ETV Bharat / bharat

ಅಪಾರ್ಟ್​ಮೆಂಟ್​ನತ್ತ ಪಟಾಕಿ ರಾಕೆಟ್​ಗಳನ್ನು ಹಾರಿಸಿದ ಯುವಕ: ವಿಡಿಯೋ - ರಾಕೆಟ್

ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಜನರು ವಾಸಿಸುವ ಅಪಾರ್ಟ್​ಮೆಂಟ್​ವೊಂದರ ಮೇಲೆ ಯುವಕನೊಬ್ಬ ಪಟಾಕಿ ರಾಕೆಟ್​ಗಳನ್ನು ಹಾರಿಸಿರುವ ವಿಚಿತ್ರ ಘಟನೆ ನಡೆದಿದೆ.

ಅಪಾರ್ಟ್​ಮೆಂಟ್​ನತ್ತ ರಾಕೆಟ್​ಗಳನ್ನು ಹಾರಿಸಿದ ಯುವಕ

author img

By

Published : Oct 26, 2022, 2:25 PM IST

ಉಲ್ಲಾಸನಗರ (ಮಹಾರಾಷ್ಟ್ರ): ಯುವಕನೊಬ್ಬ ಲಕ್ಷ್ಮೀ ಪೂಜೆಯ ದಿನದಂದು ಜನರು ವಾಸಿಸುತ್ತಿರುವ ಕಟ್ಟದ ಮೇಲೆಯೇ ಪಾಟಾಕಿ ಮತ್ತು ರಾಕೆಟ್​ಗಳನ್ನು ಹಾರಿಸಿರುವ ಘಟನೆ ಮಹಾರಾಷ್ಟ್ರ ಉಲ್ಲಾಸನಗರದಲ್ಲಿ ನಡೆದಿದೆ. ಹೊತ್ತಿ ಉರಿಯುತ್ತಿದ್ದ ರಾಕೆಟ್​ಗಳು ನೇರವಾಗಿ ನಿವಾಸಿಗಳ ಮನೆಗಳಿಗೆ ನುಗ್ಗಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುಮಾರು 20 ರಿಂದ 22 ವರ್ಷದ ಯುವಕ ಈ ಕೃತ್ಯ ನಡೆಸಿದ್ದು, ಆತನ ವಿರುದ್ಧ ಉಲ್ಲಾಸನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಉಲ್ಲಾಸನಗರದ ಗೋಲ್ ಮೈದಾನ ಪ್ರದೇಶದಲ್ಲಿ ಹಿರಪಣ್ಣ ಅಪಾರ್ಟ್‌ಮೆಂಟ್ ಇದೆ. ಈ ಅಪಾರ್ಟ್​ಮೆಂಟ್​ನತ್ತ ಯುವಕ ರಾಕೆಟ್​ಗಳನ್ನು ಬಿಟ್ಟಿದ್ದಾನೆ ಎನ್ನಲಾಗಿದೆ.

ಅಪಾರ್ಟ್​ಮೆಂಟ್​ನತ್ತ ಪಟಾಕಿ ರಾಕೆಟ್​ಗಳನ್ನು ಹಾರಿಸಿದ ಯುವಕ

ಸೋಮವಾರ ಬೆಳಗಿನ ಜಾವ 2:30 ರ ಸುಮಾರಿಗೆ ಈ ಕಟ್ಟಡದ ಮೇಲೆ ಅಪರಿಚಿತ ಯುವಕನೊಬ್ಬ ರಾಕೆಟ್​ನನ್ನು ಹಾರಿಸಿದ್ದಾನೆ. ಕಟ್ಟಡದ ಹೊರಗೆ ಯುವಕ ಕೈಯಲ್ಲಿ ರಾಕೆಟ್ ಪೆಟ್ಟಿಗೆಯನ್ನು ಹಿಡಿದು ಬೀದಿಯಲ್ಲಿ ನಿಂತಿದ್ದ. ಮತ್ತೊಂದೆಡೆ ಈ ಘಟನೆಯಿಂದ ಹಿರಪಣ್ಣ ಕಟ್ಟಡದಲ್ಲಿ ವಾಸಿಸುವ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಹಬ್ಬದ ಸಂಭ್ರಮ ನೆಪದಲ್ಲಿ ಪಟಾಕಿ ಮೈಮೇಲೆ ಎಸೆದು ಪುಂಡಾಟ: ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ - ದೃಶ್ಯ ಸಿಸಿಟಿವಿಯಲ್ಲಿ‌ ಸೆರೆ

ಈ ಬಗ್ಗೆ ಕಟ್ಟಡದ ನಿವಾಸಿ ನವೀನ್ ವಿಲಯತ್ರಾಯ್ ಮುಲ್ತಾನಿ (47 ವರ್ಷ) ಅವರು ಅಕ್ಟೋಬರ್ 24 ರ ಸೋಮವಾರ ಉಲ್ಲಾಸನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 336, 285, 286 ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.