ಚೆನ್ನೈ: ಕೋವಿಡ್ -19 ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡ ಅನಾಥರಾದ ಮಕ್ಕಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ 5 ಲಕ್ಷ ರೂ. ನೆರವು ಘೋಷಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಈಗಾಗಲೇ ಆರ್ಥಿಕ ನೆರವು ಘೋಷಿಸಿರುವ ರಾಜ್ಯಗಳ ಪಟ್ಟಿಗೆ ತಮಿಳುನಾಡು ಕೂಡ ಸೇರಿಕೊಂಡಿದೆ.
ದೆಹಲಿ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕೇರಳ, ಉತ್ತರಾಖಂಡ, ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳು ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಹಾಯಸ್ತಕ್ಕೆ ಆಸರೆಯಾಗಿವೆ.
ಹೆತ್ತವರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣ ಮತ್ತು ಪಾಲನೆ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಿದರೆ, ಆಂಧ್ರಪ್ರದೇಶ ಸರ್ಕಾರವು ಸೋಂಕಿನಿಂದ ಅನಾಥವಾಗಿರುವ ಪ್ರತಿ ಮಗುವಿಗೆ ₹ 10 ಲಕ್ಷ ಜಮಾ ಮಾಡಲಿದೆ. 'ಮಹತಾರಿ ದುಲಾರ್ ಯೋಜನೆ' ಅಡಿಯಲ್ಲಿ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಛತ್ತೀಸ್‌ಗಢ ಸರ್ಕಾರ ಹೇಳಿದೆ.
ಕೋವಿಡ್‌ನಿಂದ ಪೋಷಕರು ನಿಧನರಾದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ತಿಂಗಳಿಗೆ ₹ 5,000 ಪಿಂಚಣಿ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ತಿಳಿಸಿದೆ. ಮಕ್ಕಳಿಗೆ ಅರ್ಹತೆ ಇಲ್ಲದಿದ್ದರೂ ಉಚಿತ ಪಡಿತರ ನೀಡಲಾಗುವುದು ಎಂದಿದೆ.