ಕಾಮರೆಡ್ಡಿ (ತೆಲಂಗಾಣ): ಬೈಕ್ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದರೆ ಟ್ರಾಫಿಕ್ ಪೊಲೀಸರು ಅಡ್ಡಗಟ್ಟಿ ದಂಡ ವಿಧಿಸುವುದನ್ನು ನೋಡಿದ್ದೀವಿ. ಆದರೆ ಇಲ್ಲೊಬ್ಬ ಟ್ರ್ಯಾಕ್ಟರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿರುವ ಅಪರೂಪದ ಘಟನೆ ನಡೆದಿದೆ.
ಕಾಮರೆಡ್ಡಿ ಜಿಲ್ಲೆಯ ಬಿರ್ಕೂರ್ ಮಂಡಲ್ನ ಚಿಂಚೊಳ್ಳಿ ನಿವಾಸಿಯಾಗಿರುವ ಸತೀಶ್ ಎಂಬಾತ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ಚಲನ್ ನೀಡಿದ್ದಾರೆ. ಅಚ್ಚರಿ ಎಂದರೆ ಚಲನ್ನಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕೆ 135 ರೂ.ದಂಡ ವಿಧಿಸಲಾಗಿದೆ ಎಂದು ನಮೂದಿಸಲಾಗಿದೆ.
ಇಷ್ಟೇ ಅಲ್ಲದೆ ನಿಮ್ಮ ವಾಹನವು ಇದಕ್ಕೂ ಮೊದಲು 9 ಬಾರಿ ನಿಯಮ ಉಲ್ಲಂಘಿಸಿದ್ದು, ಅದರ ಒಟ್ಟು ದಂಡದ ಮೊತ್ತ 1035 ರೂ. ಬಾಕಿ ಉಳಿದಿದೆ ಎಂದು ಚಲನ್ನಲ್ಲಿ ದಾಖಲಾಗಿದೆ. ಸದ್ಯ ಪೊಲೀಸರ ಈ ಕ್ರಮ ಎಲ್ಲೆಡೆ ವೈರಲ್ ಆಗಿದ್ದು, ಆಕ್ರೋಶಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಕ್ರೀಡಾಂಗಣದ ಹೆಸರು 'ನರೇಂದ್ರ ಮೋದಿ', ಯಾವುದೇ ಪಂದ್ಯ ಸೋಲಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ಠಾಕ್ರೆ ಟೀಕೆ!