ನವದೆಹಲಿ: ಬಿಲಿಯನೇರ್ ಗೌತಮ್ ಅದಾನಿ ಅವರು ರಾಷ್ಟ್ರೀಯ ವಾಹಕ ಸಂಸ್ಥೆ ಏರ್ ಇಂಡಿಯಾ ಖರೀದಿಸಲು ಬಿಡ್ಡಿಂಗ್ ಸಲ್ಲಿಸಲಿದ್ದಾರೆ. ಮುಂದಿನ ತಿಂಗಳು ಖರೀದಿಯ ಆಸಕ್ತಿ (ಎಇಒ) ತೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಷ್ಟದಲ್ಲಿರುವ ರಾಷ್ಟ್ರೀಯ ವಾಹಕದಲ್ಲಿನ ತನ್ನ ಸಂಪೂರ್ಣ ಹಿಡುವಳಿಯನ್ನು ಮಾರಾಟ ಮಾಡಲು ಕೆಂದ್ರ ಸರ್ಕಾರ ನಿರ್ಧರಿಸಿದೆ. ಭೂ ನಿರ್ವಹಣಾ ಘಟಕದಲ್ಲಿ 50 ಪ್ರತಿಶತದಷ್ಟು ಮಾರಾಟ ಮಾಡಲು ಅದು ಮುಂದಾಗಿದೆ. ಇಒಐ ಸಲ್ಲಿಕೆಗೆ ಮಾರ್ಚ್ 17 ಕೊನೆಯ ದಿನವಾಗಿದೆ.
ಅದಾನಿ ಗ್ರೂಪ್‌ನ ವಿಲೀನಗಳು ಮತ್ತು ಸ್ವಾಧೀನ (ಎಂ ಆ್ಯಂಡ್ ಎ) ತಂಡವು ಏರ್ ಇಂಡಿಯಾ ಬಿಡ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಆಸಕ್ತಿಯು ಪ್ರಾಥಮಿಕ ಹಂತದಲ್ಲಿದೆ ಎಂದು ಮೂಲಗಳು ಹೇಳಿವೆ.
ಅದಾನಿ ಗ್ರೂಪ್ ಬಿಡ್ಡಿಂಗ್ಗೆ ಎಂಟರ್ ಆಗುತ್ತಿದ್ದಂತೆ ಖರೀದಿ ಆಸಕ್ತಿಗೆ ಟಾಟಾ, ಹಿಂದೂಜಾ, ಇಂಡಿಗೋ ಮತ್ತು ನ್ಯೂಯಾರ್ಕ್ ಮೂಲದ ಫಂಡ್ ಇಂಟರ್ಪ್ಸ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಖರೀದಿಗೆ ಆಸಕ್ತಿ ತಳದಿವೆ. ಒಂದು ವೇಳೆ, ಈ ರೇಸ್ನಲ್ಲಿ ಅದಾನಿ ಗೆದ್ದರೆ, ಅದು ಭಾರತದ ದೇಶೀಯ ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.