ETV Bharat / bharat

ತೆಲಂಗಾಣದಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ, ಕಾಂಗ್ರೆಸ್​ ಬೆಂಬಲಿಸುತ್ತೇವೆ: ವೈಎಸ್​ಆರ್​ಟಿಪಿ ಅಧ್ಯಕ್ಷೆ ಶರ್ಮಿಳಾ

Telangana Assembly Elections: ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ವೈಎಸ್​ಆರ್​ಟಿಪಿ ಘೋಷಿಸಿದೆ.

YSRTP is not contesting in Telangana Assembly Elections

author img

By ETV Bharat Karnataka Team

Published : Nov 3, 2023, 2:29 PM IST

Updated : Nov 3, 2023, 2:51 PM IST

ಹೈದರಾಬಾದ್​: 2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ತೆಲಂಗಾಣ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಘೋಷಿಸಿದ್ದಾರೆ. ಹೈದರಾಬಾದ್​ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ರಾಷ್ಟ್ರ ಸಮಿತಿ (ಬಿಆಆರ್​ಎಸ್​) ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರ 'ಭ್ರಷ್ಟ ಮತ್ತು ಸರ್ವಾಧಿಕಾರಿ' ಆಡಳಿತವನ್ನು ಕೊನೆಗೊಳಿಸುವ ಅವಕಾಶ ಇರುವುದರಿಂದ ಕಾಂಗ್ರೆಸ್ ಅನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ ಎಂದು ಹೇಳಿದರು. ಕಾಂಗ್ರೆಸ್​ನ ಮತ ವಿಭಜನೆಯಾಗುವುದನ್ನು ತಾವು ಬಯಸುವುದಿಲ್ಲ ಎಂದು ಅವರು ತಿಳಿಸಿದರು.

ಶರ್ಮಿಳಾ ಅವರು ಕಾಂಗ್ರೆಸ್ ಜೊತೆ ಕೈ ಜೋಡಿಸಲಿದ್ದಾರೆ ಎಂಬ ಊಹಾಪೋಹಗಳು ಕೆಲ ತಿಂಗಳ ಹಿಂದೆ ಹಬ್ಬಿದ್ದವು. ಆದಾಗ್ಯೂ ವೈಎಸ್ಆರ್​ಟಿಪಿ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಶರ್ಮಿಳಾ ಅಕ್ಟೋಬರ್ ಎರಡನೇ ವಾರದಲ್ಲಿ ಘೋಷಿಸಿದ್ದರು. ಶರ್ಮಿಳಾ ಅವರು ಅಕ್ಟೋಬರ್-2021 ರಲ್ಲಿ ತಮ್ಮ 4,000 ಕಿಲೋಮೀಟರ್ ಪ್ರಯಾಣದ 'ಮಾರೋ ಪ್ರಜಾ ಪ್ರಸ್ಥಾನಂ' ಪಾದಯಾತ್ರೆಯನ್ನು ಪ್ರಾರಂಭಿಸಿದ್ದರು.

  • YS Sharmila announces full support to Congress in the assembly election of Telangana. YSRTP will not contest election and their workers will support Congress candidates.

    Sharmila said that history will not forgive me if the Congress Party's votes get split. pic.twitter.com/VWwadQICKU

    — Shantanu (@shaandelhite) November 3, 2023 " class="align-text-top noRightClick twitterSection" data=" ">

ಈ ಹಿಂದೆ ಅಕ್ಟೋಬರ್ 12 ರಂದು ವೈಎಸ್ಆರ್​ಟಿಪಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಅವರ ತಾಯಿ ವಿಜಯಮ್ಮ ಕೂಡ ಸಿಕಂದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಊಹಿಸಲಾಗಿತ್ತು. ಕಾಂಗ್ರೆಸ್​ನೊಂದಿಗೆ ವಿಲೀನದ ಮಾತುಕತೆ ನಡೆಸಲು ಪ್ರಯತ್ನಿಸಿದ ನಂತರ ಶರ್ಮಿಳಾ ಈ ನಿರ್ಧಾರ ತೆಗೆದುಕೊಂಡಿದ್ದರು. ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ಖಮ್ಮಮ್​ ನ ಪಲೈರ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಈ ಹಿಂದೆ ಘೋಷಿಸಿತ್ತು.

ತೆಲುಗು ದೇಶಂ ಪಕ್ಷವು (ಟಿಡಿಪಿ) ತೆಲಂಗಾಣ ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ ನಂತರ ವೈಎಸ್​ಆರ್​ಟಿಪಿ ನಿರ್ಧಾರ ಬಂದಿದ್ದು ಗಮನಾರ್ಹ. ಟಿಡಿಪಿ ಚುನಾವಣೆಯಿಂದ ಹಿಂದೆ ಸರಿದಿದ್ದನ್ನು ಪ್ರತಿಭಟಿಸಿ ತೆಲಂಗಾಣ ಟಿಡಿಪಿ ಅಧ್ಯಕ್ಷ ಕಸಾನಿ ಜ್ಞಾನೇಶ್ವರ್ ಪಕ್ಷ ತೊರೆದು ಆಡಳಿತಾರೂಢ ಬಿಆರ್​ಎಸ್​ಗೆ ಸೇರಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಹದಿನೈದು ದಿನಗಳ ಹಿಂದೆ ವೈಎಸ್ಆರ್​ಟಿಪಿ ಸಂಸ್ಥಾಪಕಿ ತಮ್ಮ ಪಕ್ಷವು ರಾಜ್ಯದ ಎಲ್ಲಾ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು. ಅಗತ್ಯವಿದ್ದರೆ ತಾಯಿ ವೈ.ಎಸ್. ವಿಜಯಮ್ಮ ಮತ್ತು ಪತಿ ಅನಿಲ್ ಕುಮಾರ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದ ಅವರು ಸ್ವತಃ ಅವರು ಪಾಲೈರ್ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಲು ಕಾರಣಗಳನ್ನು ವಿವರಿಸಿದ ಅವರು, ಬಿಆರ್​ಎಸ್​ ವಿರುದ್ಧ ಸಾಕಷ್ಟು ಆಡಳಿತ ವಿರೋಧಿ ಅಲೆ ಇದೆ ಮತ್ತು ಆಡಳಿತ ವಿರೋಧಿ ಮತಗಳು ವಿಭಜನೆಯಾದರೆ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮರು ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದರು.

ಇದನ್ನೂ ಓದಿ: ಆ್ಯಪಲ್​ ತಯಾರಿಸುತ್ತಿದೆ ಜನರೇಟಿವ್ ಎಐ; 2024ಕ್ಕೆ ಗ್ರಾಹಕರ ಕೈಯಲ್ಲಿ ಹೊಸ ತಂತ್ರಜ್ಞಾನ!

Last Updated : Nov 3, 2023, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.