ETV Bharat / bharat

ಭಾರಿ ಮಳೆ.. ಹಿಮಾಚಲದಲ್ಲಿ ಟೊಮೆಟೋ ಬೆಳೆ ನಾಶ.. 120 ರಿಂದ 150ಕ್ಕೆ ಏರಿದ ಬೆಲೆ

ಹಿಮಾಚಲ ಪ್ರದೇಶದಿಂದ ದೇಶದ ವಿವಿಧ ಮಂಡಿಗಳಿಗೆ ಟೊಮೆಟೋ ಪೂರೈಕೆಯಾಗುತ್ತಿದೆ. ಆದರೆ ಧಾರಾಕಾರ ಮಳೆಗೆ ರೈತರ ಬೆಳೆ ನಾಶವಾಗಿದೆ. ಅಲ್ಲದೇ, ಭೂಕುಸಿತ ಸಂಭವಿಸಿ ರಸ್ತೆಯೂ ಬಂದ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೂರೈಕೆ ಸರಪಳಿಯ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೋ ಪೂರೈಕೆಯಾಗದ ಕಾರಣ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಟೊಮೆಟೋ ಬೆಳೆ
ಟೊಮೆಟೋ ಬೆಳೆ
author img

By

Published : Jul 11, 2023, 7:21 PM IST

ಸೋಲನ್‌ನಲ್ಲಿ ಟೊಮೆಟೊ ವ್ಯಾಪಾರಿ ಜಗದೀಶ್ ಅವರು ಮಾತನಾಡಿದರು

ಸೋಲನ್ : ಹಿಮಾಚಲ ಪ್ರದೇಶದಲ್ಲಿ ಸತತ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ ರೈತರ ಬೆಳೆಗಳಿಗೂ ಹಾನಿಯಾಗಿದೆ. ಈ ದಿನಗಳಲ್ಲಿ ದೇಶಾದ್ಯಂತ ಹಿಮಾಚಲದಿಂದ ಟೊಮೆಟೊ ಪೂರೈಕೆಯಾಗುತ್ತಿದೆ. ಇದರಿಂದ ರೈತರಿಗೂ ಉತ್ತಮ ಬೆಲೆ ಸಿಕ್ಕಿತ್ತು. ಆದರೆ ಕಳೆದ 3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ಹಾನಿಗೀಡಾಗಿವೆ.

ಮಾರುಕಟ್ಟೆಗೆ ಆಗಮಿಸುತ್ತಿರುವ ರೈತರ ಬೆಳೆಗೆ ಉತ್ತಮ ಬೆಲೆ : ತರಕಾರಿ ಮಾರುಕಟ್ಟೆ ಸೋಲನ್​ನಲ್ಲಿ ಟೊಮೆಟೊ ಪೂರೈಕೆ ಕಡಿಮೆಯಾಗಿದೆ. ದೇಶಾದ್ಯಂತ ದೊಡ್ಡ ಮಂಡಿಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಕಲ್ಕಾ ಶಿಮ್ಲಾ ಎನ್‌ಎಚ್ 5ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವುದರಿಂದ ಪಂಜಾಬ್, ರಾಜಸ್ಥಾನ, ಬೆಂಗಳೂರು, ಹರಿಯಾಣದ ತರಕಾರಿ ಮಾರುಕಟ್ಟೆ ಏಜೆಂಟ್‌ಗಳು ಸೋಲನ್‌ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ, ರೈತರು ಟೊಮೆಟೊ ಬೆಳೆಯನ್ನು ಮಂಡಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಬೇಡಿಕೆ ಹೆಚ್ಚಿರುವ ಕಾರಣ ಟೊಮೆಟೊ ಬೆಳೆದಿರುವ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಸಬ್ಜಿ ಮಂಡಿ ಸೋಲನ್‌ನಲ್ಲಿ ಮಂಗಳವಾರ ಟೊಮೆಟೊ ಬೆಲೆ ಒಂದು ಕ್ರೇಟ್​ಗೆ ಸುಮಾರು ₹ 2000 ರಿಂದ ₹ 3300 ರವರೆಗೆ ಸಿಕ್ಕಿದೆ. ಒಂದು ಕ್ರೇಟ್‌ ಎಂದರೆ 24 ರಿಂದ 25 ಕೆಜಿಯ ಒಂದು ಬಾಕ್ಸ್.

ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ: ಸಬ್ಜಿ ಮಂಡಿ ಸೋಲನ್‌ನಲ್ಲಿ ಟೊಮೆಟೊ ವ್ಯಾಪಾರ ಮಾಡುತ್ತಿರುವ ಜಗದೀಶ್ ಮಾತನಾಡಿ, 'ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರೈತರಿಗೆ ಉತ್ತಮ ಬೆಲೆ ಸಿಕ್ಕಿದೆ. ಕಳೆದ 3 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಟೊಮೆಟೊ ಬೆಳೆ ಹೊಲದಲ್ಲೇ ಹಾಳಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಂದು ಕ್ರೇಟ್‌ಗೆ ₹ 4000 ವರೆಗೆ ರೈತರಿಗೆ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಏಕೆಂದರೆ ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚು ಮತ್ತು ಈಗ ಬೆಳೆ ಕಡಿಮೆಯಿರುವುದರಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಟೊಮೆಟೊ ಹಂಗಾಮಿನ ಆರಂಭದಲ್ಲಿ ರೈತರಿಗೆ ಒಂದು ಕ್ರೇಟ್ ಟೊಮೆಟೊಗೆ ₹ 800 ರಿಂದ ₹ 1500 ಸಿಗುತ್ತಿತ್ತು. ನಂತರ ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಾದಾಗ ಅದೇ ಬೆಲೆ ₹ 2500ಕ್ಕೆ ತಲುಪಿದ್ದು, ಈಗ ಸತತ ಮಳೆಯಿಂದಾಗಿ ದರ 3000ರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಈ ಬೆಲೆಯು ಪ್ರತಿ ಕ್ರೇಟ್‌ಗೆ ₹ 4000 ವರೆಗೆ ತಲುಪುವ ಸಾಧ್ಯತೆಯಿದೆ.

ದೇಶದ ಪ್ರಮುಖ ಮಂಡಿಗಳಲ್ಲಿ ಟೊಮೆಟೊ ಬೇಡಿಕೆ ಹೆಚ್ಚಳ: ಸೋಲನ್‌ನ ತರಕಾರಿ ಮಾರುಕಟ್ಟೆಯಲ್ಲಿ ಕಳೆದ ವಾರ ಸುಮಾರು 5000 ರಿಂದ 7000 ಕ್ರೇಟ್ ಟೊಮೆಟೊ ಮಾರುಕಟ್ಟೆಗೆ ಬಂದಿತ್ತು. ಇದೀಗ ಈ ಅಂಕಿ - ಅಂಶವು 1000 ರಿಂದ 2000 ಕ್ರೇಟ್‌ಗಳಿಗೆ ತಲುಪಿದೆ. ರೈತರ ಬೆಳೆಗಳು ಹೊಲಗಳಲ್ಲಿ ಹಾನಿಗೊಳಗಾಗಿವೆ ಮತ್ತು ಸಂಪರ್ಕ ಮಾರ್ಗಗಳು ಇನ್ನೂ ಮುಚ್ಚಲ್ಪಟ್ಟಿವೆ. ಇನ್ನು 1ರಿಂದ 2 ದಿನಗಳಲ್ಲಿ ರೈತರಿಗೆ ಹೆಚ್ಚಿನ ಬೆಲೆ ಸಿಗುವ ನಿರೀಕ್ಷೆ ಇದೆ. ಹೀಗಾಗಿ ದೇಶದ ಪ್ರಮುಖ ಮಂಡಿಗಳಲ್ಲಿ ಟೊಮೆಟೊ ಬೇಡಿಕೆ ಹೆಚ್ಚುತ್ತಿದೆ.

ಇದನ್ನೂ ಓದಿ: Tomato price : ಸೇಬಿಗಿಂತ ದುಬಾರಿಯಾದ ಟೊಮೆಟೊ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.