ETV Bharat / business

ರಕ್ಷಣಾ ಕ್ಷೇತ್ರದಲ್ಲಿ FDI ಮಿತಿ ಶೇ 74ಕ್ಕೇರಿಕೆ: ವಿದೇಶಿ ಕಂಪನಿಗಳಿಗೆ ಮೋದಿ ರತ್ನಗಂಬಳಿ

ಸರ್ಕಾರಿ ಕಾರ್ಯಸೂಚಿತ ಮಾರ್ಗದಲ್ಲಿ ವಿದೇಶಿ ಹೂಡಿಕೆದಾರರು ಆಯಾ ಸಚಿವಾಲಯ/ಇಲಾಖೆಯ ಪೂರ್ವಾನುಮತಿ ಪಡೆಯಬೇಕಾಗುತ್ತೆ. ಆದರೆ, ಸ್ವಯಂಚಾಲಿತ ಮಾರ್ಗದಲ್ಲಿ ಹೂಡಿಕೆದಾರರು ಬಂಡವಾಳ ಹೂಡಿದ ನಂತರ ಆರ್‌ಬಿಐಗೆ ತಿಳಿಸಬೇಕಾಗುತ್ತದೆ. ಇದು ಸರಳ ಹಾಗೂ ತ್ವರಿತ ಮಾರ್ಗವಾಗಿದೆ. ಅನಾವಶ್ಯಕವಾಗಿ ಸಚಿವಾಲಯ ಹಾಗೂ ಇಲಾಖೆಗಳ ನಡುವೆ ಫೈಲ್​ಗಳ ಓಡಾಟ ತಪ್ಪಿಸುತ್ತದೆ.

author img

By

Published : Aug 27, 2020, 8:44 PM IST

Modi
ಮೋದಿ

ನವದೆಹಲಿ: ಸ್ವಯಂಚಾಲಿತ ಮಾರ್ಗದ ಮೂಲಕ ರಕ್ಷಣಾ ಕ್ಷೇತ್ರದ ಸಲಕರಣೆಗಳ ಉತ್ಪಾದನೆಗೆ ಶೇ 74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅನುಮತಿ ನೀಡಲು ಕೇಂದ್ರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ 'ಆತ್ಮನಿರ್ಭರ ಭಾರತ ರಕ್ಷಣಾ ಉದ್ಯಮ ಔಟ್ರೀಚ್ ವೆಬ್​ನಾರ್​' ಉದ್ದೇಶಿಸಿ ಮಾತನಾಡಿದ ಮೋದಿ, ರಕ್ಷಣಾ ಕ್ಷೇತ್ರದಲ್ಲಿ ಸಲಕರಣೆಗಳ ಉತ್ಪಾದನೆ ಹೆಚ್ಚಿಸಲು, ಹೊಸ ತಂತ್ರಜ್ಞಾನ ಅಭಿವೃದ್ಧಿ ಮತ್ತು ರಕ್ಷಣಾ ಕ್ಷೇತ್ರದ ಖಾಸಗಿ ಉದ್ಯಮಿಗಳಿಗೆ ದೊಡ್ಡ ಪಾತ್ರ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ದಶಕಗಳಿಂದ ಭಾರತವು ಅತಿದೊಡ್ಡ ರಕ್ಷಣಾ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಅವಧಿಯಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿತ್ತು. 100 ವರ್ಷಗಳಿಗೆ ಬೇಕಾದಷ್ಟು ರಕ್ಷಣಾ ಉತ್ಪಾದನೆಯಂತಹ ವಾತಾವರಣ ವ್ಯವಸ್ಥೆ ಹೊಂದಿತ್ತು. ಆದರೆ, ಈ ಬಗ್ಗೆ ಹೆಚ್ಚಿನ ಗಮನಹರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಿಯ ರಕ್ಷಣಾ ಉದ್ಯಮ ಉತ್ತೇಜಿಸಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವಿವಿಧ ನೀತಿ ಹಾಗೂ ಉಪಕ್ರಮಗಳ ಬಗ್ಗೆ ವಿವರಿಸಿದ ಸಿಡಿಎಸ್ ರಾವತ್, ಹೊಸ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ಹೊರತರುವಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತನ್ನ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದರು.

