ETV Bharat / business

ರಿಲಯನ್ಸ್​ ಜಿಯೋಗೆ ಟಿಕ್​​ಟಾಕ್​​​​​ ಮಾರಾಟವಾಗುವ ಸಾಧ್ಯತೆ

ಚೀನಾ ಮೂಲದ ಬೈಟ್‌ಡ್ಯಾನ್ಸ್ ಕಂಪನಿ ಭಾರತದಲ್ಲಿನ ತನ್ನ ವ್ಯವಹಾರವನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ByteDance in talks with Reliance Jio to sell its India biz
ರಿಲಯನ್ಸ್ ಜಿಯೋಗೆ ಮಾರಾಟ ಮಾಡಲಿದೆಯಂತೆ ಬೈಟ್‌ಡ್ಯಾನ್ಸ್
author img

By

Published : Aug 13, 2020, 1:43 PM IST

ನವದೆಹಲಿ: ಅಮೆರಿಕದನಲ್ಲಿ ಬೈಟ್‌ಡ್ಯಾನ್ಸ್ ಹೋರಾಟ ಮುಂದುವರೆದಿರುವಂತೆ, ಟಿಕ್‌ಟಾಕ್ ಪರಿಚಯಿಸಿದ ಚೀನಾ ಮೂಲದ ಶಾರ್ಟ್ - ವಿಡಿಯೋ ತಯಾರಿಕೆ ಕಂಪನಿಯು ಭಾರತದಲ್ಲಿ ತನ್ನ ವ್ಯವಹಾರವನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡಬಹುದೆಂದು ವರದಿ ಆಗಿದೆ.

ಟಿಕ್​ ಟಾಕ್​ ಭಾರತದಲ್ಲಿ ಸುಮಾರು 22 ಸಾವಿರ ಕೋಟಿ ರೂ ಮೌಲ್ಯದ ವ್ಯವಹಾರ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಮಾರಾಟ ತೀವ್ರ ಕುತೂಹಲ ಕೆರಳಿಸಿದೆ. ಆರಂಭಿಕ ಹಂತದ ಚರ್ಚೆಗಳೊಂದಿಗೆ ಎರಡು ಕಂಪನಿಗಳು ಕಳೆದ ತಿಂಗಳ ಕೊನೆಯಲ್ಲಿ ಪ್ರಾರಂಭಿಸಿದ್ದು, ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ. ಬೈಟ್‌ಡ್ಯಾನ್ಸ್ ಅಥವಾ ರಿಲಯನ್ಸ್ ಜಿಯೋ ಈ ವರದಿಯ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್​ನಲ್ಲಿ ಕೆಲಸ ಮಾಡುವ ಹಲವಾರು ಉದ್ಯೋಗಿಗಳು ಅಪ್ಲಿಕೇಶನ್‌ನ ನಿಷೇಧದಿಂದಾಗಿ ಬೇರೆಡೆ ಅವಕಾಶಗಳನ್ನು ಹುಡುಕುತ್ತಿರುವ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಬೈಟ್‌ಡ್ಯಾನ್ಸ್ ಭಾರತದಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಹೊಂದಿದ್ದು, ಹೊಸ ನೇಮಕಾತಿಗೆ ವಿರಾಮ ಹಾಕಿದೆ.

ರಾಷ್ಟ್ರೀಯ ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ 58 ಇತರ ಅಪ್ಲಿಕೇಶನ್‌ಗಳೊಂದಿಗೆ ಟಿಕ್‌ಟಾಕ್ ಅನ್ನು ಭಾರತ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ, ಬೈಟ್‌ಡ್ಯಾನ್ಸ್‌ನ ಸಿಒಒ ಆಗಿರುವ ಟಿಕ್‌ಟಾಕ್ ಸಿಇಒ ಕೆವಿನ್ ಮೇಯರ್, ನೌಕರರು ಕಂಪನಿಯ ಅತಿದೊಡ್ಡ ಶಕ್ತಿ ಅವರ ಯೋಗಕ್ಷೇಮವು ಸಂಸ್ಥೆಯ ಉನ್ನತ ಆದ್ಯತೆ ಎಂದು ಹೇಳಿದ್ದರು.

ನಾವು ಹೆಮ್ಮೆಪಡುವಂತಹ ಸಕಾರಾತ್ಮಕ ಅನುಭವಗಳು ಮತ್ತು ಅವಕಾಶಗಳನ್ನು ಪುನಃಸ್ಥಾಪಿಸಲು ನಮ್ಮ ಶಕ್ತಿಯಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು 2,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಭರವಸೆ ನೀಡಿದ್ದೇವೆ ಎಂದು ಭಾರತದ ಸಿಬ್ಬಂದಿಯನ್ನು ಉದ್ದೇಶಿಸಿ ಹೇಳಿದ್ದರು.

ವರದಿಯ ಪ್ರಕಾರ, ಮೈಕ್ರೋಸಾಫ್ಟ್ ಭಾರತ ಮತ್ತು ಯುರೋಪ್​ನಲ್ಲಿ ತನ್ನ ಸೇವೆ ಸೇರಿದಂತೆ ಟಿಕ್​ಟಾಕ್​ನ ಸಂಪೂರ್ಣ ಜಾಗತಿಕ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.