ETV Bharat / bharat

ಗುರುದೇವ ರವೀಂದ್ರನಾಥ ಟ್ಯಾಗೋರ್ ಚರ್ಮದ ಬಣ್ಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ - ರವೀಂದ್ರನಾಥ ಟ್ಯಾಗೋರ್ ಕುಟುಂಬ

ನೊಬೆಲ್ ಪುರಸ್ಕೃತ,​ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಕುರಿತು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಡಾ.ಸುಭಾಶ್ ಸರ್ಕಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

subhash-sarkars-comment-on-tagores-skin-clour-sparks-controversy
ಗುರುದೇವ ರವೀಂದ್ರನಾಥ ಟ್ಯಾಗೋರ್ ಚರ್ಮದ ಬಣ್ಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ
author img

By

Published : Aug 19, 2021, 2:02 AM IST

ಕೊಲ್ಕೋತಾ, ಪಶ್ಚಿಮ ಬಂಗಾಳ: ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಡಾ.ಸುಭಾಶ್ ಸರ್ಕಾರ್ ಅವರು ನೊಬೆಲ್ ಪುರಸ್ಕೃತ,​ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೇಂದ್ರ ಸಚಿವರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

ರವೀಂದ್ರನಾಥ ಟ್ಯಾಗೋರ್ ಅವರ ಕುಟುಂಬದ ಸದಸ್ಯರು ಎಲ್ಲರೂ ಸುಂದರವಾಗಿದ್ದು, ರವೀಂದ್ರನಾಥ ಟ್ಯಾಗೋರ್ ಅವರ ಚರ್ಮದ ಬಣ್ಣ ಸುಂದರವಾಗಿರಲಿಲ್ಲ. ಅದರಿಂದಾಗಿ ಟ್ಯಾಗೋರ್ ಅವರನ್ನು ಅಪ್ಪಿಕೊಳ್ಳಲು ಸ್ವತಃ ಅವರ ತಾಯಿ ನಿರಾಕರಿಸುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ಟ್ಯಾಗೋರ್ ಅವರು ಮಹಾನ್ ವ್ಯಕ್ತಿಯಾದರು ಎಂದು ಸುಭಾಶ್ ಸರ್ಕಾರ್ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.

ರವೀಂದ್ರನಾಥ ಟ್ಯಾಗೋರ್ ಅವರು ಸ್ಥಾಪಿಸಿದ್ದ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಸುಭಾಶ್ ಸರ್ಕಾರ್ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಈ ವೇಳೆ ವಿವಿಯ ಕುಲಪತಿಗಳೂ ಹಾಜರಿದ್ದರು ಎಂದು ತಿಳಿದುಬಂದಿದೆ.

ಸಾಕಷ್ಟು ವಿವಾದಗಳ ನಂತರ ಪ್ರತಿಕ್ರಿಯೆ ನೀಡಿರುವ ಟ್ಯಾಗೋರ್ ಕುಟುಂಬದ ಸದಸ್ಯರಾದ ಸುಪ್ರಿಯೋ ಟ್ಯಾಗೋರ್, ರವೀಂದ್ರನಾಥ ಟ್ಯಾಗೋರ್ ಅವರೇ ಸ್ವತಃ ತಮ್ಮ ಚರ್ಮದ ಬಣ್ಣ ಸುಂದರವಾಗಿಲ್ಲ ಎಂದು ಒಪ್ಪಿಕೊಂಡಿದ್ದರು. ಆದರೆ ಅವರ ತಾಯಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಅಪ್ಪಿಕೊಳ್ಳಲು ಹಿಂಜರಿಯುತ್ತಿದ್ದರು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಇದನ್ನೂ ಓದಿ :Afghanistan Row: ಪಲಾಯನದ ನಂತರ ಮೊದಲ ಬಾರಿಗೆ ಮೌನ ಮುರಿದ ಅಶ್ರಫ್ ಘನಿ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.