ETV Bharat / bharat

4 ದಶಕದ ಕನಸು ನನಸಾಗುವತ್ತ: ತಲೆ ಎತ್ತಲಿದೆ ಮಾಯಾಪುರದ ಬೃಹತ್​ ದೇವಾಲಯ

ವೈದಿಕ ತಾರಾಲಯವನ್ನು ಮಾಯಾಪುರದಲ್ಲಿ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಇಸ್ಕಾನ್ ಮುಖ್ಯ ಕೇಂದ್ರವಾಗಿದೆ. 1976 ರಲ್ಲಿ ಇಸ್ಕಾನ್ ಸಂಸ್ಥಾಪಕರು ಈ ತಾರಾಲಯವನ್ನು ನಿರ್ಮಿಸುವ ಕನಸು ಕಂಡಿದ್ದರು.

author img

By

Published : Sep 2, 2022, 5:31 PM IST

Vedic Planetarium
Vedic Planetarium

ಮಾಯಾಪುರ (ಪಶ್ಚಿಮ ಬಂಗಾಳ) : ಮಾಯಾಪುರ ಮತ್ತು ಪಶ್ಚಿಮ ಬಂಗಾಳದ ಜನರ ಬಹುಕಾಲದ ಕನಸು ನನಸಾಗುವ ಕ್ಷಣ ಬಂದಿದೆ. ಈ ಕನಸು ಶುರುವಾದದ್ದು 1976ರಲ್ಲಿ. ಅಂದಿನಿಂದ ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲ ಉರುಳಿದೆ. ಇನ್ನು ಒಂದೆರಡು ವರ್ಷಗಳಲ್ಲಿ, ಪಶ್ಚಿಮ ಬಂಗಾಳವು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಹೊಂದಲಿದೆ. ಪ್ರಸ್ತುತ ಮಾಯಾಪುರದಲ್ಲಿ ನಿರ್ಮಿಸಲಾಗುತ್ತಿರುವ ವೈದಿಕ ತಾರಾಲಯವು ಗಾತ್ರದಲ್ಲಿ ದೊಡ್ಡದಾಗಿದ್ದು, ಈಗಿರುವ ಎಲ್ಲ ದೇವಾಲಯಗಳನ್ನು ಹಿಂದಿಕ್ಕಲಿದೆ.

ವೈದಿಕ ತಾರಾಲಯ
ವೈದಿಕ ತಾರಾಲಯ

ವಿಶ್ವದ ಜನರು ತಾಜ್ ಮಹಲ್, ಸೇಂಟ್ ಪಾಲ್ಸ್ ಕ್ಯಾಥೆಡ್ರಲ್, ಇತ್ಯಾದಿ ಧಾರ್ಮಿಕ ವಾಸ್ತುಶಿಲ್ಪದ ಬಗ್ಗೆ ಹೆಮ್ಮೆಪಡುತ್ತಿದ್ದರು. ಆದರೆ, ಈ ದೇವಾಲಯ ಇವುಗಳ ಸಾಲಿಗೆ ಸೇರಲಿದೆ. ಸುಮಾರು 10,000 ಭಕ್ತರು ಸೇರುವ ಸ್ಥಳಾವಕಾಶವನ್ನು ಈ ದೇವಾಲಯ ಹೊಂದಿದೆ. ವೈದಿಕ ತಾರಾಲಯವನ್ನು ಮಾಯಾಪುರದಲ್ಲಿ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಇಸ್ಕಾನ್ ಮುಖ್ಯ ಕೇಂದ್ರವಾಗಿದೆ. 1976 ರಲ್ಲಿ ಇಸ್ಕಾನ್ ಸಂಸ್ಥಾಪಕರು ಈ ತಾರಾಲಯವನ್ನು ನಿರ್ಮಿಸುವ ಕನಸು ಕಂಡಿದ್ದರು.

ಇಸ್ಕಾನ್ ದೇವಸ್ಥಾನದ ಪಕ್ಕದಲ್ಲಿ ವೈದಿಕ ಜ್ಞಾನ ಮತ್ತು ವಿಜ್ಞಾನವನ್ನು ಅಭ್ಯಾಸ ಮಾಡುವ ಕಟ್ಟಡ ಇರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಇದಲ್ಲದೇ, ಜಗತ್ತು ಹೇಗೆ ಸೃಷ್ಟಿಯಾಯಿತು ಎಂಬ ಮಾಹಿತಿಯನ್ನು ಎಲ್ಲರಿಗೂ ತಿಳಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಅವರು ವೈದಿಕ ಜ್ಞಾನದ ಬಗ್ಗೆ ಒಟ್ಟಾರೆ ಜಾಗೃತಿಯನ್ನು ಬೆಳೆಸುವ ಕನಸು ಕಂಡಿದ್ದರು. ಆ ಕನಸಿನ ನಿರ್ಮಾಣ ಫೆಬ್ರವರಿ 14, 2010 ರಂದು ಪ್ರಾರಂಭವಾಗಿತ್ತು.

ವೈದಿಕ ತಾರಾಲಯ
ವೈದಿಕ ತಾರಾಲಯ

ಯುಎಸ್ ಕ್ಯಾಪಿಟಲ್ ಕಟ್ಟಡದಂತೆ ಕಾಣುವ ಈ ವೈದಿಕ ತಾರಾಲಯವನ್ನು 2016 ರಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಬಹು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಈಗ 2024 ರ ವೇಳೆಗೆ ಈ ದೇವಾಲಯವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಮಾಯಾಪುರದಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವನ್ನು ನಿರ್ಮಿಸುವುದು ಶ್ರೀ ಪ್ರಭುಪಾದರ ಕನಸಾಗಿತ್ತು. ಅವರ ಕನಸು ಈ ಮೂಲಕ ನನಸಾಗಲಿದೆ.

ವೈದಿಕ ತಾರಾಲಯ
ವೈದಿಕ ತಾರಾಲಯ

ಇದನ್ನೂ ಓದಿ: ಅದ್ಧೂರಿಯಾಗಿ ನಡೆದ ಬಾಬಾ ನಾನಕ್ ವಿವಾಹ ವಾರ್ಷಿಕೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.