ETV Bharat / briefs

ಅತ್ಯಾಚಾರ ಪ್ರಕರಣದಲ್ಲಿ ಅಮಾಯಕರ ಮೇಲೆ ಆರೋಪ ಹೊರಿಸಲಾಗ್ತಿದೆ: ಸಂತ್ರಸ್ತೆ ತಂದೆ ದೂರು - ಟಿಕಿ ಗಡಿಯಲ್ಲಿ ಯುವತಿ ಮೇಲೆ ಅತ್ಯಾಚಾರ

ಅವರು ಆರೋಪಿಗಳಲ್ಲ ಎಂದು ತಾನು ಇಂದು ಮತ್ತೆ ಪೊಲೀಸರಿಗೆ ಹೇಳಿಕೆ​ ನೀಡಿದ್ದೇನೆ. ಆದರೆ ಪೊಲೀಸರು ಅವರನ್ನು ಬಿಡುತ್ತಿಲ್ಲ ಎಂದು ಸಂತ್ರಸ್ತೆಯ ತಂದೆ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

rohtak
rohtak
author img

By

Published : May 11, 2021, 9:38 PM IST

ರೋಹತಕ್​( ಹರಿಯಾಣ): ಟಿಕಿ ಗಡಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಯುನೈಟೆಡ್ ಕಿಸಾನ್ ಮೋರ್ಚಾದ ಮೌನವನ್ನು ಪ್ರಶ್ನಿಸಿದ ನಂತರದಲ್ಲಿ ಮೌನ ಮುರಿದ ಮೋರ್ಚಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದೆ.

ಘಟನೆ ನಡೆದ ಸಮಯದಲ್ಲಿ ರೈತ ಚಳವಳಿಯ ನೇತೃತ್ವ ವಹಿಸಿದ್ದ ಕಾರ್ಯಕರ್ತ ಯೋಗೇಂದ್ರ ಯಾದವ್ ಹಾಗೂ ಮಹಿಳಾ ಪ್ರತಿಭಟನಾಕಾರರಿದ್ದ ಚಳವಳಿ ಸ್ಥಳದಲ್ಲಿ ನಡೆದ ಅತ್ಯಾಚಾರದ ಬಗ್ಗೆ ಮೋರ್ಚಾಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಲಾಗಿದೆ.

ಈ ಪ್ರಕರಣ ರೈತ ಮುಖಂಡರಿಗೆ ತಿಳಿದಿತ್ತು. ಆದರೆ, ಅವರು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ತಂದೆ ಕೂಡ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು, ಅಲ್ಲಿ ಸಂತ್ರಸ್ತೆಯ ತಂದೆ ಹೇಳಿಕೆಯಂತೆ, ಅನೂಪ್ ಮತ್ತು ಅನಿಲ್ ಎಂಬವರ ಮೇಲೆ ಶಂಕೆಯಿದೆ ಎಂದಿದ್ದರು. ಆದರೆ, ಅವರನ್ನು ಬಿಟ್ಟು ಪೊಲೀಸರು ಉಳಿದ ನಾಲ್ಕು ಜನರ ಮೇಲೆ ಆರೋಪ ಹೊರಿಸಿದ್ದಾರೆ ಎಂದು ಹೇಳಿದರು. ನಾನು ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದೂ ಸಹಾ ತಿಳಿಸಿದರು.

'ಸಹಾಯ ಮಾಡಿದವರನ್ನೇ ಆರೋಪಿಗಳನ್ನಾಗಿಸಿದ ಪೊಲೀಸರು

ಅವರು ಆರೋಪಿಗಳಲ್ಲ ಎಂದು ತಾನು ಇಂದು ಮತ್ತೆ ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ. ಆದರೆ, ಪೊಲೀಸರು ಅವರನ್ನು ಬಿಡುತ್ತಿಲ್ಲ ಎಂದು ಸಂತ್ರಸ್ತೆಯ ತಂದೆ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾನು ಕೇವಲ ಅನಿಲ್ ಮಲಿಕ್ ಮತ್ತು ಅನೂಪ್ ಚಾನೌತ್ ಅವರ ಮೇಲೆ ಆರೋಪ ಮಾಡಿದ್ದೆ. ಆದರೆ, ಸಹಾಯ ಮಾಡಿದ ಜನರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದರು.

ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆಯ ತಂದೆ ಒತ್ತಾಯಿಸಿದ್ದಾರೆ. ಆದರೆ, ಮುಗ್ಧ ಜನರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿದರು. ಕಿಸಾನ್ ಯುನೈಟೆಡ್ ಫ್ರಂಟ್ ಸಂತ್ರಸ್ತೆಯ ಜೀವ ಉಳಿಸಲು ಪ್ರಯತ್ನಿಸಿತ್ತು ಮತ್ತು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿತ್ತು. ನೀವು ಮೊದಲು ಎಫ್‌ಐಆರ್ ಮಾಡಿದರೆ, ಯುನೈಟೆಡ್ ಫ್ರಂಟ್, ಆರೋಪಿಗಳ ವಿರುದ್ಧ ದೂರು ನೀಡಲಿದೆ ಎಂದು ಹೇಳಿದೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ಕೊರೊನಾಗೆ ಯುವತಿ ಬಲಿ

ಇತ್ತ ಕೊರೊನಾಗೆ ಯುವತಿ ಬಲಿಯಾಗಿದ್ದಾಳೆಂದು ವಿಷಯವನ್ನು ತಿರುಚಲಾಗಿದೆ. ಆದ್ರೆ ಸಂತ್ರಸ್ತೆಯ ತಂದೆ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದ್ರೆ ನೈಜ ಆರೋಪಿಗಳು ರೈತ ಸಾಮಾಜಿಕ ಸೇನೆಗೆ ಸೇರಿದವರಾಗಿದ್ದು, ಏಪ್ರಿಲ್ 10 ರಂದು ಪಶ್ಚಿಮ ಬಂಗಾಳದಿಂದ ರೈಲಿನಲ್ಲಿ ಬಂದವರಾಗಿದ್ದಾರೆಂದು ಆರೋಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.