ETV Bharat / briefs

ಬಾಯಾರಿದವರಿಗೆ ತಂಪಾಗಿಸಲು ಬಂದಿತು 'ಮಹಾ'ಜೀವಜಲ.. ರೈತರಿಗೆ ಕಭಿ ಖುಷಿ ಕಭಿ ಗಮ್.. - ದೂದಗಂಗಾ

ಮಹಾರಾಷ್ಟ್ರ ಸರ್ಕಾರ ಬಾಕಿ ಇರುವ 5 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ವೇದಗಂಗಾ, ದೂದಗಂಗಾ ಜಲಾಶಯಕ್ಕೆ ಹರಿಸಿದೆ. ಇದರಿಂದ ನದಿ ತೀರದ ರೈತರು ಸಂತಸಗೊಂಡಿದ್ದಾರೆ.

5 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ವೇದಗಂಗಾ, ದೂದಗಂಗಾ ಜಲಾಶಯಕ್ಕೆ ಹರಿಸಿದ ಮಹರಾಷ್ಟ್ರ ಸರ್ಕಾರ
author img

By

Published : May 12, 2019, 7:49 PM IST

ಚಿಕ್ಕೋಡಿ : ಮಹಾರಾಷ್ಟ್ರ ಸರ್ಕಾರ ಕಾಳಮ್ಮವಾಡಿ ಜಲಾಶಯದಿಂದ ಬಾಕಿ ಇರುವ 500 ಕ್ಯೂಸೆಕ್ ನೀರನ್ನು ರಾಜ್ಯದ ವೇದಗಂಗಾ ಹಾಗೂ ದೂದಗಂಗಾ ನದಿಗೆ ಹರಿಸಿದೆ. ಈ ನೀರು ನದಿ ತೀರದ ಜನರಲ್ಲಿ ಮಾತ್ರ ಹರ್ಷ ಮೂಡಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಪ್ಪಂದದ ಪ್ರಕಾರ ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ಅಂತ್ಯದವರೆಗೆ ಕಾಳಮ್ಮವಾಡಿ ಜಲಾಶಯದಿಂದ ರಾಜ್ಯಕ್ಕೆ ಬಿಡುಗಡೆ ಮಾಡಲಾಗುವ ಒಟ್ಟು 4 ಟಿಎಂಸಿ ನೀರಿನ ಪೈಕಿ ಈಗಾಗಲೇ 3.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿತ್ತು. ಉಳಿದ 500 ಕ್ಯೂಸೆಕ್‌ ನೀರನ್ನು ಈಗ ಬಿಡಲಾಗಿದೆ. ನೀರು ಕೃಷ್ಣಾ ನದಿಗೆ ಬಂದು ತಲುಪಿದರೂ ಸಹಿತ ಚಿಕ್ಕೋಡಿ ತಾಲೂಕಿನ ಜನರಿಗೆ ಮಾತ್ರ ಇದರ ಲಾಭ ಹೆಚ್ಚು ಆಗಲ್ಲ.

5 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ವೇದಗಂಗಾ, ದೂದಗಂಗಾ ಜಲಾಶಯಕ್ಕೆ ಹರಿಸಿದ ಮಹರಾಷ್ಟ್ರ ಸರ್ಕಾರ

ಯಾಕಂದ್ರೆ, ಈಗಾಗಲೇ ನದಿಯಲ್ಲಿ ರೈತರು ನೀರಿಗಾಗಿ ಬಾವಿಗಳನ್ನು ತೆಗೆಸಿದ್ದಾರೆ. ಅವುಗಳು ಭರ್ತಿ ಆಗಿ ನೀರು ಮುಂದೆ ಬರಲು ಸಾಧ್ಯವಿಲ್ಲ. ಈ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿಗೆ ಮಾತ್ರ ಸೀಮಿತವಾಗುತ್ತೆ. ಉಳಿದ ತಾಲೂಕುಗಳು ಹಾಗೂ ಬಿಜಾಪೂರ, ಬಾಗಲಕೋಟ ಜಿಲ್ಲೆಗಳಿಗೆ ಈ ನೀರು ತಲುಪುವುದಿಲ್ಲ. ಇದರಿಂದ ಕೆಲವು ರೈತರಿಗೆ ಮಾತ್ರ ಉಪಯುಕ್ತ. ಉಳಿದ ರೈತರಿಗೆ ನಿರಾಶೆಯಾಗಿದೆ.

