ETV Bharat / bharat

'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ನಿರ್ದೇಶಕರಿಗೆ ನೋಟಿಸ್​ ಜಾರಿಗೊಳಿಸಿದ ಕೋಲ್ಕತ್ತಾ ಪೊಲೀಸರು

author img

By

Published : May 26, 2023, 9:01 PM IST

ನಾನು ಸತ್ಯವನ್ನು ಆಧರಿಸಿ ಚಲನಚಿತ್ರವನ್ನು ಮಾಡಿದ್ದೇನೆ ಎಂದು ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರಾ ಅವರು ತಿಳಿಸಿದ್ದಾರೆ.

ನಿರ್ದೇಶಕ ಸನೋಜ್ ಮಿಶ್ರಾ
ನಿರ್ದೇಶಕ ಸನೋಜ್ ಮಿಶ್ರಾ
ನಿರ್ದೇಶಕ ಸನೋಜ್ ಮಿಶ್ರಾ

ಪಶ್ಚಿಮ ಬಂಗಾಳ: ವಿವಾದಾತ್ಮಕ ಚಲನಚಿತ್ರ 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್'ನ ಲೇಖಕ ಮತ್ತು ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಅವರಿಗೆ ಕೋಲ್ಕತ್ತಾ ಪೊಲೀಸರು ಕಾನೂನು ನೋಟಿಸ್ ಜಾರಿಗೊಳಿಸಿದ್ದು, ಮೇ 30 ರಂದು ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಕಾನೂನು ಜಾರಿ ಮೂಲಗಳ ಪ್ರಕಾರ, ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪ್ರಕಟಿಸಲಾಗಿತ್ತು. ಮತ್ತು ಮೇ 11 ರಂದು ಪಶ್ಚಿಮ ಬಂಗಾಳದ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶದಿಂದ ಚಲನಚಿತ್ರವನ್ನು ರಚಿಸಲಾಗಿದೆ ಎಂದು ತೋರುತ್ತಿದೆ ಎಂದು ದೂರು ದಾಖಲಿಸಲಾಗಿದೆ.

ಪ್ರಾಥಮಿಕ ತನಿಖೆಯ ನಂತರ ಈ ವಿಷಯದಲ್ಲಿ ನಿರ್ದೇಶಕರನ್ನು ಪ್ರಶ್ನಿಸಲು ಸಾಕಷ್ಟು ಆಧಾರವಿದೆ ಎಂದು ನಗರದ ಉನ್ನತ ಅಧಿಕಾರಿಗಳು ಭಾವಿಸಿದ್ದಾರೆ ಮತ್ತು ಆದ್ದರಿಂದ ಮೇ 30 ರಂದು ಮಧ್ಯಾಹ್ನ 12 ಗಂಟೆಗೆ ಅಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ವರದಿ ಮಾಡುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ನಗರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 41A ಗೆ ಅನುಗುಣವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. "ದಿ ಡೈರಿ ಆಫ್ ವೆಸ್ಟ್ ಬೆಂಗಾಲ್" ಹಿಂದಿ ಚಲನಚಿತ್ರದ ಖ್ಯಾತ ನಿರ್ದೇಶಕ ಸನೋಜ್ ಮಿಶ್ರಾ ಅವರು ತಮ್ಮ ಚಿತ್ರದ ಮೂಲಕ ಬಂಗಾಳದ ಪ್ರತಿಷ್ಠೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಪೊಲೀಸರು ನೋಟಿಸ್​ ನೀಡಿದ್ದರು.

ಚಲನಚಿತ್ರವು ಸಂಪೂರ್ಣ ಸತ್ಯಗಳನ್ನು ಆಧರಿಸಿದೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ರಾಜ್ಯದ ಘನತೆಗೆ ಚ್ಯುತಿ ತರುವುದು ನನ್ನ ಉದ್ದೇಶವಲ್ಲ. ಚೆನ್ನಾಗಿ ಸಂಶೋಧನೆ ಮಾಡಿದ ಸತ್ಯಗಳನ್ನು ಮಾತ್ರ ಸಿನಿಮಾದಲ್ಲಿ ತೋರಿಸಿದ್ದೇವೆ. ನಾನು ಸತ್ಯವನ್ನು ಆಧರಿಸಿ ಚಲನಚಿತ್ರವನ್ನು ಮಾಡಿದ್ದೇನೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ನಾನು ಪ್ರಧಾನಿ, ಗೃಹ ಮಂತ್ರಿಗಳನ್ನು ಒತ್ತಾಯಿಸುತ್ತೇನೆ. ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಸಾಮೂಹಿಕ ಹತ್ಯೆಗಳು, ಅತ್ಯಾಚಾರಗಳು ಮತ್ತು ಹಿಂದೂಗಳ ವಲಸೆ ನಡೆಯುತ್ತಿದೆ. ನಾನು ಸಾಕಷ್ಟು ಸಂಶೋಧನೆ ಮಾಡಿದ್ದೇನೆ ಮತ್ತು ಚಲನಚಿತ್ರವು ಸಂಪೂರ್ಣವಾಗಿ ಸತ್ಯಗಳನ್ನು ಆಧರಿಸಿದೆ' ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: 'ಸಲಾರ್'​ ಚಿತ್ರದ ಟೀಸರ್​ ಕುರಿತು ಬಿಗ್​ ಅಪ್ಡೇಟ್​​; 'ಆದಿಪುರುಷ್'​ ಜೊತೆಗೆ ಡಬಲ್​ ಧಮಾಕ ಎನ್ನುತ್ತಿದೆ ಚಿತ್ರ ತಂಡ

ಪಶ್ಚಿಮ ಬಂಗಾಳ ಸರ್ಕಾರವು 'ದಿ ಕೇರಳ ಸ್ಟೋರಿ' ಪ್ರದರ್ಶನವನ್ನು ನಿಷೇಧಿಸಿದಾಗ ಪರಿಶೀಲನೆಗೆ ಒಳಗಾಯಿತು. ಸಿನಿಮಾ ವಿಷಯವು ರಾಜ್ಯದೊಳಗಿನ ವಿವಿಧ ಸಮುದಾಯಗಳ ನಡುವಿನ ಐಕ್ಯತೆಗೆ ಅಡ್ಡಿಪಡಿಸಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.

ಬುದ್ಧಿಜೀವಿಗಳಿಂದ ಟೀಕೆ : ಸಿನಿಮಾದ ನಿರ್ಮಾಪಕ ಸುಬ್ರತಾ ಸೇನ್ ಅವರು ಸಿನಿಮಾ ಮೇಲಿನ ನಿಷೇಧವನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು. ರಾಜ್ಯ ಸರ್ಕಾರ ಸಿನಿಮಾ ನಿಷೇಧಿಸಿದ್ದರಿಂದ ವಿರೋಧ ಪಕ್ಷಗಳು, ನಾಗರಿಕ ಸಮಾಜ, ಬುದ್ಧಿಜೀವಿಗಳು ಮತ್ತು ಗಮನಾರ್ಹ ವ್ಯಕ್ತಿಗಳಿಂದ ನಕರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ 'ದಿ ಕೇರಳ ಸ್ಟೋರಿ' ವೀಕ್ಷಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.