ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾಹಿತಿ ತಂತ್ರಜ್ಞಾನದ ಹಾರ್ಡ್ವೇರ್ಗೆ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಅನುಮೋದನೆ ನೀಡಿತು.
ಈ ಯೋಜನೆ ಅಡಿಯಲ್ಲಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳ ಒಟ್ಟು ಮಾರಾಟದ ಮೇಲೆ (ಮೂಲ ವರ್ಷ ಅಂದರೆ 2019-20) ಅಲ್ಲಿ ವಿಸ್ತರಿತ ಪ್ರೋತ್ಸಾಹ ಶೇ 4ರಿಂದ ಶೇ 2ರಷ್ಟು/ಶೇ 1ರಷ್ಟು ಇರಲಿವೆ. ನಿರ್ದಿಷ್ಟ ವಲಯದ ಅರ್ಹ ಕಂಪನಿಗಳಿಗೆ ನಾಲ್ಕು ವರ್ಷಗಳವರೆಗೆ ಇದು ಲಭ್ಯವಾಗಲಿದೆ.
ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಉದ್ಯಮಗಳ ಖಾಸಗೀಕರಣಕ್ಕೆ ಬದ್ಧ: ಪ್ರಧಾನಿ ಮೋದಿ
ಲ್ಯಾಪ್ ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಪಿಸಿ ಮತ್ತು ಸರ್ವರ್ಗಳು ಸೇರಿದಂತೆ ಐಟಿ ಹಾರ್ಡ್ ವೇರ್ ಉತ್ಪಾದನಾ ಕ್ಷೇತ್ರದ ಐದು ಪ್ರಮುಖ ಜಾಗತಿಕ ಕಂಪನಿಗಳು ಮತ್ತು ಹತ್ತು ದೇಶೀಯ ಕಂಪನಿಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗುವ ನಿರೀಕ್ಷೆ ಇದೆ. ಪ್ರಸ್ತುತ ಬಹುತೇಕ ಈ ಉತ್ಪನ್ನಗಳನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಇದು ಅತ್ಯಂತ ಪ್ರಮುಖವಾಗಿದೆ.