ETV Bharat / business

ಡಿಜಿಟಲ್​ ಇಂಡಿಯಾ ಜಗತ್ತಿನಲ್ಲಿ ಭಾರತವನ್ನು ಎದ್ದು ಕಾಣುವಂತೆ ಮಾಡಿದೆ: ಗೇಟ್ಸ್​ ಬಳಿಕ ನಾಡೆಲ್ಲ ಬಣ್ಣನೆ

ಕಾರ್ನೆಗಿ ಇಂಡಿಯಾ 2020 ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆಯಲ್ಲಿ ಮಾತನಾಡಿದ ನಾಡೆಲ್ಲ, ಡಿಜಿಟಲ್ ಇಂಡಿಯಾ ಚೌಕಟ್ಟು ಭಾರತವನ್ನು ವಿಶ್ವದ ಇತರ ಭಾಗಗಳಿಂದ ಎದ್ದು ಕಾಣುವಂತೆ ಮಾಡಿದೆ. ಈಗ ಇಂಡಿಯಾ ಸ್ಟಾಕ್ ಬಹಳ ಪ್ರಭಾವಶಾಲಿಯಾಗಿದೆ ಎಂದು ಹೇಳಿದರು.

author img

By

Published : Dec 18, 2020, 5:51 PM IST

Updated : Dec 18, 2020, 6:04 PM IST

Satya Nadella
ಸಿಇಒ ಸತ್ಯ ನಾಡೆಲ್ಲಾ

ನ್ಯೂಯಾರ್ಕ್​: ಮೈಕ್ರೋಸಾಫ್ಟ್ ಸಹ - ಸಂಸ್ಥಾಪಕ ಬಿಲ್ ಗೇಟ್ಸ್ ನಂತರ ಈಗ ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಅವರು ಸಾರ್ವಜನಿಕ ವೇದಿಕೆಯಲ್ಲಿ ಭಾರತದ 'ಡಿಜಿಟಲ್ ಇಂಡಿಯಾ' ಅಭಿಯಾನ ಶ್ಲಾಘಿಸಿದ್ದಾರೆ.

ಕಾರ್ನೆಗಿ ಇಂಡಿಯಾ 2020 ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆಯಲ್ಲಿ ಮಾತನಾಡಿದ ನಾಡೆಲ್ಲಾ, ಡಿಜಿಟಲ್ ಇಂಡಿಯಾ ಚೌಕಟ್ಟು ಭಾರತವನ್ನು ವಿಶ್ವದ ಇತರ ಭಾಗಗಳಿಂದ ಎದ್ದು ಕಾಣುವಂತೆ ಮಾಡಿದೆ. ಈಗ ಇಂಡಿಯಾ ಸ್ಟಾಕ್ ಬಹಳ ಪ್ರಭಾವಶಾಲಿಯಾಗಿದೆ ಎಂದು ಹೇಳಿದರು.

ಬಿಲ್ ಗೇಟ್ಸ್ ಯಾವಾಗಲೂ ಭಾರತದಲ್ಲಿ ಅಭಿವೃದ್ಧಿಪಡಿಸಿದ್ದನ್ನು ನಾವು ಹೇಗೆ ತೆಗೆದುಕೊಳ್ಳಬಹುದು? ಅದನ್ನು ಎಲ್ಲ ದೇಶಗಳಿಗೆ ಹೇಗೆ ಸಂಗ್ರಹಿಸಬಹುದು ಎಂಬುದರ ಕುರಿತು ಮಾತನಾಡುತ್ತಿರುತ್ತಾರೆ ಎಂದು ಮೈಕ್ರೋಸಾಫ್ಟ್ ಸಿಇಒ ಹೇಳಿದ್ದಾರೆ.

30 ಕೋಟಿ ಜನರಿಗೆ ಮೊದಲ ಹಂತದ ಲಸಿಕೆ ವಿತರಣೆ: ಸರ್ಕಾರ ಖರ್ಚು ಮಾಡುವ ಹಣವೆಷ್ಟು ಗೊತ್ತೇ?

ಡಿಜಿಟಲ್ ಇಂಡಿಯಾ ಚೌಕಟ್ಟು ಒಂದು ಪ್ರೇರೇಪಿತ ಆಯ್ಕೆಯಾಗಿದ್ದು, ಸಾರ್ವಜನಿಕ ಮೂಲಗಳ ಮೂಲಸೌಕರ್ಯಗಳಿಗೆ ಸರ್ಕಾವು ಆದ್ಯತೆ ನೀಡುತ್ತಿದೆ. ಇದು ಕಂಪನಿಗಳಿಗೆ ಮತ್ತು ದೇಶದ ನಾಗರಿಕರಿಗೆ ಸಾಕಷ್ಟು ನೆರವಾಗುತ್ತಿದೆ ಎಂದು ನಾಡೆಲ್ಲಾ ಹೇಳಿದರು.

2021ರ ವೇಳೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಒಂದು ಮಿಲಿಯನ್ ಜನರಿಗೆ ತರಬೇತಿ ನೀಡಲು ಮೈಕ್ರೋಸಾಫ್ಟ್‌ನ ನಾಸ್ಕಾಮ್‌ನ ಸಹಭಾಗಿತ್ವದ ಬಗ್ಗೆಯೂ ಮಾತನಾಡಿದ್ದು, ತರಬೇತಿ ಕಾರ್ಯಕ್ರಮವು ಕೇವಲ ಇಂಜಿನಿಯರ್‌ಗಳಿಗೆ ಮಾತ್ರವಲ್ಲದೇ ಮುಂಚೂಣಿ ಕೆಲಸಗಾರರಿಗೂ ಒಳಗೊಳ್ಳಲಿದೆ. ಇದರಿಂದಾಗಿ ಅವರು ಎಐ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.

ಭಾರತವು 4ಜಿ ಸೇವೆಯ ಲಾಭ ಪಡೆದಿದೆ, ಅದು 5ಜಿ ಅನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪ್ರತಿ ಗ್ರಾಮೀಣ ಸಮುದಾಯವು ಬ್ರಾಡ್‌ಬ್ಯಾಂಡ್‌ಗೆ ಪ್ರವೇಶ ಹೊಂದಿದೆಯೇ ಎಂಬುದನ್ನು ಅರಿತುಕೊಳ್ಳಬೇಕು. ಅದನ್ನು ಖಚಿತಪಡಿಸಿಕೊಳ್ಳಲು ನಾವು ಯಾವುದೇ ಲಾಭದ ಆಸೆಯೂ ಇಲ್ಲದೇ ಕೆಲಸ ಮಾಡುತ್ತಿದ್ದೇವೆ ಎಂದರು.

Last Updated : Dec 18, 2020, 6:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.