ಹುಬ್ಬಳ್ಳಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನ ಆಗಲಿದೆ. ಲೋಕಸಭಾ ಫಲಿತಾಂಶ ನಂತರ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಅಲ್ಪ ಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಮ್ ಭವಿಷ್ಯ ನುಡಿದಿದ್ದಾರೆ.
ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಅದರಗುಂಚಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ದಿನದಿಂದ ದಿನಕ್ಕೆ ತನ್ನ ವಿಫಲತೆ ಪ್ರದರ್ಶಿಸುತ್ತಿದೆ ಎಂದರು .
ಇನ್ನು ಮೇ 23 ನಂತರ ಮೈತ್ರಿ ಸರ್ಕಾರ ಉರುಳಲಿದ್ದು, ಕಾಂಗ್ರೆಸ್ನವರು ರಾಜ್ಯಪಾಲರಿಂದ ಬೆಂಬಲ ವಾಪಸ್ ಪಡೆಯಲಿದ್ದಾರೆ ಎಂದರು. ಅಷ್ಟೇ ಅಲ್ಲ ಮುಂದಿನ ನಾಲ್ಕು ವರ್ಷದ ಆಡಳಿತವನ್ನು ಬಿಜೆಪಿ ಸರ್ಕಾರ ಮಾಡಲಿದೆ ಎಂದು ಹೇಳಿದರು.