ನವದೆಹಲಿ: ರಿಲಯನ್ಸ್ ಜಿಯೋ ಫಿನ್‌ಲ್ಯಾಂಡ್‌ನ ಔಲು ವಿಶ್ವವಿದ್ಯಾನಿಲಯದೊಂದಿಗೆ 6ಜಿ ಮತ್ತು ಇತರ ಸಂಶೋಧನೆಗಳಿಗೆ ಸಂಬಂಧಪಟ್ಟಂತೆ ಒಪ್ಪಂದ ಮಾಡಿಕೊಂಡಿದ್ದು, ಎಸ್ಟೋನಿಯಾದಲ್ಲಿರುವ ತನ್ನ ಜಿಯೋ ಎಸ್ಟೋನಿಯಾ ಒಯು ಸಂಸ್ಥೆಯ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ಡಿಜಿಟಲ್ ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಜಿಯೋ ಮುಂದಾಗಿದ್ದು, ಗ್ರಾಹಕ ಬಳಕೆ ಸಂಬಂಧವೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಯೋ ಎಸ್ಟೋನಿಯಾದ ಸಿಇಒ ತಾವಿ ಕೊಟ್ಕಾ ಭಾರತದಲ್ಲಿ ಜಿಯೋ 400 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಡಿಜಿಟಲ್ ಸೇವೆಗಳು ಮತ್ತು ಇತರ ವಿಚಾರಗಳ ಕುರಿತಂತೆ ಜಿಯೋ ಸೇವೆಯ ಬಗ್ಗೆ ಅಲ್ಲಿನ ಚಂದಾದಾರರು ತೃಪ್ತರಾಗಿದ್ದಾರೆ ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.
ಇದರ ಜೊತೆಗೆ ಔಲು ವಿಶ್ವವಿದ್ಯಾನಿಲಯದೊಂದಿಗಿನ ಈ ಸಹಯೋಗದೊಂದಿಗೆ, ನಾವು ಭವಿಷ್ಯದಲ್ಲಿ ಇನ್ನಷ್ಟು ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಜಿಯೋ ಎಸ್ಟೋನಿಯಾದ ಸಿಇಒ ತಾವಿ ಕೊಟ್ಕಾ ಭರವಸೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ವೈಮಾನಿಕ ಮತ್ತು ಬಾಹ್ಯಾಕಾಶ ಸಂವಹನ,ಶಿಕ್ಷಣ, ರಕ್ಷಣಾ ವಲಯ, ವಾಹನ, ಬಿಳಿ ಸರಕುಗಳು, ಕೈಗಾರಿಕಾ ಯಂತ್ರೋಪಕರಣಗಳು, ಗ್ರಾಹಕ ಸರಕುಗಳು ಮುಂತಾದ ವಲಯಗಳಲ್ಲಿ 6ಜಿ ಅಳವಡಿಕೆಗೆ ಈ ಒಪ್ಪಂದ ಮಹತ್ವದಿಂದ ಕೂಡರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿಯ ಪರೀಕ್ಷೆ ಯಶಸ್ವಿ