ETV Bharat / bharat

ಭಾರತದ ಮೊದಲ ವಾಟರ್​ ಮೆಟ್ರೋ ಯೋಜನೆಯ ವಿಶೇಷತೆ ಇದು!

ಈ ವಾಟರ್​ ಮೆಟ್ರೊಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ

author img

By

Published : Apr 25, 2023, 5:16 PM IST

This is the specialty of India's first water metro project

ಭಾರತದ ಮೊದಲ ವಾಟರ್​ ಮೆಟ್ರೋ ಸೇವೆ ಕೇರಳದ ಕೊಚ್ಚಿಯಲ್ಲಿ ಆರಂಭವಾಗಿದೆ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್​ ಹೈಬ್ರೀಡ್​ ಬೋಟ್​ಗಳು ಕೊಚ್ಚಿಯ ಸುತ್ತಮುತ್ತಲಿನ 10 ದ್ವೀಪಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಮುದ್ರ ತೀರವನ್ನು ಹೆಚ್ಚಾಗಿ ಹಿಂದಿರುವ ಕೇರಳದಲ್ಲಿ ಈ ವಾಟರ್​ ಮೇಟ್ರೋ ಕೂಡ ನಗರ ಸಮೂಹ ಸಾರಿಗೆ ವ್ಯವಸ್ಥೆಯಂತೆ ಕಾರ್ಯ ನಿರ್ವಹಿಸಲಿದ್ದು, ಕೊಚ್ಚಿಯ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. 1,137 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ವಾಟರ್​ ಮೆಟ್ರೊಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ದೇಶದ ಮೊದಲ ವಾಟರ್​ ಮೆಟ್ರೋ: ಕೊಚ್ಚಿ ಮೆಟ್ರೋ ರೈಲು ಕಾರ್ಪೋರೇಷನ್​ (ಕೆಎಮ್​ಆರ್​ಎಲ್​) ಮೇಲ್ಮೈ ಮೆಟ್ರೋ ಸೇವೆಗಳ ಜೊತೆಗೆ ನೀರಿನ ಮೆಟ್ರೋ ಸೇವೆ ಹೊಂದಿರುವ ದೇಶದ ಏಕೈಕ ಮೆಟ್ರೋ ಎಂಬ ಹೆಗ್ಗಳಿಕೆ ಹೊಂದಿದೆ. ಕೊಚ್ಚಿ ವಾಟರ್​ ಮೆಟ್ರೋ ಏಷ್ಯಾದ ಅತ್ಯುನ್ನತ ಸಮಗ್ರ ನೀರಿನ ಸಾರಿಗೆ ವ್ಯವಸ್ಥೆ ಎಂಬ ಹೊಗ್ಗಳಿಕೆ ಹೊಂದಿದೆ.

ಮೊದಲ ಹಂತದಲ್ಲಿ ಈ ಸೇವೆ ಹೈ ಕೋರ್ಟ್​​ ಟರ್ಮಿನಲ್​ನಿಂದ ವ್ಯಾಪಿನ್​ ಟರ್ಮಿನಲ್​ ವರೆಗೆ ಸೇವೆ ನೀಡಲಿದೆ. ಬಳಿಕ ಈ ಮೆಟ್ರೋ ವ್ಯಾತಿಲ್​ ಕಕ್ಕನಾಡ್​ ವರೆಗೆ ವಿಸ್ತರಣೆ ಆಗಲಿದೆ. ಈ ಕೊಚ್ಚಿ ವಾಟರ್​ 76ಕಿ.ಮೀ ಉದ್ದ ಸಾಗಲಿದ್ದು, 38 ಟರ್ಮಿನಲ್​ ಸಂಪರ್ಕ ಮಾಡಲಿರುವ ಅತಿ ದೊಡ್ಡ ಸಾರಿಗೆ ನೆಟ್​ವರ್ಕ್​ ಹೊಂದಿದೆ. ಮತ್ತೊಂದು ವಿಶೇಷತೆ ಎಂದರೆ, ಈ ಮೆಟ್ರೋ ಸಾಂಪ್ರಾದಾಯಿಕ ಮೆಟ್ರೋ ಸೇವೆ ಅಂತೆ ಅಲ್ಲದೇ, ಇದು ಹಿನ್ನೀರಿನ ಸೌಂದರ್ಯ ಅನುಭವಿಸುವ ಅವಕಾಶವನ್ನು ನೀಡುತ್ತದೆ. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುತ್ತದೆ.

