ತೆಲಂಗಾಣ: ಕಳೆದ ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಪಿಯು ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ರಿಸಲ್ಟ್ ನೋಡಿ ವಿದ್ಯಾರ್ಥಿಗಳು ಅಘಾತಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ತೆಲಂಗಾಣ ಪರೀಕ್ಷಾ ಮಂಡಳಿ ಮಾಡಿರುವ ಎಡವಟ್ಟಿನಿಂದ ಈಗಾಗಲೇ 25 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಲ ಒಟ್ಟು 9.7ಲಕ್ಷ ಸ್ಟುಡೆಂಟ್ಸ್ ಪರೀಕ್ಷೆ ಬರೆದಿದ್ದು, ಅದರಲ್ಲಿ ಬರೋಬ್ಬರಿ 3.28 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ತೆಲಂಗಾಣ ಪರೀಕ್ಷಾ ಮಂಡಳಿ ಹಾಗೂ ಇಲ್ಲಿನ ರಾಜ್ಯಸರ್ಕಾರ ಏಪ್ರಿಲ್ 18ರಂದು ತನ್ನ ಫಲಿತಾಂಶ ಪ್ರಕಟಿಸಿತ್ತು. ಆದರೆ, ಇದರಲ್ಲಿ ಶೇ.33ರಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದರು. ಜತೆಗೆ ಉತ್ತಮ ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ಸ್ಟುಡೆಂಟ್ಸ್ ಸೊನ್ನೆ ಸಹ ಸುತ್ತಿದ್ದರು. ಇದರಿಂದ ಮನನೊಂದ 25 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ತದನಂತರ ಎಚ್ಚೆತ್ತ ಸರ್ಕಾರ, ಇದರ ತನಿಖೆಗೆ ಆದೇಶ ನೀಡಿದೆ. ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳ ಪೇಪರ್ಗಳನ್ನ ಮರುಮೌಲ್ಯಮಾಪನ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇತ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಿಬಿಐ ತನಿಖೆಗೆ ಆಗ್ರಹಿಸಿದೆ.
ನವ್ಯಾ ಎಂಬ ವಿದ್ಯಾರ್ಥಿನಿ ತೆಲುಗು ವಿಷಯದಲ್ಲಿ 99ಅಂಕಗಳಿಸಿದ್ದು, ಆಕೆಗೆ ಸೊನ್ನೆ ಅಂಕ ನೀಡಲಾಗಿತ್ತು. ಇಂತಹ ಪ್ರಕರಣಗಳು ನಡೆದಿರುವ ಕಾರಣ, ತೆಲಂಗಾಣದಲ್ಲಿ ರಸ್ತೆಗಿಳಿದಿರುವ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.