ETV Bharat / bharat

ಬಿಜೆಪಿ ಶಾಸಕನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಘರ್ಷ: ಇಬ್ಬರು ಸಾವು

ಮಧ್ಯಪ್ರದೇಶ ಜಬೇರಾ ಕ್ಷೇತ್ರದ ಬಿಜೆಪಿ ಶಾಸಕನ ಜನ್ಮದಿನದ ಸಂಭ್ರಮದ ವೇಳೆ ಉಂಟಾದ ಸಂಘರ್ಷದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

author img

By

Published : Mar 6, 2021, 8:29 PM IST

MLA Dharmendra Lodhi
MLA Dharmendra Lodhi

ದಾಮೋಹಾ (ಮಧ್ಯಪ್ರದೇಶ): ಬಿಜೆಪಿ ಶಾಸಕನೋರ್ವನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಘರ್ಷ ಉಂಟಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಬಿಜೆಪಿ ಶಾಸಕ ಧರ್ಮೇಂದ್ರ ಲೂಧಿ ರಾತ್ರಿ ವೇಳೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ವೇಳೆ ಸಂಘರ್ಷ ಏರ್ಪಟ್ಟಿದ್ದು, ಈ ವೇಳೆ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಮೃತರನ್ನ ಜೋಗೇಂದ್ರ ಸಿಂಗ್​ ಹಾಗೂ ಅರವಿಂದ್ ಜೈ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸಾರ್ವಜನಿಕರ ಕೋಪದಿಂದ ಬಿಜೆಪಿಗೆ ತೊಂದರೆಯಿಲ್ಲ, ಅದು ಇವಿಎಂಗಳ ಮೇಲೆ ಅವಲಂಬಿತ: ದಿಗ್ವಿಜಯ್​

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿರುವ ಅರವಿಂದ್ ಜೈ ಶಾಸಕರ ಪ್ರತಿನಿಧಿಯಾಗಿದ್ದು, ಜೋಗೇಂದ್ರ ಅತಿಥಿ ಉಪನ್ಯಾಸಕನಾಗಿದ್ದನು ಎಂದು ತಿಳಿದು ಬಂದಿದೆ. ಘಟನೆ ನಡೆದ ವೇಳೆ ಶಾಸಕರು ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.