ಮಂಗಳೂರು: ಮಹೀಂದ್ರ ಗ್ರೂಪ್ನ ಆನಂದ್ ಮಹೀಂದ್ರ ಅವರು ಅಡಿಕೆ ಮರವೇರುವ ಈ ಯಂತ್ರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿ, 'ಹೌ ಕೂಲ್ ಈಸ್ ದಿಸ್' ಎಂದು ಹೇಳಿದ್ದಾರೆ.
ಈ ಯಂತ್ರ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗುವುದು ಮಾತ್ರವಲ್ಲ, ಕಡಿಮೆ ತೂಕದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಹೊಗಳಿದ್ದಾರೆ. ಅಲ್ಲದೆ ತಮ್ಮ ಸಿಬ್ಬಂದಿ ಮೂಲಕ ಗಣಪತಿ ಭಟ್ ರನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.
-
How cool is this? The device not only seems effective & does the job, but also looks elegantly designed with a minimum of weight. @rajesh664 can your team look at this more closely & see whether we can market Mr. Bhat’s device as part of our Farm solutions portfolio? https://t.co/4O0y2DmBzh
— anand mahindra (@anandmahindra) June 18, 2019 " class="align-text-top noRightClick twitterSection" data="
">How cool is this? The device not only seems effective & does the job, but also looks elegantly designed with a minimum of weight. @rajesh664 can your team look at this more closely & see whether we can market Mr. Bhat’s device as part of our Farm solutions portfolio? https://t.co/4O0y2DmBzh
— anand mahindra (@anandmahindra) June 18, 2019How cool is this? The device not only seems effective & does the job, but also looks elegantly designed with a minimum of weight. @rajesh664 can your team look at this more closely & see whether we can market Mr. Bhat’s device as part of our Farm solutions portfolio? https://t.co/4O0y2DmBzh
— anand mahindra (@anandmahindra) June 18, 2019
ಭಟ್ಟರ ಸಾಧನೆಗೆ ಆನಂದ್ ಮಹೀಂದ್ರ ಶ್ಲಾಘನೆ
ಕೇವಲ 28 ಕೆಜಿ ಯಂತ್ರ ಗಂಟೆಗೆ ಸುಮಾರು 80 ಅಡಿಕೆ ಮರಗಳನ್ನು ಏರುವ ಸಾಮರ್ಥ್ಯ ಹೊಂದಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಪ್ರಯೋಜನ ಆಗಲಿದೆ. ಇಂದಿನ ದಿನಗಳಲ್ಲಿ ಅಡಿಕೆ ಕೊಯ್ಯಲು, ಔಷಧಿ ಸಿಂಪಡಿಸಲು ಕಾರ್ಮಿಕರ ಕೊರತೆಯಿದೆ. ಸ್ವತಃ ಈ ಸಮಸ್ಯೆಯನ್ನು ಅನುಭವಿಸಿದ ಗಣಪತಿ ಭಟ್ಟರ ಸತತ ಸಂಶೋಧನೆಯ ಫಲವೇ ಈ ಅಡಿಕೆ ಮರ ಏರುವ ಯಂತ್ರ. ಇಂದು ಈ ಯಂತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದು, ಗಣಪತಿ ಭಟ್ಟರಿಗೆ ಸತತವಾಗಿ ಫೋನ್ಗಳ ಸುರಿಮಳೆಯೇ ಬರುತ್ತಿದೆಯಂತೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗಣಪತಿ ಭಟ್ಟರು, ಅಡಿಕೆ ಮರ ಏರುವ ಯಂತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಮೇಲೆ ನಮ್ಮ ಮನೆಗೆ ಬಂದು ಅದನ್ನು ವೀಕ್ಷಣೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಮಹೀಂದ್ರ ಕಂಪನಿಯ ಅಧ್ಯಕ್ಷರು ಈ ಯಂತ್ರದ ಬಗ್ಗೆ ಶ್ಲಾಘನೆ ಮಾಡಿ ಟ್ವೀಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ.
ಆದರೆ ನಮಗೆ ಅದರ ಆಸೆ ಆಕಾಂಕ್ಷೆ ಯಾವುದೂ ಇಲ್ಲ. ನಾವು ಈ ಯಂತ್ರವನ್ನು ಯಶಸ್ವಿಯಾಗಿ ಆವಿಷ್ಕಾರ ಮಾಡಿದ್ದೇವೆ. ಇದನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಈಗಾಗಲೇ ಈ ಯಂತ್ರ ಬೇಕೆಂದು ದುಂಬಾಲು ಬೀಳುತ್ತಿದ್ದಾರೆ. 7-8 ದಿನಗಳಲ್ಲಿ ಒಂದು ಯಂತ್ರ ತಯಾರಿಸಿ ಕೊಡುವ ಉದ್ದೇಶ ಇರಿಸಿಕೊಂಡಿದ್ದೇವೆ ಎಂದು ಹೇಳಿದರು.