ETV Bharat / bharat

ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಡಲು 1 ಕಿ.ಮೀ​ ಓಡಿದ ಟ್ರಾಫಿಕ್​ ಪೊಲೀಸ್​​: ರಿಯಲ್​ ಹೀರೋಗೆ ಮೆಚ್ಚುಗೆ ಮಹಾಪೂರ! - ಪೊಲೀಸ್​ ಕಾನ್ಸ್​ಟೇಬಲ್​ ಬಾಬ್ಜಿ ಸುದ್ದಿ

ಟ್ರಾಫಿಕ್​ನಲ್ಲಿ ನಿಂತುಕೊಂಡಿದ್ದ ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಪೊಲೀಸ್​ವೋರ್ವ ಬರೋಬ್ಬರಿ 1 ಕಿಲೋ ಮೀಟರ್​ ಓಡಿದ್ದು, ಇದೀಗ ಅವರ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Traffic police Babji
Traffic police Babji
author img

By

Published : Nov 5, 2020, 8:23 PM IST

Updated : Nov 5, 2020, 8:30 PM IST

ಹೈದರಾಬಾದ್​: ಟ್ರಾಫಿಕ್ ಪೊಲೀಸ್​​ವೊಬ್ಬರು ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಡಲು ಬರೋಬ್ಬರಿ 1 ಕಿಲೋ ಮೀಟರ್​ ಓಡಿ, ಟ್ರಾಫಿಕ್ ಜಾಮ್​ ತೆರವುಗೊಳಿಸಿ ನಿಜವಾದ ಹೀರೋ ಆಗಿ ಹೊರಹೊಮ್ಮಿದ್ದಾರೆ.

ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಡಲು 1 ಕಿ.ಮೀ​ ಓಡಿದ ಟ್ರಾಫಿಕ್​ ಪೊಲೀಸ್

ಹೈದರಾಬಾದ್​ನಲ್ಲಿ ಟ್ರಾಫಿಕ್​ ಪೊಲೀಸ್​ ಆಗಿ ಸೇವೆ ಸಲ್ಲಿಸುತ್ತಿದ್ದ ಕಾನ್ಸ್​ಟೇಬಲ್​ ಬಾಬ್ಜಿ ನಿಜವಾದ ಹೀರೋ ಆಗಿ ಹೊರಹೊಮ್ಮಿದು ಅವರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇಲ್ಲಿನ ಜಿಪಿಓ ಜಂಕ್ಷನ್​ ಹಾಗೂ ಕೋಟಿ ಆಂಧ್ರ ಬ್ಯಾಂಕ್​ ನಡುವಿನ ರಸ್ತೆಯಲ್ಲಿ ನಿನ್ನೆ ಸಂಜೆ ಏಕಾಏಕಿ ಟ್ರಾಫಿಕ್ ಜಾಮ್​ ಆಗಿದ್ದು, ಇದೇ ರಸ್ತೆಯಲ್ಲಿ ಆ್ಯಂಬುಲೆನ್ಸ್​​​​ ಆಗಮಿಸಿದೆ. ಅದು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದಂತೆ, ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಬಾಬ್ಜಿ ತಕ್ಷಣವೇ ಜಿಪಿಒ ಜಂಕ್ಷನ್​​ನಿಂದ ಕೋಟೆ ಕಡೆಗೆ ಓಡಿ ಹೋಗುವುದರ ಜತೆಗೆ ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಪೊಲೀಸ್​ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಂದ ಸನ್ಮಾನ

ಟ್ರಾಫಿಕ್​ ಪೊಲೀಸ್​ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಿರಿಯ ಅಧಿಕಾರಿಗಳು, ಬಾಬ್ಜಿ ಅವರಿಗೆ ಅಭಿನಂದನೆ ಸಲ್ಲಿಸುವುದರ ಜತೆಗೆ ಸನ್ಮಾನಿಸಿದ್ದಾರೆ. ಹಿರಿಯ ಪೊಲೀಸ್​ ಅಧಿಕಾರಿ ಅಂಜನಿ ಕುಮಾರ್​ ಖುದ್ದಾಗಿ ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Nov 5, 2020, 8:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.