ಈಗಾಗಲೇ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ವಾರದ ಹಿಂದೆ ಮುಖ್ಯಮಂತ್ರಿಗೆ ಹಾಗೂ ನೀರಾವರಿ ಸಚಿವರಿಗೆ ಭೇಟಿಯಾಗಿ ನೀರು ಬಿಡುವಂತೆ ಒತ್ತಾಯ‌ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.

Intro:ಕಾಳಮ್ಮವಾಡಿ ಡ್ಯಾಂ ನಿಂದ ದೂಧಗಂಗಾ ನದಿಗೆ ಹರಿದು ಬಂದ ನೀರು
Body:
ಚಿಕ್ಕೋಡಿ :

ಮಹಾರಾಷ್ಟ್ರ ಸರ್ಕಾರ ಕಾಳಮ್ಮವಾಡಿ ಜಲಾಶಯದಿಂದ ಕರ್ನಾಟಕ ರಾಜ್ಯದ ಪಾಲಿನ 500 ಕ್ಯೂಸೆಕ್ ನೀರು ವೇದಗಂಗಾ ಹಾಗೂ ದೂದಗಂಗಾ ನದಿಗೆ ಹರಿಸಿದ್ದು ನದಿ ತೀರದ ಜನರ ಮೊಗದಲ್ಲಿ ಸ್ವಲ್ಪ ಮಟ್ಟಿಗೆ ಹರ್ಷ ತಂದಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಪ್ಪಂದದ ಪ್ರಕಾರ ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ಅಂತ್ಯದವರೆಗೆ ಕಾಳಮ್ಮವಾಡಿ ಜಲಾಶಯದಿಂದ ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಲಾಗುವ ಒಟ್ಟು 4 ಟಿಎಂಸಿ ಅಡಿ ನೀರಿನ ಪೈಕಿ ಈಗಾಗಲೇ 3.5 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ. ಇನ್ನುಳಿದ 500 ಕ್ಯೂಸೆಕ್‌ ನೀರನ್ನು ದೂದಗಂಗಾ ನದಿಗೆ ಬಂದು ಸೇರುತ್ತಿದೆ.

ಈ 500 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಂದು ತಲುಪಿದರು ಸಹಿತ ಚಿಕ್ಕೋಡಿ ತಾಲೂಕಿನ ಜನರಿಗೆ ಮಾತ್ರ ಉಪಯುಕ್ತವಾಗಿದೆ. ಏಕೆಂದರೆ ಈಗಾಗಲೇ ನದಿಯಲ್ಲಿ ರೈತರು ನೀರಿಗಾಗಿ ಬಾವಿಗಳನ್ನು ತೆಗೆದಿದ್ದು ಅವುಗಳು ಭರ್ತಿ ಆಗಿ ನೀರು ಮುಂದೆ ಬರಲು ಸಾಧ್ಯವಿಲ್ಲ. ಈ ನೀರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿಗೆ ಮಾತ್ರ ಸೀಮಿತವಾಗಿದ್ದು ಉಳಿದ ತಾಲೂಕುಗಳು ಹಾಗೂ ಬಿಜಾಪೂರ, ಬಾಗಲಕೋಟ ಜಿಲ್ಲೆಗಳಿಗೆ ಈ ನೀರು ಬಂದು ತಲುಪುವುದಿಲ್ಲ ಇದರಿಂದ ಕೆಲವು ರೈತರಿಗೆ ಮಾತ್ರ ಉತ್ಸಾಹ ಗೊಂಡಿದ್ದು ಉಳಿದ ರೈತರಿಗೆ ನೀರಾಶೆಯಾಗಿದೆ.

ಈಗಾಗಲೇ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಳೆದ ಒಂದು ವಾರದ ಹಿಂದೆ ಮಹಾ ಮುಖ್ಯಮಂತ್ರಿಗೆ ಹಾಗೂ ನೀರಾವರಿ ಸಚಿವರಿಗೆ ಬೇಟಿಯಾಗಿ ನೀರು ಬಿಡುವಂತೆ ಒತ್ತಾಯ‌ ಮಾಡಿದರು ಏನೂ ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.