ETV Bharat / bharat

ಧಗಧಗಿಸುವ ಸೂರ್ಯನ ಪ್ರತಾಪಕ್ಕೆ ನಲುಗಿದ ಜನ.. ತೆಲುಗು ರಾಜ್ಯಗಳಲ್ಲಿ ಆರು ಜನ ಸಾವು!

author img

By

Published : May 16, 2023, 7:01 AM IST

ಕಳೆದ ಕೆಲ ದಿನಗಳಿಂದ ಹೆಚ್ಚಿತ್ತಿರುವ ಬಿಸಿಲಿನ ತಾಪಕ್ಕೆ ತೆಲುಗು ರಾಜ್ಯಗಳು ತತ್ತರಿಸುತ್ತಿವೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಸೂರ್ಯನ ತಾಪಕ್ಕೆ ಸುಮಾರು ಆರು ಜನ ಬಲಿಯಾಗಿದ್ದಾರೆ.

Six people died due to heat wave  Six people died due to heat wave in Andhra  Six people died due to heat wave in Telangana  ಧಗಧಗಿಸುವ ಸೂರ್ಯನ ಪ್ರತಾಪಕ್ಕೆ ನಲುಗಿದ ಜನ  ತೆಲುಗು ರಾಜ್ಯಗಳಲ್ಲಿ ಆರು ಜನ ಸಾವು  ಬಿಸಿಲಿನ ತಾಪಕ್ಕೆ ತೆಲುಗು ರಾಜ್ಯಗಳು ತತ್ತರ  ಆಂಧ್ರ ಮತ್ತು ತೆಲಂಗಾಣದಲ್ಲಿ ಸೂರ್ಯನ ತಾಪ  ಸೂರ್ಯನ ತಾಪಕ್ಕೆ ಸುಮಾರು ಆರು ಜನ ಬಲಿ  ಬಿಸಿಲಿಗೆ ಮೂವರು ಬಲಿ  ರಾಜಧಾನಿಯಲ್ಲಿ ಕರ್ಫ್ಯೂ ವಿಧಿಸಿದ ಸೂರ್ಯ  ಆಂಧ್ರದಲ್ಲಿ 46 ಡಿಗ್ರಿ ತಾಪಮಾನ ದಾಖಲು
ಧಗಧಗಿಸುವ ಸೂರ್ಯನ ಪ್ರತಾಪಕ್ಕೆ ನಲುಗಿದ ಜನ

ಹೈದರಾಬಾದ್‌, ತೆಲಂಗಾಣ: ಉತ್ತರ ತೆಲಂಗಾಣದಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೂರು ದಿನಗಳಿಂದ ರಾಜ್ಯದಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸೋಮವಾರ 11 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ನಲ್ಗೊಂಡ ಮತ್ತು ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಿದೆ. ಆಂಧ್ರದಲ್ಲಿಯೂ ಬಿಸಿಲಿನ ತಾಪ ಹೆಚ್ಚಾಗಿದೆ. ತೆಲುಗು ರಾಜ್ಯಗಳಲ್ಲಿ ಸೂರ್ಯ ಪ್ರತಾಪಕ್ಕೆ ಆರು ಜನ ಮೃತಪಟ್ಟಿದ್ದಾರೆ.

ಉತ್ತರ ತೆಲಂಗಾಣದಲ್ಲಿ ಬಿಸಿಲೋ.. ಬಿಸಿಲು: ಮಂಗಳವಾರ, ಬುಧವಾರ ಮತ್ತು ಗುರುವಾರವೂ ಬಿಸಿಲಿನ ತೀವ್ರತೆ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಸಿದೆ. ಮೂರು ದಿನಗಳಿಂದ ಬಿಸಿಲಿನ ತೀವ್ರತೆ ಹೆಚ್ಚಿದ್ದು, ಹೊರಾಂಗಣದಲ್ಲಿ ಕೆಲಸ ಮಾಡುವ ಅನೇಕರು ಬೆಳಗ್ಗೆ 11 ಗಂಟೆಯ ನಂತರ ಬಿಸಿಲಿನ ತಾಪಕ್ಕೆ ತಾಳಲಾರದೆ ಪರದಾಡುತ್ತಿದ್ದಾರೆ. ವಿದ್ಯುತ್ ಇಲ್ಲದ ಮನೆಗಳಲ್ಲಿರುವ ಜನ ಬಿಸಿಲಿನ ಜಳಕ್ಕೆ ದಂಗಾಗಿದ್ದಾರೆ.

