ETV Bharat / briefs

ರನ್​ವೇ ಬಿಟ್ಟು ಬೇರೆಡೆ ಜಾರಿದ ವಿಮಾನ.. ಶಿರಡಿಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ - ವಿಮಾನ ನಿಲ್ದಾಣ

ದೆಹಲಿಯಿಂದ ಶಿರಡಿಗೆ ತೆರಳಿದ್ದ ವಿಮಾನ ಲ್ಯಾಂಡಿಂಗ್​ ವೇಳೆ ರನ್​ವೇ ಬಿಟ್ಟು ಬೇರೆಡೆ ಜಾರಿದ ಘಟನೆ ನಡೆದಿದೆ.

ರನ್​ವೇ ಬಿಟ್ಟು ಬೇರೆಡೆ ಲ್ಯಾಂಡ್
author img

By

Published : Apr 29, 2019, 7:34 PM IST

ಮುಂಬೈ: ಇಲ್ಲಿನ ಶಿರಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್​ಜೈಟ್​ ವಿಮಾನವೊಂದು ಲ್ಯಾಂಡಿಂಗ್​ ವೇಳೆ ರನ್​ ವೇ ಬಿಟ್ಟು ಬೇರೆಡೆ ಜಾರಿದ ಘಟನೆ ನಡೆದಿದೆ.

ದೆಹಲಿಯಿಂದ ಶಿರಡಿಗೆ ಭಕ್ತರನ್ನ ಹೊತ್ತುಕೊಂಡು SG946 ವಿಮಾನ ತೆರಳಿತ್ತು. ಶಿರಡಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವೇಳೆ ರನ್​​ವೇ ಬಿಟ್ಟು ಸುಮಾರು 30ರಿಂದ 40 ಮೀಟರ್​ ಬೇರೆಡೆ ಜಾರಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ, ಕೆಲ ಗಂಟೆಗಳ ಕಾಲ ಇದೇ ವಿಮಾನದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರು ಆತಂಕ ಎದುರಿಸುವಂತಾಗಿತ್ತು. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಮಾನ ಆಫರೇಟರ್​, ನಿಲ್ದಾಣ ಸಣ್ಣದಾಗಿರುವ ಕಾರಣ, ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

2017ರಲ್ಲಿ ಉದ್ಘಾಟನೆಗೊಂಡಿರುವ ಈ ವಿಮಾನ ನಿಲ್ದಾಣ, ಶಿರಡಿ ಕ್ಷೇತ್ರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

Intro:Body:

ರನ್​ವೇ ಬಿಟ್ಟು ಬೇರೆಡೆ ಲ್ಯಾಂಡ್​... ಶಿರಡಿಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಮುಂಬೈ: ಇಲ್ಲಿನ ಶಿರಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್​ಜೈಟ್​ ವಿಮಾನವೊಂದು ಲ್ಯಾಂಡಿಂಗ್​ ವೇಳೆ ರನ್​ ವೇ ಬಿಟ್ಟು ಬೇರೆಡೆ ಲ್ಯಾಂಡ್​ ಆಗಿರುವ ಘಟನೆ ನಡೆದಿದೆ. 

ದೆಹಲಿಯಿಂದ ಶಿರಡಿಗೆ ಭಕ್ತರನ್ನ ಹೊತ್ತುಕೊಂಡು ಈ ವಿಮಾನ ತೆರಳಿತ್ತು. ಶಿರಡಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ವೇಳೆ ರನ್​​ವೇ ಬಿಟ್ಟು ಸುಮಾರು 30ರಿಂದ 40 ಮೀಟರ್​ ಬೇರೆ ಲ್ಯಾಂಡ್​ ಆಗಿದೆ. ಅದೃಷ್ಠವಶಾತ್​ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ.  ಇನ್ನು ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ವಿಮಾನ ಆಫರೇಟರ್​, ನಿಲ್ದಾಣ ಸಣ್ಣದಾಗಿರುವ ಕಾರಣ, ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

2017ರಲ್ಲಿ ಉದ್ಘಾಟನೆಗೊಂಡಿರುವ ಈ ವಿಮಾನ ನಿಲ್ದಾಣ, ಶಿರಡಿ ಕ್ಷೇತ್ರದಿಂದ ಸುಮಾರು 14 ಕಿಮಿ ದೂರದಲ್ಲಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.