ಮುಂಬೈ, ಮಹಾರಾಷ್ಟ್ರ: ವಿಶ್ವಸಂಸ್ಥೆಯ ಸಮುದ್ರ ಕಾನೂನನ್ನು (UNCLOS-UN Convention on the Law of the Sea) ಕೆಲವು ಬೇಜವಾಬ್ದಾರಿ ರಾಷ್ಟ್ರಗಳು ಪಕ್ಷಪಾತ ಧೋರಣೆ ಹಾಗೂ ಆಕ್ರಮಣಕಾರಿ ಪ್ರವೃತ್ತಿ ತೋರುವ ಮೂಲಕ ತಪ್ಪಾಗಿ ಅರ್ಥೈಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಚೀನಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಜಲಾಂತರ್ಗಾಮಿ ವಿರೋಧಿ ನೌಕೆಯಾದ ಐಎನ್‌ಎಸ್ ವಿಶಾಖಪಟ್ಟಣಂ (INS Visakhapatnam) ಅನ್ನು ಭಾರತೀಯ ನೌಕಾಪಡೆಗೆ (Indian Navy) ಸೇರ್ಪಡೆಗೊಳಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಚೀನಾದ ವಿದೇಶಾಂಗ, ಸಾಗರೋತ್ತರ ನೀತಿಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಭಾರತವು ಕಡಲ ರಕ್ಷಣೆ ವಿಚಾರದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿದೆ. ಭಾರತ ಎಲ್ಲಾ ರಾಷ್ಟ್ರಗಳ ಏಕತೆಯನ್ನು ಆಧಾರವಾಗಿರಿಸಿಕೊಂಡ ತತ್ವಗಳನ್ನು ಬೆಂಬಲಿಸುತ್ತದೆ. ಯಾವಾಗಲೂ ಶಾಂತಿಯುತವಾದ ಮತ್ತು ಪರಸ್ಪರರ ನಿಯಮಗಳಿಗೆ ಬದ್ಧವಾದ ರಕ್ಷಣಾ ವ್ಯವಸ್ಥೆಯನ್ನು ಭಾರತ ಬಯಸುತ್ತದೆ. ಕೆಲವು ರಾಷ್ಟ್ರಗಳು ತಮಗೆ ಬೇಕಾದಂತೆ ಕಾನೂನುಗಳನ್ನು ತಿರುಚುತ್ತಿವೆ ಎಂದು ರಾಜನಾಥ ಸಿಂಗ್ ಹೇಳಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ (Indo- pecific Region) ಎಲ್ಲಾ ರಾಷ್ಟ್ರಗಳ ಹಿತಾಸಕ್ತಿಗೆ ಭಾರತ ಬೆಂಬಲ ನೀಡುತ್ತದೆ. ಅದರ ಜೊತೆಗೆ ನೌಕಾ ಸ್ವಾತಂತ್ರ್ಯಕ್ಕೂ ಬೆಂಬಲ ನೀಡುತ್ತದೆ ಎಂದು ರಾಜನಾಥ್ ಸಿಂಗ್ (Rajanath singh) ಹೇಳಿದ್ದಾರೆ. ಚೀನಾ ಇಂಡೋ-ಪೆಸಿಫಿಕ್ ಭಾಗದಲ್ಲಿ ತನ್ನ ಮಿಲಿಟರಿ ಪ್ರಾಬಲ್ಯವನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ. ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿವೆ.
-
Today marks a milestone for our country as the indigenously built 1st stealth guided-missile destroyer ship of Project 15B, #INSVisakhapatnam is commissioned into the Indian Navy under the 'Make in India' initiative. #Vigilant #Valiant #Victorious pic.twitter.com/0SNL39a2uP
— Nitin Gadkari (@nitin_gadkari) November 21, 2021 " class="align-text-top noRightClick twitterSection" data="
">Today marks a milestone for our country as the indigenously built 1st stealth guided-missile destroyer ship of Project 15B, #INSVisakhapatnam is commissioned into the Indian Navy under the 'Make in India' initiative. #Vigilant #Valiant #Victorious pic.twitter.com/0SNL39a2uP
— Nitin Gadkari (@nitin_gadkari) November 21, 2021Today marks a milestone for our country as the indigenously built 1st stealth guided-missile destroyer ship of Project 15B, #INSVisakhapatnam is commissioned into the Indian Navy under the 'Make in India' initiative. #Vigilant #Valiant #Victorious pic.twitter.com/0SNL39a2uP
— Nitin Gadkari (@nitin_gadkari) November 21, 2021
ಏನಿದು ಸಮುದ್ರ ಕಾನೂನು?: ಸಮುದ್ರ ಕಾನೂನು ವಿಶ್ವಸಂಸ್ಥೆ 1982ರ ಡಿಸೆಂಬರ್ 10ರಂದು ರೂಪಿಸಿರುವ ಅಂತಾರಾಷ್ಟ್ರೀಯ ಕಾನೂನಾಗಿದೆ. ಸಮುದ್ರದ ಕುರಿತ ಕಾನೂನುಗಳುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತದೆ. ಒಟ್ಟು 157 ರಾಷ್ಟ್ರಗಳು ಈ ಕಾನೂನಿಗೆ ಸಹಿ ಹಾಕಿವೆ. 1994ರ ನವೆಂಬರ್ 16ರಿಂದ ಈ ಕಾನೂನು ಜಾರಿಗೆ ಬಂದಿದೆ.
ಇದನ್ನೂ ಓದಿ: ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್‌ನ ಬಂಧನ