ETV Bharat / business

ವಿಮಾನ ಹಾರಾಟಕ್ಕೆ ಶೀಘ್ರ ಗ್ರೀನ್ ಸಿಗ್ನಲ್​... ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳಿವು

author img

By

Published : May 12, 2020, 6:17 PM IST

ನಾಗರಿಕ ವಿಮಾನಯಾನ ಸಚಿವಾಲಯವು ದೇಶದಲ್ಲಿ ವಾಣಿಜ್ಯ ವಿಮಾನ ಪ್ರಯಾಣಿಕ ಸೇವೆಗಳನ್ನು ಮರು ಆರಂಭಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಜಾರಿಗೆ ತರಲಿದೆ. ಆರೋಗ್ಯ ಸೇತು ಅಪ್ಲಿಕೇಷನ್‌ನಲ್ಲಿ ಗ್ರೀನ್​ ಸ್ಥಿತಿ, ಚೆಕ್ - ಇನ್ ಮತ್ತು ಎಲ್ಲ ದೇಶೀಯ ನಿರ್ಗಮನ ಹಾಗೂ ಆಗಮಿಸುವ ಪ್ರಯಾಣಿಕರಿಗೆ ಜ್ವರ ತಪಾಸಣೆ ಸಹ ಇದರಲ್ಲಿ ಪ್ರಸ್ತಾಪಿಸಲಾಗಿದೆ.

flights Service
ವಿಮಾನ ಹಾರಾಟ ಸೇವೆ

ಮುಂಬೈ: ದೇಶಾದ್ಯಂತ ಜಾರಿಯಲ್ಲಿರುವ 3ನೇ ಹಂತದ ಲಾಕ್​ಡೌನ್​ ಅಂತ್ಯಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ವಿಶೇಷ ರೈಲ್ವೆ, ಕೆಲ ರಾಜ್ಯಗಳಲ್ಲಿ ನಿಬಂಧನೆಗೆ ಒಳಪಟ್ಟ ಅಂತರ್​ ರಾಜ್ಯ ಬಸ್​ ಸೇವೆ ಆರಂಭವಾಗಿದೆ. ವಾಣಿಜ್ಯ ವಿಮಾನ ಹಾರಾಟದ ಚಾಲನೆಯ ಸುಳಿವು ಸಹ ಸಿಕ್ಕಿದೆ.

ಕೋವಿಡ್​-19ಗೆ ಸಂಬಂಧಿಸಿದ ವಿವರವಾದ ಪ್ರಶ್ನಾವಳಿ ಭರ್ತಿ, ಕ್ಯಾಬಿನ್ ಸಾಮಗ್ರಿ ಸಾಗಣೆ, ಆರೋಗ್ಯ ಸೇತು ಅಪ್ಲಿಕೇಷನ್ ಬಳಕೆ, ವಿಮಾನ ನಿರ್ಗಮನಕ್ಕೆ ಕನಿಷ್ಠ ಎರಡು ಗಂಟೆಗಳ ಮೊದಲು ನಿಲ್ದಾಣ ತಲುಪುವಂತಹ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯ ಸಲಹೆ ಸಿದ್ಧಪಡಿಸಿದೆ.

ಸಂಭವನೀಯ ಸೋಂಕು ತಡೆಗಟ್ಟಲು ಸಾಧ್ಯವಾದಷ್ಟು ಒಂದೇ ರೀತಿಯ ಕ್ಯಾಬಿನ್ ಮತ್ತು ಕಾಕ್‌ಪಿಟ್ ಸಿಬ್ಬಂದಿಯನ್ನು ರೋಸ್ಟರಿಂಗ್ ಮಾಡಲು ಮುಂದಾಗಿದೆ. ವಿಮಾನ ನಿಲ್ದಾಣ ಪ್ರವೇಶ ದ್ವಾರಗಳಲ್ಲಿ ಗುರುತಿನ ಚೀಟಿ ತಪಾಸಣೆ ನಿರ್ಬಂಧ, ಸಾಮಾಜಿಕ ಅಂತರದ ಅಗತ್ಯತೆ ಸೇರಿದಂತೆ ಭದ್ರತಾ ಏಜೆನ್ಸಿಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರು ಅನುಸರಿಸಬಹುದಾದ ಕ್ರಮಗಳನ್ನು ಸಹ ಕರಡು ಎಸ್‌ಒಪಿ ಸೂಚಿಸಿದೆ.

ವೈದ್ಯಕೀಯ ತುರ್ತುಸ್ಥಿತಿ ಹೊಂದಿರುವ ಯಾವುದೇ ಪ್ರಯಾಣಿಕರನ್ನು ವಿಮಾನದಲ್ಲಿ ಪ್ರತ್ಯೇಕಿಸಲು ವಿಮಾನದ ಮೂರು ಸಾಲುಗಳನ್ನು ಖಾಲಿ ಇರಿಸಲು ಸಲಹೆ ನೀಡಿದೆ. ವಿಮಾನಯಾನ ಸಂಸ್ಥೆ ಮತ್ತು ವಿಮಾನ ನಿಲ್ದಾಣ ನಿರ್ವಾಹಕರು ಸೇರಿ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ ಕರಡು ಎಸ್‌ಒಪಿ ತಯಾರಿಸಲಾಗಿದೆ. ಈ ಬಗ್ಗೆ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಗಳನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.