ETV Bharat / bharat

ಹಬ್ಬದ ಖರೀದಿ: ಕ್ರೆಡಿಟ್​ ಕಾರ್ಡ್ ಬಳಸುವ ಸ್ಮಾರ್ಟ್​ ಟಿಪ್ಸ್​

ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿ ಮಾಡಿದ ನಂತರ ನೀವು 30 ರಿಂದ 40 ದಿನಗಳ ಸಮಯವನ್ನು ಪಡೆಯುತ್ತೀರಿ. ಬಿಲ್ಲಿಂಗ್ ದಿನಾಂಕದ ಆರಂಭದಲ್ಲಿ ಕಾರ್ಡ್ ಬಳಸಿದಾಗ ಮಾತ್ರ ನೀವು ಈ ಪ್ರಯೋಜನ ಪಡೆಯಬಹುದು.

ಹಬ್ಬದ ಖರೀದಿ: ಕ್ರೆಡಿಟ್​ ಕಾರ್ಡ್ ಬಳಸುವ ಸ್ಮಾರ್ಟ್​ ಟಿಪ್ಸ್​
Smart tips for using credit cards wisely
author img

By

Published : Oct 24, 2022, 11:35 AM IST

ಹೈದರಾಬಾದ್: ಆಕರ್ಷಕ ಡಿಸ್ಕೌಂಟ್ ಮತ್ತು ಆಫರ್​ಗಳ ಮೂಲಕ ಕ್ರೆಡಿಟ್ ಕಾರ್ಡ್​ ಕಂಪನಿಗಳು ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತವೆ. ನೀವು ಖರೀದಿ ಮಾಡುವಾಗ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ 5 ರಿಂದ 10 ರವರೆಗೆ ಉಳಿತಾಯವಾಗುವುದು ನಿಜ. ಆದರೆ, ಹೀಗೆ ಕಾರ್ಡ್ ಬಳಸುವಾಗ ಕೆಲವೊಂದಿಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಸುರಕ್ಷಿತ ಹಾಗೂ ಜಾಣ್ಮೆಯಿಂದ ಕ್ರೆಡಿಟ್​ ಕಾರ್ಡ್ ಬಳಸುವ ಕೆಲ ಟಿಪ್ಸ್​ ಇಲ್ಲಿವೆ.

ನಿಮ್ಮ ಕಾರ್ಡ್ ಬಗ್ಗೆ ತಿಳಿದುಕೊಳ್ಳಿ: ನಿಮ್ಮ ಕಾರ್ಡ್‌ನ ಕ್ರೆಡಿಟ್ ಲಿಮಿಟ್ ಎಷ್ಟು? ನೀವು ಅದರಲ್ಲಿ ಎಷ್ಟು ಬಳಸಿದ್ದೀರಿ? ಬಿಲ್ ಬಾಕಿ ಎಷ್ಟು? ಈ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಿ. ಹೊಸ ಖರೀದಿಯನ್ನು ಮಾಡುವ ಮೊದಲು ರಿವಾರ್ಡ್ ಪಾಯಿಂಟ್‌ಗಳು ಮತ್ತು ಬಿಲ್ಲಿಂಗ್ ಬಾಕಿ ದಿನಾಂಕಗಳನ್ನು ಪರಿಶೀಲಿಸಿ. ಆಗ ಮಾತ್ರ, ಯಾವ ಕಾರ್ಡ್ ಅನ್ನು ಬಳಸಬೇಕು ಮತ್ತು ಮೊತ್ತವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ನೀವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಹೀಗೆ ಪ್ರಾರಂಭಿಸಿ: ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿ ಮಾಡಿದ ನಂತರ ನೀವು 30 ರಿಂದ 40 ದಿನಗಳ ಸಮಯವನ್ನು ಪಡೆಯುತ್ತೀರಿ. ಬಿಲ್ಲಿಂಗ್ ದಿನಾಂಕದ ಆರಂಭದಲ್ಲಿ ಕಾರ್ಡ್ ಅನ್ನು ಬಳಸಿದಾಗ ಮಾತ್ರ ನೀವು ಈ ಪ್ರಯೋಜನವನ್ನು ಪಡೆಯಬಹುದು. ಉದಾಹರಣೆಗೆ, ನಿಮ್ಮ ಬಿಲ್ಲಿಂಗ್ ದಿನಾಂಕವು 8 ರಿಂದ ಪ್ರಾರಂಭವಾಗುತ್ತದೆ ಎಂದು ತಿಳಿದರೆ, ನಂತರ 9 ಮತ್ತು 15 ರ ದಿನಾಂಕದ ನಡುವಿನ ಖರೀದಿಗಳು ನಿಮಗೆ ಸಮಯದ ಪ್ರಯೋಜನವನ್ನು ನೀಡುತ್ತದೆ.