ಕೆಎಮ್​ಆರ್​ಎಲ್​ 50ರಿಂದ 100 ಆಸನ ವ್ಯವಸ್ಥೆ ಹೊಂದಿರುವ 23 ಬೋಟ್​ಗಳನ್ನು ನಿರ್ಮಾಣ ಮಾಡಲಾಗಿದ್ದೆ. 50 ಆಸನ ಹೊಂದಿರುವ 55 ಬೋಟ್​ಗಳು ಈ ಯೋಜನೆ ಅಡಿ ಇದೆ. ಕೊಚ್ಚಿನ್​ ಶಿಪ್​ಯಾರ್ಡ್​​ಗಳು ಆರು ಬೋಟ್​ಗಳನ್ನು ನಿರ್ಮಾಣ ಮಾಡಿದ್ದು, ವಾಟರ್​ ಮೆಟ್ರೋಗೆ ಹಸ್ತಾಂತರಿಸಿದೆ. ಬೋಟ್​ಗಳ ಸುರಕ್ಷತೆ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.

ವಿಶೇಷತೆ: ಈ ಬೋಟ್​ಗಳು ಬ್ಯಾಟರು ಮತ್ತು ಡೀಸೆಲ್​ ಜನರೇಟರ್​ ಆಗಿದ್ದು, ಹೈಬ್ರೀಡ್​ ಮೋಡ್​ನಲ್ಲಿ ಎರಡನ್ನು ಬಳಸಿ ಸಂಚರಿಸಬಹುದು. ರಾತ್ರಿ ಪ್ರಯಾಣದ ವೇಳೆ ನಿರ್ವಾಹಕರಿಗೆ ಸಹಾಯವಾಗಲು ಧರ್ಮಲ್​ ಕ್ಯಾಮೆರ ಅಳವಡಿಸಲಾಗಿದೆ. ಅಲ್ಲದೇ, ಬೋಟ್​ಗಳ ನಡುವಿನ ಅಪಘಾತ ತಪ್ಪಿಸಲು ರಾಡಾರ್​ ವ್ಯವಸ್ಥೆ ಮಾಡಲಾಗಿದೆ. ಕೇವಲ 15 ನಿಮಿಷದಲ್ಲೇ ಇದು ರಿಚಾರ್ಜ್​ ಆಗಿ, ಗರಿಷ್ಟ ಗಂಟೆಗೆ 10 ನಾಟಿಕಲ್​ ಮೈಲು ಸಾಗಲಿದೆ.

ಬೋಟ್​ ಪ್ರಯಾಣದ ಕನಿಷ್ಠ ಟಿಕೆಟ್​ ದರ 20 ರೂಪಾಯಿ ಆಗಿದೆ. ಪ್ರಯಾಣಿಕರಿಗೆ ವಾರಾ ಮತ್ತು ಮಾಸಿಕ ಪಾಸ್​ಗಳು ಲಭ್ಯವಿದೆ. ಈ ಕೊಚ್ಚಿ ವಾಟರ್​ ಮೆಟ್ರೊ ಲಿಥಿಯಂ ಟೈಟಾನೈಟ್​ ಸ್ಪೈನೆಲ್​ ಬ್ಯಾಟರಿಯಿಂದ ನಿರ್ವಹಿಸಲಿದೆ. ಇದು ಪರಿಸರ ಸ್ನೇಹಿ ಯಾಗಿದ್ದು, ಈ ಬೋಟ್​ ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದೆ.

ಇದನ್ನೂ ಓದಿ: ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋ ಸೇವೆ.. ಇಂದು ಪ್ರಧಾನಿ ಮೋದಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.