ETV Bharat / business

ವಿವಾದಿತ 3 ಕೃಷಿ ಕಾಯ್ದೆ ಬಳಿಕ ಬಜೆಟ್​ ಸೆಷನ್​ನಲ್ಲಿ 20+ ಮಸೂದೆಗಳ ಮಂಡನೆಗೆ ಮೋದಿ ಸರ್ಕಾರ ಸಜ್ಜು! - ವಿಳಂಬ ವಿದ್ಯುತ್ ತಿದ್ದುಪಡಿ ಬಿಲ್​​ ಮಸೂದೆ

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲಿರುವ ಮಸೂದೆಗಳಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದ ಡಿಲೈಸನ್ಸಿಂಗ್, ಭಾರತದ ಸ್ಪರ್ಧಾ ಆಯೋಗದ ತಿದ್ದುಪಡಿಗಳು ಮತ್ತು ಪಿಎಫ್‌ಆರ್‌ಡಿಎ ಕಾಯ್ದೆಗಳು, ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯ ರಚನೆ, ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧಂತಹ ವಿಷಯಗಳು ಸೇರಿವೆ.

Major economic legislations
Major economic legislations
author img

By

Published : Jan 30, 2021, 4:32 PM IST

ನವದೆಹಲಿ: ಜನವರಿ 29ರಿಂದ ಪ್ರಾರಂಭವಾದ ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ಕೇಂದ್ರವು 20ಕ್ಕೂ ಹೆಚ್ಚು ಮಸೂದೆ ಮಂಡನೆಯ ಕಾರ್ಯಸೂಚಿ ರೂಪಿಸಿದೆ.

ಸಂಸತ್ತಿನ ಶಾಸಕಾಂಗ ಸರ್ಕಾರವು ತನ್ನ ಸುಧಾರಣಾ ಕಾರ್ಯಸೂಚಿ ಗುರಿ ಸಾಧಿಸಲು ಹಲವು ಆರ್ಥಿಕ ಮಸೂದೆಗಳ ಪರಿಚಯ ಮತ್ತು ಅಂಗೀಕಾರ ಒಳಗೊಂಡಿರುತ್ತದೆ.

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲಿರುವ ಮಸೂದೆಗಳಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದ ಡಿಲೈಸನ್ಸಿಂಗ್, ಭಾರತದ ಸ್ಪರ್ಧಾ ಆಯೋಗದ ತಿದ್ದುಪಡಿಗಳು ಮತ್ತು ಪಿಎಫ್‌ಆರ್‌ಡಿಎ ಕಾಯ್ದೆಗಳು, ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯ ರಚನೆ, ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧಂತಹ ವಿಷಯಗಳು ಸೇರಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಂಡಿಸುವ ಬಜೆಟ್ ಪ್ರಸ್ತಾಪಗಳಿಗೆ ಸಂಬಂಧಿತವಾಗಿ ಬಹುಪಾಲು ಹಣಕಾಸು ಮಸೂದೆಗಳು ಪರಿಚಯಿಸಲಾಗುತ್ತದೆ.

ಆರ್ಥಿಕ ಶಾಸನಗಳಲ್ಲಿ ಸಿಸಿಐ ತಿದ್ದುಪಡಿ ಮಸೂದೆಯು ಪ್ರಾದೇಶಿಕ ಕಚೇರಿಗಳನ್ನು ತೆರೆಯುವ ಮೂಲಕ ದೇಶಾದ್ಯಂತ ಸಿಸಿಐ ಚಟುವಟಿಕೆಗಳನ್ನು ವಿಸ್ತರಿಸುವುದು, ಸಿಸಿಐನ ಆಡಳಿತ ರಚನೆಯಲ್ಲಿ ಕೆಲವು ಅಗತ್ಯ ರಚನಾತ್ಮಕ ಬದಲಾವಣೆಗಳನ್ನು ತರುವ ಗುರಿ ಇರಿಸಿಕೊಂಡಿದೆ.

