ETV Bharat / business

ಮೋದಿಯವರ ಹೂಡಿಕೆ ಸ್ನೇಹಿ ಆಡಳಿತದಿಂದ FDI ಪ್ರಮಾಣ 28.1 ಶತಕೋಟಿ ಡಾಲರ್​ಗೆ ತಲುಪಿದೆ: ಗೋಯಲ್​ - ಮೋದಿ ಆಡಳಿತ ಪ್ರಶಂಸಿಸಿದ ಪಿಯೂಷ್ ಗೋಯಲ್​

ಕೋವಿಡ್ ಹೊರತಾಗಿಯೂ ವಿದೇಶಿ ಹೂಡಿಕೆಯು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಭಾರತ ಜಾಗತಿಕ ಹೂಡಿಕೆದಾರರಿಗೆ ಹೂಡಿಕೆ ಸ್ನೇಹಿ ವಾತಾವರಣವಿರುವ ರಾಷ್ಟ್ರವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎಫ್‌ಡಿಐ ಪ್ರಮಾಣ 14.06 ಬಿಲಿಯನ್ ಡಾಲರ್‌ನಿಂದ 28.1 ಬಿಲಿಯನ್ ಡಾಲರ್‌ಗೆ ಏರಿದೆ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

Goyal
ಗೋಯಲ್
author img

By

Published : Nov 28, 2020, 4:15 PM IST

ನವದೆಹಲಿ: ಪ್ರಸಕ್ತ ವರ್ಷದ 2020ರ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಪ್ರಮಾಣ 28.1 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದು ದೇಶದಲ್ಲಿನ ಹೂಡಿಕೆಯ ವಾತಾವರಣಕ್ಕೆ ಜಾಗತಿಕ ಹೂಡಿಕೆದಾರರ ಆದ್ಯತೆಯನ್ನು ಸೂಚಿಸುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

2019ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎಫ್‌ಡಿಐ 14.06 ಬಿಲಿಯನ್ ಡಾಲರ್ ಆಗಿತ್ತು. ಇತ್ತೀಚಿನ ವರದಿ ಅನ್ವಯ, ಎಫ್​ಡಿಐ ಪ್ರಮಾಣ 28.1 ಬಿಲಿಯನ್​ ಡಾಲರ್​ಗೆ ತಲುಪಿದೆ.

2.51 ಶತಕೋಟಿ ಡಾಲರ್​ಗೆ ತಲುಪಿದ ವಿದೇಶಿ ವಿನಿಮಯ ನಿಧಿ : ಚಿನ್ನದ ನಿಕ್ಷೇಪ ಕುಸಿತ

ಕೋವಿಡ್ ಹೊರತಾಗಿಯೂ ವಿದೇಶಿ ಹೂಡಿಕೆಯು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಭಾರತ ಜಾಗತಿಕ ಹೂಡಿಕೆದಾರರಿಗೆ ಹೂಡಿಕೆ ಸ್ನೇಹಿ ವಾತಾವರಣವಿರುವ ರಾಷ್ಟ್ರವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎಫ್‌ಡಿಐ ಪ್ರಮಾಣ 14.06 ಬಿಲಿಯನ್ ಡಾಲರ್‌ನಿಂದ 28.1 ಬಿಲಿಯನ್ ಡಾಲರ್‌ಗೆ ಏರಿದೆ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಎಫ್‌ಡಿಐ ಶೇ. 15ರಷ್ಟು ಏರಿಕೆಯಾಗಿ 30 ಬಿಲಿಯನ್ ಡಾಲರ್‌ಗೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.