ETV Bharat / business

ಕೊರೊನಾ ವರ್ಷದಲ್ಲೂ 13.41 ಶತಕೋಟಿ ಡಾಲರ್ ಗಳಿಸಿದ ಭಾರತೀಯ ಐಟಿ ಸೇವೆ

ಐಟಿ ಮತ್ತು ವ್ಯವಹಾರ ಸೇವಾ ಮಾರುಕಟ್ಟೆಯಲ್ಲಿ ಐಟಿ ಸೇವೆಗಳ ಮಾರುಕಟ್ಟೆ ಶೇ 77.06ರಷ್ಟು ಕೊಡುಗೆ ನೀಡಿದೆ. 2020ರಲ್ಲಿ ಶೇ 5.97ರಷ್ಟು ಏರಿಕೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶದ ವ್ಯವಹಾರಗಳ ಮೇಲೆ ಪ್ರಭಾವ ಬೀರಿರುವುದರಿಂದ ಬೆಳವಣಿಗೆಯ ದರ ಕಡಿಮೆಯಾಗಿದೆ.

author img

By

Published : May 18, 2021, 7:15 PM IST

IT Services
IT Services

ನವದೆಹಲಿ: ಭಾರತೀಯ ಐಟಿ ಮತ್ತು ವ್ಯವಹಾರ ಸೇವಾ ಮಾರುಕಟ್ಟೆಯು 2020ರಲ್ಲಿ 13.41 ಬಿಲಿಯನ್ ಡಾಲರ್ ಮೌಲ್ಯದಷ್ಟಾಗಿದೆ. ಇದು 2019ರಲ್ಲಿನ ಶೇ 8.43ರ ಬೆಳವಣಿಗೆಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ 5.41ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಅಂತಾ ರಾಷ್ಟ್ರೀಯ ಡೇಟಾ ಕಾರ್ಪೊರೇಷನ್ (ಐಡಿಸಿ) ವರದಿ ತಿಳಿಸಿದೆ.

ಐಟಿ ಮತ್ತು ವ್ಯವಹಾರ ಸೇವಾ ಮಾರುಕಟ್ಟೆಯಲ್ಲಿ ಐಟಿ ಸೇವೆಗಳ ಮಾರುಕಟ್ಟೆ ಶೇ 77.06ರಷ್ಟು ಕೊಡುಗೆ ನೀಡಿದೆ. 2020ರಲ್ಲಿ ಶೇ 5.97ರಷ್ಟು ಏರಿಕೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶದ ವ್ಯವಹಾರಗಳ ಮೇಲೆ ಪ್ರಭಾವ ಬೀರಿರುವುದರಿಂದ ಬೆಳವಣಿಗೆಯ ದರ ಕಡಿಮೆಯಾಗಿದೆ.

ಐಟಿ ಮತ್ತು ಬಿಸಿನೆಸ್ ಸರ್ವೀಸಸ್ ಮಾರುಕಟ್ಟೆ 2020-2025ರ ನಡುವೆ ಶೇ 7.18ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್​​ನಿ) ವೃದ್ಧಿಯಾಗಲಿದೆ. 2025ರ ಅಂತ್ಯದ ವೇಳೆಗೆ 18.97 ಬಿಲಿಯನ್ ಡಾಲರ್ ತಲುಪಲಿದೆ ಎಂದು ಐಡಿಸಿ ತಿಳಿಸಿದೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್: 2021ರ 4ನೇ ತ್ರೈಮಾಸಿಕದಲ್ಲಿ 7,585 ಕೋಟಿ ರೂ. ನಿವ್ವಳ ನಷ್ಟ

2020ರ ದ್ವಿತೀಯಾರ್ಧದಲ್ಲಿ ಕ್ಲೌಡ್​ ಅಳವಡಿಕೆ ಮತ್ತು ಐಟಿ ಭದ್ರತೆಯ ಹೊರತಾಗಿ, ಉದ್ಯಮಗಳು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಸಂವಾದಾತ್ಮಕ ಎಐ ಮತ್ತು ಚಾಟ್‌ ಬಾಟ್‌ಗಳು, ವಂಚನೆ ತಡೆಗಟ್ಟುವಿಕೆ, ಬೇಡಿಕೆ ಮುನ್ಸೂಚನೆ ಮುಂತಾದ ಪರಿಹಾರಗಳಿಗೆ ಮಾರ್ಗೋಪಾಯ ಕಂಡುಕೊಳ್ಳಲು ವಿಶ್ಲೇಷಣೆಗಳಂತಹ ತಂತ್ರಜ್ಞಾನಗಳಲ್ಲಿ ಹೆಚ್ಚು ಹೂಡಿಕೆ ಮಾಡಲು ಪ್ರಾರಂಭಿಸಿದವು. ಇದು ಸಂಸ್ಥೆಗಳ ವ್ಯವಹಾರ ಕಾರ್ಯಾಚರಣೆ ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ಐಡಿಸಿ ಇಂಡಿಯಾದ ಐಟಿ ಸೇವೆಗಳ ಹಿರಿಯ ಮಾರುಕಟ್ಟೆ ವಿಶ್ಲೇಷಕ ಹರೀಶ್ ಕೃಷ್ಣಕುಮಾರ್ ಹೇಳಿದರು.

ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ ಪ್ರತಿಕೂಲ ಪರಿಣಾಮ ಬೀರಿದ ಉತ್ಪಾದನೆಯಂತಹ ಕ್ಷೇತ್ರಗಳು ಸಹ ಕ್ಲೌಡ್​ ಆಧಾರಿತ ಅಪ್ಲಿಕೇಷನ್‌ಗಳು ಮತ್ತು ಯಾಂತ್ರೀಕೃತಗೊಂಡ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದವು. ಉದ್ಯಮದ ಡಿಜಿಟಲ್ ಗುರಿಗಳನ್ನು ಬೆಂಬಲಿಸಲು 2021ರ ವ್ಯವಹಾರದ ಸ್ಥಿತಿಸ್ಥಾಪಕತ್ವ ಯೋಜನೆಗಳಿಗೆ ಮತ್ತು ತಂತ್ರಜ್ಞಾನಗಳಲ್ಲಿನ ಹೂಡಿಕೆಗಳನ್ನು ವೇಗಗೊಳಿಸಲು ದಾರಿ ಮಾಡಿಕೊಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.