ಆಗಸ್ಟ್ 9ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತವು 2024ರ ವೇಳೆಗೆ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿಗೆ ಅಗತ್ಯವಾದ ವಿಮಾನ, ಲಘು ಯುದ್ಧ ಹೆಲಿಕಾಪ್ಟರ್‌, ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆ, ಕ್ರೂಸ್ ಕ್ಷಿಪಣಿ, ಸೋನಾರ್ ಸಿಸ್ಟಮ್ ಸೇರಿದಂತೆ 101 ಸಲಕರಣೆಗಳ ಆಮದು ನಿಲ್ಲಿಸುವುದಾಗಿ ಘೋಷಿಸಿದ್ದರು. ಡಿಆರ್‌ಡಿಒ 108 ಮಿಲಿಟರಿ ಉಪಕರಣಗಳನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಿದೆ ಎಂದಿದ್ದರು.

2018ರ ಜುಲೈನಲ್ಲಿ ಕೇಂದ್ರ ಸರ್ಕಾರವು ಸ್ವಯಂಚಾಲಿತ ಮಾರ್ಗದಲ್ಲಿ ಶೇ 49ರಷ್ಟು ಎಫ್‌ಡಿಐಗೆ ಅವಕಾಶ ನೀಡುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಾನದಂಡಗಳನ್ನು ಸಡಿಲಗೊಳಿಸಿತ್ತು. ಭಾರತವು ತನ್ನ ಮಿಲಿಟರಿ ಯಂತ್ರಾಂಶದ ಶೇ 70ರಷ್ಟು ಆಮದು ಮಾಡಿಕೊಳ್ಳುವುದರಿಂದ ದೇಶಿಯ ಉದ್ಯಮದ ಸಾಮರ್ಥ್ಯ ಹೆಚ್ಚಿಸುವಂತಹ ಮಹತ್ವಾಕಾಂಕ್ಷೆ ಗುರಿ ಇರಿಸಿಕೊಂಡಿದೆ.

ಡಿಪಿಐಐಟಿ ಅಂಕಿಅಂಶಗಳ ಪ್ರಕಾರ, ಭಾರತದ ರಕ್ಷಣಾ ಉದ್ಯಮವು ಏಪ್ರಿಲ್ 2000 ಮತ್ತು ಮಾರ್ಚ್ 2020ರ ಅವಧಿಯಲ್ಲಿ ಎಫ್‌ಡಿಐ ಇಕ್ವಿಟಿ ಒಳಹರಿವು 9.52 ಮಿಲಿಯನ್ ಡಾಲರ್​ (56.88 ಕೋಟಿ ರೂ.) ಪಡೆದಿದೆ.

ಸರ್ಕಾರಿ ಕಾರ್ಯಸೂಚಿತ ಮಾರ್ಗದಲ್ಲಿ ವಿದೇಶಿ ಹೂಡಿಕೆದಾರರು ಆಯಾ ಸಚಿವಾಲಯ / ಇಲಾಖೆಯ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಸ್ವಯಂಚಾಲಿತ ಮಾರ್ಗದಲ್ಲಿ ಹೂಡಿಕೆದಾರರು ಬಂಡವಾಳ ಹೂಡಿದ ನಂತರ ಆರ್‌ಬಿಐಗೆ ತಿಳಿಸಬೇಕಾಗುತ್ತದೆ. ಇದು ಸರಳ ಹಾಗೂ ತ್ವರಿತ ಮಾರ್ಗವಾಗಿದೆ. ಅನವಶ್ಯಕವಾಗಿ ಒಂದು ಸಚಿವಾಲಯ ಹಾಗೂ ಇಲಾಖೆಗಳ ನಡುವೆ ಫೈಲ್​ಗಳ ಓಡಾಟ ತಪ್ಪಿಸುತ್ತದೆ. ಭಾರತಕ್ಕೆ ಒಟ್ಟು ಎಫ್‌ಡಿಐ 2019-20ರಲ್ಲಿ ಶೇ 18ರಷ್ಟು ಏರಿಕೆ ಕಂಡು 73.45 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.