ETV Bharat / bharat

ರೋಗಿಯ ತಲೆಯೊಳಗೆ ಕಬ್ಬಿಣದ ನಟ್ ಬಿಟ್ಟು ಹೊಲಿಗೆ ಹಾಕಿದ ಸರ್ಕಾರಿ ವೈದ್ಯರು! - ರೋಗಿಯ ತಲೆಯೊಳಗೆ ಕಬ್ಬಿಣದ ನಟ್​

ವೆಲ್ಲೂರು ಸರ್ಕಾರಿ ಆಸ್ಪತ್ರೆ ವೈದ್ಯರು ರೋಗಿಯ ತಲೆಯೊಳಗೆ ಕಬ್ಬಿಣದ ನಟ್‌ವೊಂದನ್ನು ಹಾಗೆಯೇ ಬಿಟ್ಟು ಅದರ ಮೇಲೆ ಹೊಲಿಗೆ ಹಾಕಿರುವ ಅಚಾತುರ್ಯ ಬೆಳಕಿಗೆ ಬಂದಿದೆ.

Etv Bharat
Etv Bharat
author img

By

Published : Jun 6, 2023, 7:58 PM IST

ವೆಲ್ಲೂರು (ತಮಿಳುನಾಡು): ತಿರುಪತ್ತೂರು ಜಿಲ್ಲೆಯ ವಾಣಿಯಂಪಾಡಿ ಪಕ್ಕದ ಉದಯೇಂದ್ರಂ ಗ್ರಾಮದ ಟ್ರಕ್ ಚಾಲಕ ಕಾರ್ತಿಕೇಯನ್ (45) ಅವರು ನಿನ್ನೆ (ಜೂನ್ 5) ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಮಾದನೂರು ಬಳಿ ಲಾರಿ ಚಲಾಯಿಸಿಕೊಂಡು ಬರುತ್ತಿದ್ದಾಗ ಹಿಂಭಾಗದಿಂದ ಬರುತ್ತಿದ್ದ ಖಾಸಗಿ ಬಸ್ ಅನಿರೀಕ್ಷಿತವಾಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಪಲ್ಟಿಯಾಗಿದೆ. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿರುವ ಚಾಲಕ ಕಾರ್ತಿಕೇಯನ್ ಅವರನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆಗಾಗಿ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂದು ತಲೆಯ ಗಾಯಕ್ಕೆ ಹೊಲಿಗೆ ಹಾಕಿದರೂ ರಕ್ತಸ್ರಾವ ನಿಲ್ಲಲಿಲ್ಲ. ಅಲ್ಲದೇ ತೀವ್ರ ತಲೆನೋವು ಕೂಡಾ ಕಾಣಿಸಿಕೊಂಡಿದೆ.

ಸ್ಕ್ಯಾನ್​ ವರದಿ- ಆಘಾತಕಾರಿ ಅಂಶ ಬಯಲು: ಇದರಿಂದ ಕಾರ್ತಿಕೇಯನ್ ಸಂಬಂಧಿಕರು ಅವರನ್ನು ಅಲ್ಲಿಂದ ಡಿಸ್ಚಾರ್ಜ್ ಮಾಡಿ ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಅವರ ತಲೆಯನ್ನು ಸ್ಕ್ಯಾನ್ ಮಾಡಿದ ವೈದ್ಯರು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಕಾರ್ತಿಕೇಯನ್ ತಲೆಗೆ ಹೊಲಿಗೆ ಹಾಕಿದ ಜಾಗದಲ್ಲಿ ಕಬ್ಬಿಣದ ‘ನಟ್​’ ಇರುವುದು ಸ್ಕ್ಯಾನ್​ ವರದಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ.

