ETV Bharat / business

ಇಂಗ್ಲೆಂಡ್​ನ ಹಣಕಾಸು ಸಚಿವನಾದ ನಾರಾಯಣ ಮೂರ್ತಿ ಅಳಿಯನ ಸಾಧನೆ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು..! - UK Finance Minister

ಇಂಗ್ಲೆಂಡ್​ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ನೂತನ ಹಣಕಾಸು ಮಂತ್ರಿಯಾಗಿ ನೇಮಿಸಿಕೊಂಡಿದ್ದಾರೆ.

Rishi Sunak
ರಿಷಿ ಸುನಕ್
author img

By

Published : Feb 13, 2020, 10:01 PM IST

Updated : Feb 13, 2020, 10:48 PM IST

ಲಂಡನ್​: ಇಂಗ್ಲೆಂಡ್​ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ನೂತನ ಹಣಕಾಸು ಮಂತ್ರಿಯಾಗಿ ನೇಮಿಸಿಕೊಂಡಿದ್ದಾರೆ. ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯನಾದ ಸುನಕ್​ ಬಗ್ಗೆ ನೀವು ತಿಳಿಯಬೇಕಾದ ಐದು ಸಂಗತಿಗಳು ಇಲ್ಲಿವೆ.

ಜನನ ಮತ್ತು ಕುಟುಂಬ
ಸುನಿಕ್ ಅವರು 1980ರ ಮೇ 12ರಂದು ಸೌತಾಂಪ್ಟನ್​ನಲ್ಲಿ ಜನಿಸಿದ್ದರು. ಅವರ ಪೋಷಕರು ಪಂಜಾಬ್​ ಮೂಲದವರಾಗಿದ್ದಾರೆ. ಸುನಕ್ ಅವರು ಭಾರತೀಯ ಬಿಲಿಯನೇರ್/ ಇನ್ಫೋಸಿಸ್ ಲಿಮಿಟೆಡ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುನಕ್ ಅವರ ತಂದೆ ವೈದ್ಯರಾಗಿದ್ದು, ಅವರ ತಾಯಿ ಔಷಧಕಾರರಾಗಿದ್ದರು.

ಶಿಕ್ಷಣ
ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಓದಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗುವ ಮೊದಲು ಅವರು ಪ್ರತಿಷ್ಠಿತ ವಿಂಚೆಸ್ಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಅಮೆರಿಕ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದಿದ್ದಾರೆ.

ರಾಜಕೀಯ ಜೀವನ
ಸುನಕ್ ಅವರು ಇಂಗ್ಲೆಂಡ್​ನಲ್ಲಿ ಬ್ರೆಕ್ಸಿಟ್ ಪರ ಪ್ರಚಾರ ನಡೆಸಿದ ಪ್ರಮುಖರಲ್ಲಿ ಒಬ್ಬರು. ಎಲ್ಲಾ ಮೂರು ಸಂದರ್ಭಗಳಲ್ಲಿ ಮಾಜಿ ಪ್ರಧಾನಿ ಥೆರೆಸಾ ಮೇ ಅವರ ಒಪ್ಪಂದಕ್ಕೆ ಮತ ಚಲಾಯಿಸಿದರು. ಬೋರಿಸ್ ಜಾನ್ಸನ್ ಅವರ ಆರಂಭಿಕ ಬೆಂಬಲಿಗರಲ್ಲಿ ಇವರೂ ಒಬ್ಬರಾಗಿದ್ದರು. ಬೆಂಬಲ ನೀಡುವ ವೇಳೆ ಹಲವಾರು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಖಜಾನೆಯ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು, ಸುನಕ್ ಅವರು 2018ರ ಜನವರಿಯಿಂದ 2019ರ ಜುಲೈ ವರೆಗೆ ವಸತಿ, ಸಮುದಾಯ ಮತ್ತು ಸ್ಥಳೀಯ ಸರ್ಕಾರ ಸಚಿವಾಲಯದಲ್ಲಿ ಸಂಸದೀಯ ಅಧೀನ ಸೆಕ್ರೆಟರಿಯಾಗಿದ್ದರು.

ಹವ್ಯಾಸಗಳು
ಸುನಕ್ ಫಿಟ್​​ನೆಸ್​ ಪ್ರಜ್ಞೆ ಹೊಂದಿದ್ದಾರೆ. ಕ್ರಿಕೆಟ್ ಮತ್ತು ಫುಟ್ಬಾಲ್ ಸಹ ಆಡುತ್ತಾರೆ ಮತ್ತು ಚಲನಚಿತ್ರಗಳನ್ನು ವೀಕ್ಷಿಸುವುದು ಸಹ ಅವರಿಗೆ ಅಚ್ಚುಮೆಚ್ಚು.

ಭಗವದ್ಗೀತೆ ಓದುವುದು ಅಚ್ಚುಮೆಚ್ಚು
2017ರಲ್ಲಿ ಬ್ರಿಟನ್​ನಲ್ಲಿ ನಡೆದ ಅವಧಿಗೆ ಮುನ್ನವೇ ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಾಕ್ ಈ ಹಿಂದಿಗಿಂತ ಹೆಚ್ಚು ಮತಗಳ ಅಂತರದಿಂದ ಚುನಾಯಿತರಾದರು. ಆಗ ಅವರು ಸಂಸದರಾಗಿ ಭಗವದ್ಗೀತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

Intro:Body:Conclusion:
Last Updated : Feb 13, 2020, 10:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.