ETV Bharat / bharat

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಹೊಸ 'ರೈತ ಅವತಾರ'

ಟ್ರಾಕ್​ಸೂಟ್​ ಧರಿಸಿ ಪವರ್​ ವೀಡರ್​ನಿಂದ ಹೊಲ ಉಳುಮೆ - ಗ್ರಾಮಸ್ಥರನ್ನು ಭೇಟಿ ಮಾಡಿ ಅಭಿವೃದ್ಧಿ ಯೋಜನೆಯ ಬಗ್ಗೆ ವಿಚಾರಣೆ - ಸಾಮಾನ್ಯ ವ್ಯಕ್ತಿಯಂತೆ ರಸ್ತೆ ಬದಿಯಲ್ಲಿ ಚಹಾ ಸೇವನೆ.

author img

By

Published : Feb 26, 2023, 7:46 PM IST

uttrakhand-cm-pushkar-singh-dhamis-new-farmer-avatar
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಹೊಸ 'ರೈತ ಅವತಾರ'

ತೆಹ್ರಿ (ಉತ್ತರಾಖಂಡ) : ಮುಖ್ಯಮಂತ್ರಿಯೊಬ್ಬರು ರಾಜಕೀಯ ಭಾಷಣ ಅಥವಾ ಅಧಿಕಾರಿಗಳೊಂದಿಗೆ ಸಭೆ ನಡೆಸುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಅವರು ಭಾನುವಾರ ತೆಹ್ರಿ ಗಡ್ವಾಲ್​ ಜಿಲ್ಲೆಯ ತಿವಾರ್​​ ಗ್ರಾಮದಲ್ಲಿ ಹೊಲ ಉಳುಮೆ ಮಾಡುತ್ತಿರುವುದು ಕಂಡುಬಂದಿದೆ.

ಟ್ರಾಕ್​ಸೂಟ್​ ಧರಿಸಿ ಹೊಲ ಉಳುಮೆ.. ಮುಖ್ಯಮಂತ್ರಿಗಳು ಕೆಂಪು ಮತ್ತು ಕಪ್ಪು ಟ್ರಾಕ್​ಸೂಟ್​ ಧರಿಸಿ ಪವರ್​ ವೀಡರ್​ನಿಂದ ಹೊಲ ಉಳುಮೆ ಮಾಡಿದರು. ಹೊಲದಿಂದ ಹೊರಬಂದ ನಂತರ ಗ್ರಾಮಸ್ಥರನ್ನು ಭೇಟಿ ಮಾಡಿ ಅಭಿವೃದ್ಧಿ ಯೋಜನೆಯ ಬಗ್ಗೆ ವಿಚಾರಿಸಿದರು. ಉತ್ತರಾಖಂಡದ ಮುಖ್ಯಮಂತ್ರಿಗಳು ಶನಿವಾರದಂದು ಬೌರಾಡಿಯ ಪ್ರತಾಪ್​ ಇಂಟರ್​ ಕಾಲೇಜಿನಲ್ಲಿ ಸುಮಾರು 533 ಕೋಟಿ ರೂ.ಗಳ ವೆಚ್ಚದಲ್ಲಿ 138 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಅಧಿಕಾರಿಗಳ ಪ್ರಕಾರ ಸುಮಾರು 138 ಯೋಜನೆಗಳ ಪೈಕಿ 158 ಕೋಟಿ ರೂ. ವೇಚ್ಚದಲ್ಲಿ 45 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 375 ಕೋಟಿ ರೂ.ಗಳ ವೆಚ್ಚದಲ್ಲಿ 93 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಂತರ, ಪುಷ್ಕರ್​ ಸಿಂಗ್​ ಧಾಮಿ ಅವರು ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್​ ಯೋಜನೆಯ 1120 ಫಲಾನುಭವಿಗಳಿಗೆ ಮೊದಲ ಕಂತಾಗಿ 6.72 ಕೋಟಿ ರೂ.ಗಳ ಡಮ್ಮಿ ಚೆಕ್​ಗಳನ್ನು ವಿತರಿಸಿದರು. ಫಲಾನುಭವಿಗಳಿಗೆ ಬ್ಯಾಂಕ್​ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಈ ಸಭೆಗೂ ಮುನ್ನ ಧಾಮಿ ಅವರು ರಸ್ತೆ ಬದಿಯಲ್ಲಿ ಸ್ಥಳೀಯರೊಂದಿಗೆ ಬಿಸಿ ಚಹಾ ಹೀರುತ್ತಾ ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಂಡರು.

  • Uttarakhand CM Pushkar Singh Dhami was seen plowing the fields in Tiwar village (Division Thulladhar), Tehri. He plowed the fields at the homestay with a power weeder. After this, CM inspected various homestays located in the village. pic.twitter.com/MZmvs5Q2Ll

    — ANI UP/Uttarakhand (@ANINewsUP) February 26, 2023 " class="align-text-top noRightClick twitterSection" data=" ">

ಇದನ್ನೂ ಓದಿ : ChatGPT ಅಪಾಯಕಾರಿಯಾಗುವ ದಿನ ದೂರವಿಲ್ಲ, ನಿಗಾ ಅಗತ್ಯ: OpenAI ಸಿಇಒ ಎಚ್ಚರಿಕೆ

ವಾಕಿಂಗ್​ ವೇಳೆ ಕ್ಷೇತ್ರದ ಜನರ ಸಮಸ್ಯೆ ಆಲಿಸಿದ ಸಿಎಂ ಧಾಮಿ: ಶುಕ್ರವಾರ ಮುಂಜಾನೆ ತವರು ಜಿಲ್ಲೆ ಚಂಪಾವತ್​ಗೆ ಬೇಟಿ ನೀಡಿದ್ದ ಅವರು, ಮುಂಜಾನೆ ವಾಕ್​ ಮಾಡುತ್ತಾ ಸ್ಥಳೀಯರೊಂದಿಗೆ ಸಂಭಾಷಣೆ ನಡೆಸಿದ್ದರು. ಹಿರಿಯರು ಕಿರಿಯರೆನ್ನದೇ ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿದ ಮುಖ್ಯಮಂತ್ರಿಗಳ ನಡೆಗೆ ಜನರು ಹರ್ಷ ವ್ಯಕ್ತಪಡಿಸಿದರು.

45ನೇ ವಯಸ್ಸಿಗೆ ಸಿಎಂ ಪಟ್ಟ: 1990ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪುಷ್ಕರ್​ ಸಿಂಗ್​ ಧಾಮಿ, 1999ರ ವರೆಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ನಲ್ಲಿ (ಎಬಿವಿಪಿ) ಹಾಗೂ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​)ದಲ್ಲೂ ಗುರುತಿಸಿಕೊಂಡಿದ್ದರು. 2008 ರವರೆಗೆ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು. ಧಾಮಿ ಕುಮಾವೂನ್​​ ಪ್ರದೇಶದಲ್ಲಿ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. 2021ರಲ್ಲಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರಥ್​ ಸಿಂಗ್​ ರಾಜೀನಾಮೆ ಬಳಿಕ ರಾಜ್ಯದ 11ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಇದನ್ನೂ ಓದಿ: ಮನ್​ ಕೀ ಬಾತ್​ನಲ್ಲಿ ರಾಜ್ಯದ "ಲಾಲಿ ಹಾಡು" ಪ್ರಸಾರ: ಜೋಗುಳ ಗೀತೆಗೆ ಮೋದಿ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.