ರಿಯಾಯಿತಿಗಳನ್ನು ಬಿಡಬೇಡಿ: ಕೆಲವು ಬ್ರ್ಯಾಂಡ್‌ಗಳು ಕ್ರೆಡಿಟ್ ಕಾರ್ಡ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ ಮತ್ತು ಸಾಮಾನ್ಯ ರಿಯಾಯಿತಿಗಳನ್ನು ಮೀರಿ ವಿಶೇಷ ರಿಯಾಯಿತಿಗಳನ್ನು ನೀಡುತ್ತವೆ. ಇದು ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ ದೊರೆಯುತ್ತದೆ. ಎರಡು ಅಥವಾ ಮೂರು ಕಾರ್ಡ್‌ಗಳನ್ನು ಹೊಂದಿರುವವರು ಯಾವ ಕಾರ್ಡ್‌ನಿಂದ ಹೆಚ್ಚಿನ ರಿಯಾಯಿತಿ ಪಡೆಯುತ್ತಾರೆ ಎಂಬುದನ್ನು ತಿಳಿದಿರಬೇಕು. ಇದರಿಂದ ಅವರು ಸ್ವಲ್ಪ ಹಣವನ್ನು ಉಳಿಸಬಹುದು.

ರಿವಾರ್ಡ್ ಪಾಯಿಂಟ್‌ಗಳು: ಕ್ರೆಡಿಟ್ ಕಾರ್ಡ್‌ಗಳು ನೀಡುವ ರಿವಾರ್ಡ್ ಪಾಯಿಂಟ್‌ಗಳನ್ನು ಟ್ರ್ಯಾಕ್ ಮಾಡಬೇಕಾಗುತ್ತದೆ. ಖರೀದಿಗಳನ್ನು ಮಾಡುವಾಗ ಅವುಗಳನ್ನು ಬಳಸುವ ಅವಕಾಶವನ್ನು ಬಿಟ್ಟುಬಿಡಬೇಡಿ. ಈ ಅಂಕಗಳು ನಿಮಗೆ ಕ್ಯಾಶ್ ಬ್ಯಾಕ್ ನೀಡುತ್ತವೆಯೇ ಎಂಬುದನ್ನು ಪರಿಶೀಲಿಸಿ. ನಿಮಗೆ ಇದರ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೆ, ಕಾರ್ಡ್ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಮತ್ತು ಎಲ್ಲ ವಿವರಗಳನ್ನು ಪಡೆಯಿರಿ. ಖರೀದಿಗಳ ಮೇಲೆ ನಿಮಗೆ ಹೆಚ್ಚಿನ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವ ಕಾರ್ಡ್ ಅನ್ನು ಬಳಸುವುದು ಉತ್ತಮ.

EMI ಗಳು: ಅನೇಕ ಕ್ರೆಡಿಟ್ ಕಾರ್ಡ್‌ಗಳು ಯಾವುದೇ ವೆಚ್ಚವಿಲ್ಲದ ಇಎಂಐ ಸೌಲಭ್ಯ ನೀಡುತ್ತವೆ. ನಿಮ್ಮ ಕೈಯಲ್ಲಿ ಖರೀದಿಗೆ ಸಾಕಷ್ಟು ಹಣವಿಲ್ಲದಿದ್ದರೆ, ನೀವು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆದರೆ ಇಂಥ ಖರೀದಿಗಳಿಗಾಗಿ ಕೆಲವೊಮ್ಮೆ ನೀವು ಆಫರ್​ಗಳನ್ನು ತ್ಯಜಿಸಬೇಕಾಗುತ್ತದೆ. ಆದರೆ, ಕೆಲವು ಕಾರ್ಡ್‌ಗಳು ಆಫರ್ ಮತ್ತು ಉಚಿತ ಇಎಂಐ ಎರಡನ್ನೂ ನೀಡುತ್ತವೆ. ಹೊಸ ಖರೀದಿಗಳ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಿ.

ಅಲ್ಲದೇ, ಯಾವುದೇ ಸಂದರ್ಭಗಳಲ್ಲಿ ನಿಮ್ಮ ಕಾರ್ಡ್ ಮಿತಿಯ ಶೇಕಡಾ 30-40 ಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ ಮತ್ತು ಸಮಯಕ್ಕೆ ಸರಿಯಾಗಿ ಬಿಲ್‌ಗಳನ್ನು ಪಾವತಿಸಿ. ಬಾಕಿ ಉಳಿಸಿಕೊಳ್ಳುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕೆಡಿಸಬಹುದು. ಹಬ್ಬದ ಸಮಯದಲ್ಲಿ ನೀವು ಕ್ರೆಡಿಟ್ ಕಾರ್ಡ್‌ಗಳನ್ನು ವಿವೇಚನೆಯಿಂದ ಬಳಸಿದರೆ, ನಿಮಗೆ ಪ್ರಯೋಜನವಾಗುತ್ತದೆ ಎನ್ನುತ್ತಾರೆ ಬ್ಯಾಂಕ್‌ಬಜಾರ್‌ನ ಸಿಇಒ ಅಧಿಲ್ ಶೆಟ್ಟಿ.

ಇದನ್ನೂ ಓದಿ: ಬೈ ನೌ ಪೇ ಲೇಟರ್ ಅಥವಾ ಕ್ರೆಡಿಟ್ ಕಾರ್ಡ್​ - ಯಾವುದು ಬೆಸ್ಟ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.