ಮುಂಬೈ: ಟೀಂ ಇಂಡಿಯಾದ ಅನುಭವಿ ಆಟಗಾರ ಎಂಎಸ್ ಧೋನಿ ನಿವೃತ್ತಿ ಬಗ್ಗೆ ಅನೇಕ ಬಾರಿ ಮಾತುಗಳು ಕೇಳಿ ಬಂದಿದ್ದವು. ಇದೀಗ ಖುದ್ದಾಗಿ ಧೋನಿ ಆ ವಿಷಯದ ಬಗ್ಗೆ ಸೀಕ್ರೆಟ್ ವಿಡಿಯೋವೊಂದರಲ್ಲಿ ಹಚ್ಚಿಕೊಂಡಿದ್ದಾರೆ.
37 ವರ್ಷದ ಧೋನಿ ತಮ್ಮ ಟ್ವಿಟರ್ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ನಾನು ನಿಮ್ಮೊಂದಿಗೆ ರಹಸ್ಯ ವಿಡಿಯೋವೊಂದನ್ನ ಶೇರ್ ಮಾಡಿಕೊಳ್ಳುತ್ತಿರುವೆ ಎಂದಿರುವ ಧೋನಿ, ಬಾಲ್ಯದಲ್ಲಿ ಏನಾಗಬೇಕೆಂದು ಬಯಸಿದ್ದರು ಎಂಬುದರ ಕುರಿತು ಹಾಗೂ ಮುಂದಿನ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. ಚಿಕ್ಕವನಿಂದಾಗಿನಿಂದಲೂ ಪೇಂಟರ್ ಆಗಬೇಕೆದುಕೊಂಡಿದ್ದ ಧೋನಿ, ಇದೀಗ ಆ ಕನಸು ನನಸು ಮಾಡಿಕೊಳ್ಳಲು ಮುಂದಾಗುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಹೆಚ್ಚು ಕ್ರಿಕೆಟ್ ಆಡಿದ್ದೇನೆ ಎಂದಿರುವ ಮಾಹಿ, ಚಿಕ್ಕವನಿದ್ದಾಗ ಕಂಡಿದ್ದ ಕನಸು ನನಸು ಮಾಡಿಕೊಳ್ಳಲು ಮುಂದಾಗುವೆ ಎಂದಿದ್ದಾರೆ.
ವಿಡಿಯೋದಲ್ಲಿ ತಾವೇ ಬಿಡಿಸಿರುವ ಕೆಲ ಚಿತ್ರಗಳನ್ನ ಧೋನಿ ವಿಡಿಯೋದಲ್ಲಿ ತೋರಿಸಿದ್ದು, ಅದಕ್ಕಾಗಿ ತಮ್ಮ ಪೇಂಟಿಂಗ್ ಪ್ರದರ್ಶನ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚಿರುವ ಧೋನಿ, ಸದ್ಯ ಐಸಿಸಿ ಏಕದಿನ ವಿಶ್ವಕಪ್ಗಾಗಿ ತಯಾರಿ ನಡೆಸಿದ್ದಾರೆ. 2014ರಲ್ಲೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರುವ ಧೋನಿ 341 ಏಕದಿನ ಪಂದ್ಯಗಳಿಂದ 10,500 ರನ್ಗಳಿಕೆ ಮಾಡಿದ್ದಾರೆ.