ಬಜೆಟ್ ಅಧಿವೇಶನದಲ್ಲಿ ಪರಿಚಯಿಸಬೇಕಾದ ಇತರ ಮಸೂದೆ 2021ರ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ. ಇದು ಪಿಎಫ್‌ಆರ್‌ಡಿಎ ಕಾಯ್ದೆಯನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ. ಎನ್‌ಪಿಎಸ್ ಟ್ರಸ್ಟ್ ಅನ್ನು ಪಿಎಫ್‌ಆರ್‌ಡಿಎಯಿಂದ ಬೇರ್ಪಡಿಸಲು ಅವಕಾಶ ಕಲ್ಪಿಸುತ್ತದೆ.

ಇದನ್ನೂ ಓದಿ: 2012ರಿಂದ ರಾಜ್ಯಗಳ ನಡುವೆ ಕುಗ್ಗಿದ ಕನಿಷ್ಠ ಅವಶ್ಯಕತೆಗಳ ಅಂತರ : ಆರ್ಥಿಕ ಸಮೀಕ್ಷೆ

ಹಣಕಾಸು ಸಂಸ್ಥೆ ಮತ್ತು ಅಭಿವೃದ್ಧಿ ಬ್ಯಾಂಕ್ ಆಗಿ ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್‌ಐ) ಸ್ಥಾಪಿಸಲು ಸರ್ಕಾರವು 2021ರ ಹಣಕಾಸು ಮೂಲಸೌಕರ್ಯ ಮತ್ತು ಅಭಿವೃದ್ಧಿ (ನಾಬಿಎಫ್‌ಐಡಿ) ಮಸೂದೆ ಪರಿಚಯಿಸಲಿದೆ. ಡಿಜಿಟಲ್​ ಕರೆನ್ಸಿ ನಿಯಂತ್ರಣಕ್ಕೆ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ, 2021ರ ಮಸೂದೆ ಮಂಡಿಸಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಲಿರುವ ಅಧಿಕೃತ ಡಿಜಿಟಲ್ ಕರೆನ್ಸಿ ರಚಿಸಲು ಇದು ಅನುಕೂಲಕರ ಚೌಕಟ್ಟು ರಚಿಸುತ್ತದೆ. ಮಸೂದೆಯು ಭಾರತದಲ್ಲಿನ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಯತ್ನಿಸುತ್ತದೆ. ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಉಪಯೋಗಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅನುಮತಿಸುತ್ತದೆ.

ಸರ್ಕಾರವು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2021ಅನ್ನು ಪರಿಚಯಿಸಲಿದ್ದು, ಇದು ಆ ಕ್ಷೇತ್ರದ ಸುಧಾರಣೆಗೆ ಹೂಡಿಕೆ ಆಕರ್ಷಿಸುವ ಮತ್ತು ವ್ಯಾಜ್ಯಗಳನ್ನು ತೆಗೆದುಹಾಕುವ ಉತ್ತಮ ನಿಯಮಗಳಿಗೆ ಅವಕಾಶ ನೀಡುತ್ತದೆ. 2021ರ ವಿಳಂಬಿತ ವಿದ್ಯುತ್ (ತಿದ್ದುಪಡಿ) ಮಸೂದೆ ಪರಿಚಯಿಸಲಿದೆ. ಇದು ವಿತರಣಾ ವ್ಯವಹಾರಕ್ಕೆ ಪರವಾನಗಿ ನೀಡಲು ಮತ್ತು ಸ್ಪರ್ಧೆ ತರಲು ಪ್ರಸ್ತಾಪಿಸುತ್ತದೆ. ಪ್ರತಿ ಆಯೋಗದಲ್ಲೂ ಕಾನೂನು ಹಿನ್ನೆಲೆಯಿಂದ ಸದಸ್ಯರನ್ನು ನೇಮಿಸುವುದು, ಎಪಿಟಿಇಎಲ್ ಬಲಪಡಿಸುವುದು, ಶುಲ್ಕ ಪಾವತಿಸದೆ ಇದ್ದಾಗ ದಂಡ, ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಸೂಚಿ ಒಳಗೊಂಡಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.