ETV Bharat / briefs

ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಸೇತುವೆ ಶಿಥಿಲ : ಭಾರಿ ವಾಹನ ಸಂಚಾರ ನಿಷೇಧಿಸಿ ಡಿಸಿ ಆದೇಶ

ರಾಷ್ಟ್ರೀಯ ಹೆದ್ದಾರಿ 766 ಸಿ ರಸ್ತೆಯ ಚಿಕ್ಕಪೇಟೆ ಬಳಿಯ ಸೇತುವೆ ಕುಸಿತವಾಗಿದ್ದು, ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

Shivamogga national highway bridge collapse

author img

By

Published : Jun 24, 2020, 1:34 AM IST

ಶಿವಮೊಗ್ಗ: ಶಿವಮೊಗ್ಗ-ಕೊಲ್ಲೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ಸಿ ರಸ್ತೆಯ ಚಿಕ್ಕಪೇಟೆ ಬಳಿಯ ಸೇತುವೆ ಕುಸಿತವಾಗಿರುವುದರಿಂದ ಜಿಲ್ಲಾಧಿಕಾರಿಗಳು ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ.

ಜಿಲ್ಲೆಯ ಹೊಸನಗರದಿಂದ ನಗರ- ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ‌ ಕಲ್ಪಿಸುವ ರಸ್ತೆ ಇದಾಗಿದೆ. ಇಲ್ಲಿನ ಚಿಕ್ಕಪೇಟೆ ಬಳಿಯ ಸೇತುವೆಯ ಕೆಳಭಾಗದ ಆಧಾರದ ಪಿಲ್ಲರ್ ನಲ್ಲಿ ಕುಸಿತವಾಗಿದೆ. ಇದರಿಂದ ಭಾರಿ ವಾಹನಗಳು ಸಂಚಾರ ಮಾಡಿದರೆ, ಸೇತುವೆಯು ದುರ್ಬಲವಾಗುವುದರಿಂದ ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

ಕೇಂದ್ರ ಮೋಟಾರು ವಾಹನಗಳ ಕಾಯಿದೆ 1988 ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು ಕಲಂ 221(ಎ) ರಂತೆ ರಾಷ್ಟ್ರೀಯ ಹೆದ್ದಾರಿ 776-ಸಿ ಕಿ.ಮೀ 72.30 ಕಿ.ಮೀ ನಲ್ಲಿ ಭಾರಿ ವಾಹನ ಸಂಚಾರ ಮಾಡದಂತೆ ಆದೇಶ ಮಾಡಿದ್ದಾರೆ. ಇದರಿಂದ ಇನ್ನು ಮುಂದೆ ಭಾರಿ ವಾಹನಗಳು ಹೊಸನಗರ- ನಗರ- ನಿಲ್ಸಕಲ್- ಹುಲಿಕಲ್ ಮೂಲಕ ಹೊಸಂಗಡಿ ಕಡೆಗೆ ಸಂಚಾರ ಮಾಡಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.