ನವದೆಹಲಿ : ಬದಲಾವಣೆ ಮತ್ತು ಸಮನಾದ ಚೇತರಿಕೆ ನೀತಿಗಳ ಬಗ್ಗೆ ಚರ್ಚಿಸಲು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಟಾಲಿಯನ್ ಪ್ರೆಸಿಡೆನ್ಸಿಯಡಿ ನಡೆದ ಪ್ರಥಮ ಜಿ20 ಹಣಕಾಸು ಸಚಿವರ ಹಾಗೂ ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ವರ್ಚುವಲ್ ಸಭೆಯಲ್ಲಿ ಭಾಗವಹಿಸಿದರು.
ಜಾಗತಿಕ ಆರ್ಥಿಕ ದೃಷ್ಟಿಕೋನ, ಹಣಕಾಸು ವಲಯದ ಸಮಸ್ಯೆಗಳು, ಹಣಕಾಸಿನ ಸೇರ್ಪಡೆ ಮತ್ತು ಸುಸ್ಥಿರ ಹಣಕಾಸು ಅಭಿವೃದ್ಧಿ ಬಗ್ಗೆ ಸಮಾಲೋಚಿಸಿದರು.
ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಲಾಂಛನ ಕಲಾಕೃತಿ ಉದ್ಘಾಟನೆ - ಕರ್ನಾಟಕ ಹೂಡಿಕೆಗೆ ನೆಚ್ಚಿನ ತಾಣ ಎಂದ ಸಿಎಂ
ಭಾರತದ ದೇಶೀಯ ನೀತಿಗಳ ಸಾಲ ಖಾತರಿಗಳು, ನೇರ ವರ್ಗಾವಣೆ, ಆಹಾರ ಭದ್ರತೆ, ಆರ್ಥಿಕ ಉತ್ತೇಜಕ ಪ್ಯಾಕೇಜ್, ರಚನಾತ್ಮಕ ಸುಧಾರಣೆ ಚುರುಕುಗೊಳಿಸುವ ಕ್ರಮಗಳ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಿದರು.
ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ವ್ಯಾಕ್ಸಿನೇಷನ್ ಡ್ರೈವ್. ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಭಾರತವು ಹಲವು ರಾಷ್ಟ್ರಗಳಿಗೆ ಲಸಿಕೆ ಬೆಂಬಲ ನೀಡಿದೆ ಎಂದರು.
ಇದೇ ಸಭೆಯಲ್ಲಿ ಜಿ-20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ಜಾಗತಿಕ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಚರ್ಚಿಸಿದರು.