ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಉಗ್ರರ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ರಾಜೌರಿಯಿಂದ 25 ಕಿಮೀ ದೂರ ಇರುವ ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದು, ಇದರಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದರೆ, ದುರಾದೃಷ್ಟವಶಾತ್ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಅದರಲ್ಲಿ ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ.
ರಾಜೌರಿಯ ದರ್ಹಾಲ್ ಪ್ರದೇಶದ ಪರ್ಗಲ್‌ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ಉಗ್ರರು ದಾಟಲು ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸೇನೆ, ಉಗ್ರರ ಮೇಲೆ ದಾಳಿ ನಡೆಸಿದೆ. ಈ ವೇಳೆ ಉಗ್ರರು ಮತ್ತು ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಸ್ಥಳದಲ್ಲೇ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ದುರಾದೃಷ್ಟವಶಾತ್ ಮೂವರು ಯೋಧರು ಹುತಾತ್ಮರಾದರು. ಅಲ್ಲದೇ, ಇನ್ನಿಬ್ಬರು ಗಾಯಗೊಂಡಿದ್ದು, ಓರ್ವ ಯೋಧನ ಸ್ಥಿತಿ ಗಂಭೀರವಾಗಿದೆ.
ದಾಳಿಯ ಬಳಿಕ ದರ್ಹಾಲ್ ಪಿಎಸ್‌ನಿಂದ 6 ಕಿಮೀ ದೂರದಲ್ಲಿರುವ ಸ್ಥಳಕ್ಕೆ ಹೆಚ್ಚುವರಿ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ. ಉಗ್ರರ ಬೇಟೆಯಾಡುವ ಕಾರ್ಯಾಚರಣೆ ಮುಂದುವರಿದಿದೆ.
ಇಬ್ಬರು ಪಾಕ ಪ್ರಜೆಗಳ ಬಂಧನ: ಇನ್ನೊಂದೆಡೆ ಗಡಿ ದಾಟಿ ಬಂದ ಇಬ್ಬರು ಪಾಕಿಸ್ತಾನ ಪ್ರಜೆಗಳನ್ನು ಬಿಎಸ್ಎಫ್ ಯೋಧರು ಬಂಧಿಸಿದ್ದಾರೆ. ಪಂಜಾಬ್ನ ಭಾರತ ಪಾಕ್ ಗಡಿಯ ಡೇರಾ ಬಾಬಾ ನಾನಕ್ ಪೋಸ್ಟ್ ಬಳಿ ಪಾಕಿಸ್ತಾನಿಯರು ಗಡಿ ಬಂದಾಗ ಗಸ್ತಿನಲ್ಲಿದ್ದ ಯೋಧರು ಬಂಧಿಸಿ ವಿಚಾರಣೆ ನಡೆಸಿದರು.
ಇವರನ್ನು ಬಾಜ್ವಾ ಜಿಲ್ಲೆಯ ನರೋವಲ್ ನಿವಾಸಿಗಳಾದ ಸಾಜಿದ್ ಮಸಿಹ್ ಅವರ ಪುತ್ರ ರಬೀಜ್ ಮಸಿಹ್ ಎಂದು ಗುರುತಿಸಲಾಗಿದೆ. ಶೋಧದ ವೇಳೆ 500 ರೂಪಾಯಿ ಪಾಕಿಸ್ತಾನಿ ಕರೆನ್ಸಿ, ಎರಡು ಗುರುತಿನ ಚೀಟಿಗಳು, ತಂಬಾಕು ಪ್ಯಾಕೆಟ್ ಮತ್ತು 2 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.
ಇದನ್ನು ಓದಿ: ಬುದ್ಗಾಮ್ ಎನ್ಕೌಂಟರ್: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