ಮ್ಯಾಡ್ರಿಡ್(ಸ್ಪೈನ್): ರಾಫೇಲ್ ನಡಾಲ್‌ಗೆ ಮ್ಯಾಡ್ರಿಡ್ ಓಪನ್ನಲ್ಲಿ ಸೋಲುಕಾಣುವ ಮೂಲಕ ಮತ್ತೆ ಫೈನಲ್ ತಲುಪುವಲ್ಲಿ ವಿಫಲರಾಗಿದ್ದಾರೆ.
ಕಳೆದ ತಿಂಗಳಷ್ಟೇ ಮಾಂಟೆ ಕಾರ್ಲೊ ಮಾಸ್ಟರ್ಸ್ 1000 ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ ಸೋತು ಫೈನಲ್ ಪ್ರವೇಶಿಸುವಲ್ಲಿ ವಿಫಲರಾಗಿದ್ದ ನಡಾಲ್ ಮ್ಯಾಡ್ರಿಡ್ ಓಪನ್ ಸೆಮಿಫೈನಲ್ನಲ್ಲಿ 6-4, 2-6, 6-3 ಅಂತರದಿಂದ ಗ್ರೀಕ್ನ ಸ್ಟೆಫನೋಸ್ ಸಿಟ್ಸಿಪಾಸ್ ವಿರುದ್ಧ ಸೋಲನುಭವಿಸಿದರು.
-
STUNNING FROM STEF 🙌@StefTsitsipas will play @DjokerNole for the #MMOPEN 🏆
— ATP Tour (@ATP_Tour) May 11, 2019 " class="align-text-top noRightClick twitterSection" data="
🎥: @TennisTV | @MutuaMadridOpen pic.twitter.com/6gyO357qvb
">STUNNING FROM STEF 🙌@StefTsitsipas will play @DjokerNole for the #MMOPEN 🏆
— ATP Tour (@ATP_Tour) May 11, 2019
🎥: @TennisTV | @MutuaMadridOpen pic.twitter.com/6gyO357qvbSTUNNING FROM STEF 🙌@StefTsitsipas will play @DjokerNole for the #MMOPEN 🏆
— ATP Tour (@ATP_Tour) May 11, 2019
🎥: @TennisTV | @MutuaMadridOpen pic.twitter.com/6gyO357qvb
ಹದಿನೇಳು ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿರುವ ನಡಾಲ್ 20 ವರ್ಷದ ಯುವಕನ ಮುಂದೆ ಅಚ್ಚರಿಯ ಸೋಲು ಕಂಡರು. ಮೊದಲ ಸೆಟ್ಅನ್ನು 6-4ರಲ್ಲಿ ಸೋತ ನಡಾಲ್ 6-2ರಲ್ಲಿ ಎರಡನೇ ಸೆಟ್ ಗೆದ್ದು ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಸೆಟ್ನಲ್ಲಿ ಸ್ಟೆಫನೋಸ್ 6-3ರಲ್ಲಿ ಗೆಲುವು ಸಾಧಿಸಿ ಪೈನಲ್ಗೇರಿದರು.
2 ನೇ ಶ್ರೇಯಾಂಕದ ನಡಾಲ್ರನ್ನು ಮಣಿಸಿದ ಸಿಟ್ಸಿಪಾಸ್ ಈ ಸೀಸನ್ಲ್ಲಿ ನಾಲ್ಕು ಎಟಿಪಿ ಟೂರ್ನಿಗಳಲ್ಲಿ ಫೈನಲ್ ತಲುಪಿದ ಸಾಧನೆ ತಮ್ಮದಾಗಿಸಿಕೊಂಡರು. ಇವರು ಪೈನಲ್ನಲ್ಲಿ ಅಗ್ರ ಶ್ರೇಯಾಂಕದ ನುವಾಕ್ ಜಾಕೋವಿಕ್ ವಿರುದ್ಧ ಸೆಣಸಾಡಲಿದ್ದಾರೆ. ಜಾಕೋವಿಕ್ ಮತ್ತೊಂದು ಸೆಮಿಫೈನಲ್ನಲ್ಲಿ ಆಸ್ಟ್ರೀಯಾದ ಡೊಮೆನಿಕ್ ಥೈಮ್ ವಿರುದ್ಧ 7-6(2),7-6(4) ರಲ್ಲಿ ಮಣಿಸಿ ಪೈನಲ್ ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ನೆದರ್ಲ್ಯಾಂಡಿನ ಕಿಕಿ ಬೆರ್ಟೆನ್ಸ್ ರೊಮೇನಿಯಾದ ಸಿಮೊನ ಹ್ಯಾಲೆಪ್ ವಿರುದ್ಧ 6-4.6-4 ಸೆಟ್ಗಳಲ್ಲಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.