ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾವಳಿ ಮಧ್ಯೆ ಘೋಷಣೆಯಾಗಿದ್ದ ಸಿಬಿಎಸ್ಇ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ಕುರಿತು ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಿಬಿಎಸ್ಇ 10ನೇ ತರಗತಿ ಬೋರ್ಡ್ ಪರೀಕ್ಷೆ ರದ್ಧು ಪಡಿಸಿ ಹಾಗೂ 12ನೇ ತರಗತಿ ಪರೀಕ್ಷೆ ಮುಂದೂಡಿಕೆ ಮಾಡಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಇಂಟರ್ನಲ್ ಅಸೆಸ್ಮೆಂಟ್ ಆಧಾರದ ಮೇಲೆ 10 ನೇ ತರಗತಿ ಫಲಿತಾಂಶ ಹಾಗೂ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ 12ನೇ ತರಗತಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಸಿಬಿಎಸ್ಇ ಬೋರ್ಡ್ ಪರೀಕ್ಷೆ: 10ನೇ ತರಗತಿ ಎಕ್ಸಾಮ್ ರದ್ದು, ಪಿಯು ಪರೀಕ್ಷೆ ಮುಂದಕ್ಕೆ
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ವೆಲ್ ಡನ್ ಮೋದಿ ಜೀ ಎಂದು ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ಮುಖಂಡರ ಸಲಹೆ ಆಲಿಸಿರುವುದೇ ಇದಕ್ಕೆಲ್ಲ ಕಾರಣ. ಜನರ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡುವುದು ನಮ್ಮ ಪ್ರಜಾಪ್ರಭುತ್ವ ಕರ್ತವ್ಯವಾಗಿದ್ದು, ಬಿಜೆಪಿ ಅಂತಿಮವಾಗಿ ಅಹಂಕಾರದಿಂದ ಹೊರ ಬಂದು ಎಚ್ಚೆತ್ತುಕೊಂಡಿದೆ ಎಂದು ಟ್ವೀಟ್ ಮಾಡಿದೆ.
-
Well done Modi ji, listening to sound advice from Shri @Rahulgandhi, Smt. @priyankgandhi & the Congress party will go a long way in mending our nation.
— Congress (@INCIndia) April 14, 2021 " class="align-text-top noRightClick twitterSection" data="
It is our democratic duty to work together for the betterment of our people. It's good to see BJP finally put nation over ego. https://t.co/oTGIy0iimb
">Well done Modi ji, listening to sound advice from Shri @Rahulgandhi, Smt. @priyankgandhi & the Congress party will go a long way in mending our nation.
— Congress (@INCIndia) April 14, 2021
It is our democratic duty to work together for the betterment of our people. It's good to see BJP finally put nation over ego. https://t.co/oTGIy0iimbWell done Modi ji, listening to sound advice from Shri @Rahulgandhi, Smt. @priyankgandhi & the Congress party will go a long way in mending our nation.
— Congress (@INCIndia) April 14, 2021
It is our democratic duty to work together for the betterment of our people. It's good to see BJP finally put nation over ego. https://t.co/oTGIy0iimb
ಪ್ರಿಯಾಂಕಾ ಟ್ವೀಟ್
ಸಿಬಿಎಸ್ಇ ಪರೀಕ್ಷೆ ರದ್ಧುಗೊಳ್ಳುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಸರ್ಕಾರ ಅಂತಿಮವಾಗಿ 10ನೇ ತರಗತಿ ಪರೀಕ್ಷೆ ರದ್ಧುಗೊಳಿಸಿದೆ. ಆದರೆ, 12ನೇ ತರಗತಿ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಜೂನ್ವರೆಗೆ ವಿದ್ಯಾರ್ಥಿಗಳನ್ನ ಅನಗತ್ಯವಾಗಿ ಒತ್ತಡಕ್ಕೊಳಪಡಿಸುವುದರಲ್ಲಿ ಅರ್ಥವಿಲ್ಲ. ಇದು ಅನ್ಯಾಯ. ಈಗಲೇ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರವನ್ನ ಕೋರುತ್ತೇನೆ ಎಂದಿದ್ದಾರೆ.
-
Glad the government has finally cancelled the 10th standard exams however a final decision MUST be taken for the 12th grade too. Keeping students under undue pressure until June makes no sense.
— Priyanka Gandhi Vadra (@priyankagandhi) April 14, 2021 " class="align-text-top noRightClick twitterSection" data="
It’s unfair. I urge the government to decide now.#cancelboardexam2021
">Glad the government has finally cancelled the 10th standard exams however a final decision MUST be taken for the 12th grade too. Keeping students under undue pressure until June makes no sense.
— Priyanka Gandhi Vadra (@priyankagandhi) April 14, 2021
It’s unfair. I urge the government to decide now.#cancelboardexam2021Glad the government has finally cancelled the 10th standard exams however a final decision MUST be taken for the 12th grade too. Keeping students under undue pressure until June makes no sense.
— Priyanka Gandhi Vadra (@priyankagandhi) April 14, 2021
It’s unfair. I urge the government to decide now.#cancelboardexam2021
ಕಳೆದ ಕೆಲ ದಿನಗಳ ಹಿಂದೆ ಸಿಬಿಎಸ್ಇ ಪರೀಕ್ಷೆ ರದ್ದು ಮಾಡುವಂತೆ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ ಅನೇಕರು ಆಗ್ರಹಿಸಿದ್ದರು. ಜತೆಗೆ ಮಹಾರಾಷ್ಟ್ರದಲ್ಲಿ ಬೋರ್ಡ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿತ್ತು.