ETV Bharat / bharat

ತಾಯಿಗೆ ಕೊರೊನಾ, 8 ವರ್ಷದ ಬಾಲಕನ ಹಸಿವು ನೀಗಿಸಿದ ಡ್ಯಾನ್ಸಿಂಗ್​ ಪೊಲೀಸ್​.. ವಿಡಿಯೋ

ತಾಯಿ ಟ್ರಾಫಿಕ್​ ಪೊಲೀಸ್ ರಂಜಿತ್​ಗೆ ಫೋನ್​ ಮಾಡಿದ್ದಾರೆ. ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ರಂಜಿತ್​ ಆಲೋಚಿಸದೇ ಹೋಟೆಲ್​ನಿಂದ ಆಹಾರವನ್ನು ಪಾರ್ಸಲ್​ ತಂದು ಆ ಬಾಲಕನಿಗೆ ಕೊಟ್ಟಿದ್ದಾರೆ..

Indore, Madhya Pradesh  Traffic Constable helps a Covid positive family in Indore  Madhya Pradesh News  Indore News  MP Covid-19 Update  8 ವರ್ಷದ ಬಾಲಕನ ಹಸಿವು ನಿಗಿಸಿದ ಡ್ಯಾನ್ಸಿಂಗ್​ ಪೊಲೀಸ್  ಇಂದೋರ್​ನಲ್ಲಿ 8 ವರ್ಷದ ಬಾಲಕನ ಹಸಿವು ನಿಗಿಸಿದ ಡ್ಯಾನ್ಸಿಂಗ್​ ಪೊಲೀಸ್  ಇಂದೋರ್​ ಕೊರೊನಾ ಸುದ್ದಿ
8 ವರ್ಷದ ಬಾಲಕನ ಹಸಿವು ನಿಗಿಸಿದ ಡ್ಯಾನ್ಸಿಂಗ್​ ಪೊಲೀಸ್
author img

By

Published : Apr 30, 2021, 11:40 AM IST

ಇಂದೋರ್ : ತಾಯಿಗೆ ಕೊರೊನಾ ಇದ್ದ ಕಾರಣ 8 ವರ್ಷದ ಬಾಲಕನೊಬ್ಬ ಆಹಾರ ತ್ಯಜಿಸಿದ್ದ ಘಟನೆ ಇಂದೋರ್​ನಲ್ಲಿ ಕಂಡು ಬಂದಿದೆ.

ತಾಯಿಗೆ ಕೊರೊನಾ ಇದ್ದ ಕಾರಣ ಕೋವಿಡ್​ ಕೇರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಯಿಂದ ದೂರ ಉಳಿದ ಮಗ ಆಕೆಯ ನೆನಪಿನಲ್ಲಿ ಆಹಾರ ತ್ಯಜಿಸಿದ್ದನು. ಇದರಿಂದಾಗಿ ತಂದೆ-ತಾಯಿ ಇಬ್ಬರು ಚಿಂತೆಗೀಡಾಗಿದ್ದರು.

8 ವರ್ಷದ ಬಾಲಕನ ಹಸಿವು ನೀಗಿಸಿದ ಡ್ಯಾನ್ಸಿಂಗ್​ ಪೊಲೀಸ್..

ತಂದೆ ಬಳಿಯಿದ್ದ ಮಗ ಊಟ ಮಾಡದೇ ತಾಯಿಯ ನೆನಪಿನಲ್ಲೇ ಕಾಲ ಕಳೆಯುತ್ತಿದ್ದನು. ವಿಡಿಯೋ ಕರೆ ಮೂಲಕ ಮಾತನಾಡಿದ್ರೂ ಸಹ ಆ ಬಾಲಕ ತಾಯಿಯ ಗುಂಗಿನಲ್ಲೇ ಇರುತ್ತಿದ್ದನು. ತಾಯಿ ಎಷ್ಟೇ ಹೇಳಿದ್ರೂ ಮತ್ತು ಪ್ರಯತ್ನಿಸಿದ್ರೂ ಸಹ ಆ ಬಾಲಕ ಊಟ ಮಾಡಲು ನಿರಾಕರಿಸುತ್ತಿದ್ದನು.

ತಾಯಿ ಒಳ್ಳೆ ಐಡಿಯಾ : ಇಲ್ಲಿ ತಂದೆ-ತಾಯಿಯಂದ್ರು ಮಕ್ಕಳನ್ನು ವಾಯುವಿವಾರಕ್ಕೆ ಕರೆದುಕೊಂಡು ಹೋಗುತ್ತಿರುತ್ತಾರೆ. ಈ ಪ್ರದೇಶದಲ್ಲಿ ಟ್ರಾಫಿಕ್​ ಪೊಲೀಸ್​ ರಂಜಿತ್​ ಎಲ್ಲರಿಗು ಚಿರ ಪರಿಚಿತ ಮತ್ತು ಅವರು ಟ್ರಾಫಿಕ್​ ಸಿಗ್ನಲ್​ ಬಳಿ ಡ್ಯಾನ್ಸ್​ ಮಾಡುತ್ತಲೇ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ, ಇವರಂದ್ರೆ ಮಕ್ಕಳಿಗೆ ಬಹಳ ಪ್ರೀತಿ.

ತಾಯಿ ಟ್ರಾಫಿಕ್​ ಪೊಲೀಸ್ ರಂಜಿತ್​ಗೆ ಫೋನ್​ ಮಾಡಿದ್ದಾರೆ. ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ರಂಜಿತ್​ ಆಲೋಚಿಸದೇ ಹೋಟೆಲ್​ನಿಂದ ಆಹಾರವನ್ನು ಪಾರ್ಸಲ್​ ತಂದು ಆ ಬಾಲಕನಿಗೆ ಕೊಟ್ಟಿದ್ದಾರೆ.

ರಂಜಿತನನ್ನು ನೋಡಿದ ಬಾಲಕ ತುಂಬಾನೇ ಇಷ್ಟಪಟ್ಟು, ಪೊಲೀಸ್ ನೀಡಿದ ಆಹಾರವನ್ನು ಹೊಟ್ಟೆ ತುಂಬಾ ತಿಂದಿದ್ದಾನೆ. ಬಳಿಕ ನೀವು ನೀಡಿದ ಆಹಾರ ತುಂಬಾ ಚೆನ್ನಾಗಿತ್ತು. ಐ ಲವ್​ ಯು ಅಂಕಲ್​ ಎಂದು ವಿಡಿಯೋ ಸಂದೇಶ ಸಹ ಕಳುಹಿಸಿದ್ದಾರೆ.

ತಾಯಿಯ ಮಾತಿನಂತೆ ಪೊಲೀಸ್​ ರಂಜಿತ್​ ಆ ಬಾಲಕನ ಹಸಿವನ್ನು ನೀಗಿಸುವಲ್ಲಿ ಸಹಾಯ ಮಾಡಿ ಮಾನವೀಯತೆ ಮೆರೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.