ಬೆಳಗಾವಿ: ಟ್ರೋಲ್ ಆಗಿರುವ ವಿಚಾರ ಯಾವಾಗಲೂ ಸಿನಿಮಾ ಆಗಬಾರದು. ಫಿಲ್ಮ್ ಚೇಂಬರ್ಗೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಿನಿಮಾ ಟೈಟಲ್ ನೀಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಬಿಗ್ಬಾಸ್ ಖ್ಯಾತಿಯ ಪ್ರಥಮ್ ಹೇಳಿದ್ದಾರೆ.
ಜಾಗ್ವಾರ್ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಸಂಭಾಷಣೆ ನಡೆದಿದೆ. ಇದರಲ್ಲಿ ಕುಮಾರಸ್ವಾಮಿ, ನಿಖಿಲ್ ಅವರ ತಪ್ಪಿಲ್ಲ. ಕಾರ್ಯಕ್ರಮ ಆಯೋಜಕರು ಮಾಡಿರೋದು ಸಿನಿಮಾ ಗಿಮಿಕ್. ಒಬ್ಬರ ತೇಜೊವಧೆ ಮಾಡುವುದು ಸರಿಯಲ್ಲ. ಈ ಸಿನಿಮಾ ಮಾಡಲು ಕನ್ನಡ ಚಲನಚಿತ್ರ ಮಂಡಳಿ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಜೋಡೆತ್ತು ಸಿನಿಮಾ ಬಂದ್ರೆ ಬರಲಿ:
ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾ ಬರುವುದು ಬೇಡ. ಅದರಲ್ಲಿ ನನಗೆ ನಟಿಸುವ ಅವಕಾಶ ಸಿಕ್ಕರು ನಾನು ನಟಿಸಲ್ಲ. ಬೇಕಾದರೆ ದರ್ಶನ್, ಯಶ್ ಜೋಡಿಯ ಜೋಡೆತ್ತು ಸಿನಿಮಾ ಬರಲಿ ಎಂದು ಪ್ರಥಮ್ ಹೇಳಿದ್ದಾರೆ.