ನವದೆಹಲಿ: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಫವಿಪಿರಾವಿರ್ ಆಂಟಿವೈರಲ್ ಮಾತ್ರೆಗಳ ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತದ ಔಷಧ ಮಹಾನಿಯಂತ್ರಕರಿಂದ (ಡಿಸಿಜಿಐ) ಅನುಮೋದನೆ ಪಡೆದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಗ್ಲೇನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಪಾತ್ರವಾಗಿದೆ.
ಕ್ರಿಯಾಶೀಲ ಔಷಧೀಯ ಪದಾರ್ಥಗಳ (ಎಪಿಐ) ಮತ್ತು ಉತ್ಪನ್ನದ ಸೂತ್ರೀಕರಣಗಳನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿದೊಡನೆ ಕಂಪನಿಯು ಡಿಸಿಜಿಐ ಜೊತೆ ಕ್ಲಿನಿಕಲ್ ಪ್ರಯೋಗಗಳಿಗೆ ತನ್ನ ಉತ್ಪನ್ನ ದಾಖಲು ಮಾಡಿತು. ಸಾಧಾರಣ ರೋಗಿಗಳ ಮೇಲೆ ಪ್ರಯೋಗಕ್ಕೆ ಡಿಜಿಸಿಐ ಅನುಮೋದನೆ ನೀಡಿದೆ ಎಂದು ಗ್ಲೇನ್ಮಾರ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಕೋವಿಡ್-19 ರೋಗಿಗಳ ಮೇಲೆ ಪ್ರಯೋಗ ಆರಂಭಿಸಲು ನಿಯಂತ್ರಕರಿಂದ ಅನುಮೋದನೆ ಪಡೆದಿರುವ ಭಾರತದ ಮೊದಲ ಔಷಧೀಯ ಕಂಪನಿ ಎಂಬ ಹೆಗ್ಗಳಿಕೆಗೆ ಮುಂಬಯಿ ಮೂಲದ ಗ್ಲೇನ್ಮಾರ್ಕ್ ಪಾಲಾಗಿದೆ.
ಇನ್ ಫ್ಲುಯೆಂಜಾ ವೈರಸ್ ವಿರುದ್ಧ ಫವಿಪಿರಾವಿರ್ ಸಮರ್ಪಕವಾಗಿ ಫಲಿತಾಂಶ ಪ್ರದರ್ಶಿಸಿದೆ. ನಿವೆಲ್ ಇನ್ ಫ್ಲುಯೆಂಜಾ ವೈರಸ್ ಸೋಂಕು ನಿವಾರಕ ಚಿಕಿತ್ಸೆಗೆ ಜಪಾನಿನಲ್ಲಿ ಅನುಮೋದನೆ ಸಹ ದೊರತೆ.
ಚಿಕಿತ್ಸೆಯ ಅವಧಿಯು ಗರಿಷ್ಟ 14 ದಿನಗಳಾಗಲಿದ್ದು, ಒಟ್ಟು ಅಧ್ಯಯನ ಅವಧಿಯು ಗರಿಷ್ಠ 28 ದಿನಗಳವರೆಗೆ ಆಗಬಹುದು ಎಂದಿದೆ. ಕಳೆದ ಕೆಲವು ತಿಂಗಳಲ್ಲಿ ಕೋವಿಡ್-19ರ ರೋಗ ನಿವಾರಿಕ ಲಸಿಕೆಯ ಪ್ರಯೋಗವು ಚೀನಾ, ಜಪಾನ್, ಜರ್ಮನಿ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಆರಂಭಗೊಂಡಿವೆ.