ಬ್ಯಾಂಕ್ ನಷ್ಟ ಅನುಭವಿಸಿವೆ. ಈ ಕಂಪನಿಗಳ ಷೇರುಗಳು ಶೇ.1.58 ರಷ್ಟು ಕುಸಿದಿವೆ.
ಒಮಿಕ್ರೋನ್ ಕೋವಿಡ್ ರೂಪಾಂತರಿ ಭೀತಿಯಿಂದ ವಿದೇಶಗಳ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿತ್ತು. ಇದು ದೇಶಿಯ ಷೇರು ಪೇಟೆಗೂ ಹೊಡೆತ ನೀಡಿತ್ತು. ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳನ್ನು ಹಿಂತೆಗಿದುಕೊಳ್ಳಲು ಮುಂದಾದಾಗ ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಇಳಿಕೆ ಕಂಡಿದ್ದವು.
ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಜಿಗಿತ ಹಾಗೂ ಆರ್ಥಿಕ ಅಂಕಿ -ಅಂಶಗಳು ದೇಶೀಯ ಹೂಡಿಕೆದಾರರನ್ನು ಮತ್ತಷ್ಟು ಹುರಿದುಂಬಿಸಿದ ಕಾರಣ ದಿನದಾಂತ್ಯದಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಜಿಗಿತ ಕಂಡಿದೆ ಎಂದು ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Omicron ಆತಂಕದಿಂದ ಹೊರಬಂದ ಉದ್ಯಮಗಳು: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