ETV Bharat / bharat

ಕುಡೀಬೇಡ ಎಂದಿದ್ದೇ ತಪ್ಪಾಯ್ತು! ಪತ್ನಿಯನ್ನೇ ಕೊಂದು ಹಾಕಿದ ಶಿಕ್ಷಕ - ಈಟಿವಿ ಭಾರತ ಕನ್ನಡ

ಮದ್ಯಪಾನವನ್ನು ನಿರ್ಬಂಧಿಸಿದ ಹೆಂಡತಿಯನ್ನೇ ಕೊಂದು ಹಾಕುವುದೇ? ಹೌದು, ವೃತ್ತಿಯಲ್ಲಿ ಶಿಕ್ಷಕನಾಗಿದ್ದ ವ್ಯಕ್ತಿಯೊಬ್ಬ ಇಂಥದ್ದೊಂದು ದುಷ್ಕೃತ್ಯ ಎಸಗಿದ್ದಾನೆ. ಇಷ್ಟಕ್ಕೂ ಈ ಘಟನೆ ನಡೆದಿದ್ದೆಲ್ಲಿ? ಈ ವರದಿ ಓದಿ.

murder-in-gariyaband-teacher-kills-wife-in-gariaband-for-wine-husband-murdered-wife-for-stopping-drinking-wine-in-gariaband-crime-news
ವೈನ್​ ಕುಡಿಯಲು ನಿರ್ಬಂಧಿಸಿದ ಪತ್ನಿಯನ್ನು ಕೊಂದ ಶಿಕ್ಷಕ
author img

By

Published : Dec 25, 2022, 6:39 AM IST

Updated : Dec 25, 2022, 7:20 AM IST

ಗರಿಯಾಬಂದ್( ಛತ್ತೀಸ್​ಗಡ): ಮದ್ಯಪಾನವನ್ನು ಒಪ್ಪದ ಪತ್ನಿಯನ್ನು ಶಿಕ್ಷಕ ಕೊಲೆಗೈದಿದ್ದಾನೆ. ಈ ಘಟನೆ ಛತ್ತೀಸ್​​ಘಡದ ಮಜರ್ಕಟ್ಟಾ ಜಿಲ್ಲೆಯ ಗರಿಯಾಬಂದ್‌ನಲ್ಲಿ ನಡೆದಿದೆ. ಹಲ್ಲೆಗೈದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಶುಕ್ರವಾರ ತಡರಾತ್ರಿ ಆರೋಪಿ ದೋಮನಕಾಂತ್​ ಧ್ರುವ ಎಂದಿನಂತೆ ಮದ್ಯಪಾನ ಮಾಡಲು ಮುಂದಾಗಿದ್ದಾನೆ. ಈತನ ಹೆಂಡತಿ ಮೀನಾ ಧ್ರುವ ಕುಡಿಯದಂತೆ ತಿಳಿ ಹೇಳಿ ನಿರ್ಬಂಧಿಸಿದ್ದಾಳೆ. ಇದರಿಂದ ಕುಪಿತನಾದ ಆತ ಕುಡಿದ ಅಮಲಿನಲ್ಲಿ ಆಕೆಯ ತಲೆಗೆ ರಾಡ್‌ನಿಂದ ಹೊಡೆದಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಘಟನೆಯ ಸಂಬಂಧ ಗರಿಯಾಬಂದ್ ಠಾಣೆ ಅಧಿಕಾರಿ ರಾಕೇಶ್ ಮಿಶ್ರಾ ಮಾತನಾಡಿ, ಮಜರ್ಕಟ್ಟಾದಲ್ಲಿ ವಾಸವಾಗಿರುವ ಶಿಕ್ಷಕ ದೋಮನಕಾಂತ್ ಧ್ರುವ ಇಂದಗಾಂವ್‌ನಲ್ಲಿ ಶಿಕ್ಷಕನಾಗಿದ್ದಾನೆ. ಈತನ ಪತ್ನಿ ಮೀನಾ ಧ್ರುವ ಗಂಜೈಪುರಿ ಶಾಲೆಯಲ್ಲಿ ಶಿಕ್ಷಕಿ. ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದರು.

ದೋಮನಕಾಂತ್ ಧ್ರುವ್ ಕುಡಿತದ ಚಟ ಹೊಂದಿದ್ದು ಶುಕ್ರವಾರವೂ ಮದ್ಯಪಾನ ಮಾಡುತ್ತಿದ್ದ. ಪತ್ನಿ ಮೀನಾ ಧ್ರುವ ಮದ್ಯಪಾನ ಮಾಡದಂತೆ ನಿರ್ಬಂಧಿಸಿದ್ದಳು. ಇದರಿಂದ ಕೋಪಗೊಂಡ ಆತ ರಾಡ್‌ನಿಂದ ಆಕೆಯ ತಲೆಗೆ ಹೊಡೆದಿದ್ದು ಮೀನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ.

ಇದನ್ನೂ ಓದಿ : ಪಂಜಾಬ್‌ನಲ್ಲಿ ಆಮ್​ ಆದ್ಮಿ ಪಕ್ಷದ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ

Last Updated : Dec 25, 2022, 7:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.