ETV Bharat / business

ಅಪಾಚೆ ಹೆಲಿಕಾಪ್ಟರ್‌ಗಳಿಗೆ ಸಮನಾದ ಸೇನಾ ಹೆಲಿಕಾಪ್ಟರ್‌ ನಿರ್ಮಿಸಲು ಸಿದ್ಧ: ಹೆಚ್​ಎಎಲ್​

ಅಪಾಚೆ ಹೆಲಿಕಾಪ್ಟರ್‌ಗಳಿಗೆ ಸರಿಸಮನಾದ, 10-12 ಟನ್‌ ತೂಕದ ಸೇನಾ ಹೆಲಿಕಾಪ್ಟರ್ ನಿರ್ಮಿಸಲು ಸಿದ್ಧವಿರುವುದಾಗಿ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ ಘೋಷಿಸಿದೆ.

HAL to produce military helicopter
HAL ​​ನ ಮೆಗಾ​ ಪ್ರಾಜೆಕ್ಟ್
author img

By

Published : Mar 1, 2020, 11:57 PM IST

ನವದೆಹಲಿ: ಮೆಗಾ​ ಪ್ರಾಜೆಕ್ಟ್​​ವೊಂದಕ್ಕೆ ಕೈ ಹಾಕಿರುವ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), 2027 ರ ವೇಳೆಗೆ ಅಪಾಚೆ ಹೆಲಿಕಾಪ್ಟರ್‌ಗಳಿಗೆ ಸರಿಸಮನಾದ ಸೇನಾ ಹೆಲಿಕಾಪ್ಟರ್‌ ನಿರ್ಮಿಸಲು ಸಿದ್ಧವಿರುವುದಾಗಿ ಘೋಷಿಸಿದೆ.

ಅಪಾಚೆ ಮಾದರಿಯ ಹೆಲಿಕಾಪ್ಟರ್‌ನ ಪ್ರಾಥಮಿಕ ವಿನ್ಯಾಸವನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಆರಂಭಿಕವಾಗಿ ಕನಿಷ್ಠ 500 ಹೆಲಿಕಾಪ್ಟರ್​ಗಳನ್ನು ಉತ್ಪಾದಿಸುವ ಪ್ಲಾನ್​ ಇದೆ. ಈ ವರ್ಷವೇ ಸರ್ಕಾರ ಅನುಮತಿ ನೀಡಿದರೆ ಯೋಜನೆ ಪ್ರಾರಂಭಿಸಲಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಎಚ್‌ಎಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌ ಮಾಧವನ್‌ ಮಾಹಿತಿ ನೀಡಿದ್ದಾರೆ.

ಎಂಐ-17 ಹೆಲಿಕಾಪ್ಟರ್​​ಗೆ ಬದಲಾಗಿ 10-12 ಟನ್‌ ತೂಕದ ಸೇನಾ ಹೆಲಿಕಾಪ್ಟರ್ ತಯಾರಿಸುವ ಯೋಜನೆ ಕಡೆ ನಾವು ಗಮನ ಹರಿಸುತ್ತಿದ್ದೇವೆ. ಇದು ಮುಂಬರುವ ವರ್ಷಗಳಲ್ಲಿ 4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ತಡೆಯಲಿದೆ ಎಂದು ಮಾಧವನ್‌ ತಿಳಿಸಿದ್ದಾರೆ.

ತೇಜಸ್ ಮಿಲಿಟರಿ ವಿಮಾನದ ಅಭಿವೃದ್ಧಿಯ ನಂತರ ಎಚ್‌ಎಎಲ್​ನ ದೊಡ್ಡ ಯೋಜನೆ ಇದಾಗಲಿದೆ ಎಂದು ಸೇನಾ ತಜ್ಞರು ತಿಳಿಸಿದ್ದಾರೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಆಮದುಕೊಳ್ಳುವ ದೇಶವಾಗಿದ್ದು, ದೇಶೀಯವಾಗಿ ಸೇನಾ ಹೆಲಿಕಾಪ್ಟರ್​ ತಯಾರಿಕೆಗೆ ಉತ್ತೇಜನ ನೀಡುವ ಭರವಸೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.