ಆ ಬಳಿಕ ಕಾರ್ತಿಕೇಯನ್ ಅವರ ತಲೆಗೆ ಹಾಕಿದ್ದ ಹೊಲಿಗೆ ಬಿಚ್ಚಿದ ಖಾಸಗಿ ಆಸ್ಪತ್ರೆಯ ವೈದ್ಯರು, ಕಬ್ಬಿಣದ ನಟ್ ಅ​ನ್ನು ಹೊರತೆಗೆದಿದ್ದಾರೆ. ಸೋಂಕು ತಗುಲಿದ ಕಾರಣ 2 ದಿನಗಳ ನಂತರ ಮತ್ತೆ ಹೊಲಿಗೆ ಹಾಕಲು ಸಾಧ್ಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಾರ್ತಿಕೇಯನ್ ಸಂಬಂಧಿಕರ ಆಕ್ರೋಶ: ಕಾರ್ತಿಕೇಯನ್ ಸಂಬಂಧಿಕರು ಅಪಘಾತದ ಮಾಹಿತಿ ಪಡೆದು ಬೆಳಗ್ಗೆ 8 ಗಂಟೆ ಸುಮಾರಿಗೆ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯವರೆಗೂ ಪ್ರಥಮ ಚಿಕಿತ್ಸೆ ನೀಡಿಲ್ಲ ಎಂದು ಅಲ್ಲಿನ ಸರ್ಕಾರಿ ಆಸ್ಪತ್ರೆಯ ದಾದಿಯರನ್ನು ಪ್ರಶ್ನಿಸಿದ್ದಾರೆ. ಚಿಕಿತ್ಸೆ ನೀಡುವುದು ಸ್ವಲ್ಪ ತಡ ಮಾಡಿದ್ದಕ್ಕೆ ರೋಗಿಯ ಪೋಷಕರು ಕೋಪಗೊಂಡಿದ್ದಾರೆ. ಇದನ್ನು ಗಮನಿಸಿದ ದಾದಿಯರು, ಕಾರ್ತಿಕೇಯನ್ ತಲೆಯನ್ನು ಸ್ಕ್ಯಾನ್ ಮಾಡಿದ್ದಾರೆ.

ನಾವು ಗಲಾಟೆ ಮಾಡಿದಾಗ ತಕ್ಷಣವೇ ಆತನ ತಲೆಗೆ ಹೊಲಿಗೆ ಹಾಕಿ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಆದರೆ, ಹೊಲಿದ ಜಾಗದಿಂದ ರಕ್ತಸ್ರಾವ ಮುಂದುವರೆಯಿತು. ಬೇರೆ ದಾರಿಯಿಲ್ಲದೇ ನಾವು ತಡ ಮಾಡದೇ ಖಾಸಗಿ ಆಸ್ಪತ್ರೆಗೆ ಹೋದೆವು. ಆದರೆ, ಅಲ್ಲಿಗೆ ಹೋಗಿ ಸ್ಕ್ಯಾನಿಂಗ್ ಮಾಡಿಸಿದಾಗ ತಲೆಯಲ್ಲಿ ನಟ್​ ಇರುವ ಸಂಗತಿ ತಿಳಿಯಿತು. ಸರಕಾರಿ ವೈದ್ಯರು ಉದಾಸೀನ ಮಾಡಿದ್ದರಿಂದ ತಲೆಯಲ್ಲಿದ್ದ ನಟ್ ಅನ್ನು​ ಅಲ್ಲಿಯೇ ಬಿಟ್ಟು ಹೊಲಿಗೆ ಹಾಕಿದ್ದಾರೆ ಎಂದು ದೂರಿದರು.

ಈ ಕುರಿತು ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ.ಪಾಪಾಪತಿ ಅವರನ್ನು ಕೇಳಿದಾಗ, "ಇಲ್ಲಿಯವರೆಗೆ ನನಗೆ ಯಾವುದೇ ದೂರು ಬಂದಿಲ್ಲ, ಘಟನೆಯ ಬಗ್ಗೆ ವಿಚಾರಿಸಿ ಉತ್ತರ ನೀಡುತ್ತೇನೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಪೋಷಕರು ಮದುವೆಗೆ ಒಪ್ಪದ ಕಾರಣ ಪ್ರೇಮಿಗಳು ಬಸ್​ನಲ್ಲಿ​ ಆತ್ಮಹತ್ಯೆಗೆ ಯತ್ನ.. ಯುವತಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.