ಸಂಜೆ 5ರವರೆಗೆ ಬಿಸಿಲಿನ ತಾಪ ಮುಂದುವರಿಯುತ್ತಿದ್ದು, ಖಮ್ಮಂನಲ್ಲಿ ಸಾಮಾನ್ಯಕ್ಕಿಂತ 2.9 ಡಿಗ್ರಿ ಸೆಲ್ಸಿಯಸ್, ನಲ್ಗೊಂಡದಲ್ಲಿ 2.5 ಸೆಲ್ಸಿಯಸ್, ಮೇದಕ್‌ನಲ್ಲಿ 1.3 ಮತ್ತು ಭದ್ರಾಚಲಂನಲ್ಲಿ 1.3 ಸೆಲ್ಸಿಯಸ್ ಅಧಿಕವಾಗಿದೆ. ಅಷ್ಟೇ ಅಲ್ಲ ರಾತ್ರಿ ತಾಪಮಾನವೂ ಹೆಚ್ಚಿದೆ. ಭಾನುವಾರ ರಾತ್ರಿ ಖಮ್ಮದಲ್ಲಿ 30 ಡಿಗ್ರಿ ಸೆಲ್ಸಿಯಸ್, ಸಾಮಾನ್ಯಕ್ಕಿಂತ 2.2 ಡಿಗ್ರಿ ಮತ್ತು ಹನುಮಕೊಂಡದಲ್ಲಿ 29.5 ಡಿಗ್ರಿ ಸೆಲ್ಸಿಯಸ್​, ಸಾಮಾನ್ಯಕ್ಕಿಂತ 2.1 ಡಿಗ್ರಿಕ್ಕೂ ಹೆಚ್ಚಾಗಿದೆ. ಹೈದರಾಬಾದ್ ನಗರದಲ್ಲಿಯೂ 28.7 ಡಿಗ್ರಿ ಸೆಲ್ಸಿಯಸ್​, ಸಾಮಾನ್ಯಕ್ಕಿಂತ 1.9 ಡಿಗ್ರಿ ಹೆಚ್ಚಿರುವುದು ಗಮನಾರ್ಹ.

ಬಿಸಿಲಿಗೆ ಮೂವರು ಬಲಿ: ತೆಲಂಗಾಣ ರಾಜ್ಯದಲ್ಲಿ ಬಿಸಿಲ ತಾಪಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಮಂಚಿರ್ಯಾಲ ಜಿಲ್ಲೆಯ ಲಕ್ಷೆಟ್ಟಿಪೇಟೆಯ ಅಂಕತಿವಾಡದ ಕಾನ್‌ಸ್ಟೆಬಲ್ ಮುಟ್ಟೆ ಸಂತೋಷ್ (45) ಭಾನುವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಇವರು ರಾಮಕೃಷ್ಣಾಪುರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು.

ಹನುಮಕೊಂಡ ಜಿಲ್ಲೆಯ ಹಾಸನಪರ್ತಿ ತಾಲೂಕಿನ ಸಿದ್ದಾಪುರ ಗ್ರಾಮದ ಮುಸುಕು ಪೆಂಟು (52) ಕೂಲಿ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು. ಸೋಮವಾರ ಗ್ರಾಮದ ಹೊರವಲಯದಲ್ಲಿ ಕೆಲಸ ಮಾಡುತ್ತಿದ್ದ ಪೆಂಟು ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ವಾರಂಗಲ್ ಎಂಜಿಎಂ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಬಿಸಿಲ ಬೇಗೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕುಮುರಂ ಭೀಮ್ ಜಿಲ್ಲೆಯ ಕಗಜನಗರ ಪಟ್ಟಣದ ಬಾಲಾಜಿನಗರದ ಎಸ್​ಪಿಎಂ ನಿವೃತ್ತ ಕಾರ್ಯಕರ್ತ ಎ.ಪೋಚಯ್ಯ(74) ಭಾನುವಾರ ಸಂಬಂಧಿಕರ ಮದುವೆಗೆ ತೆರಳಿದ ಬಳಿಕ ಅಸ್ವಸ್ಥಗೊಂಡಿದ್ದರು. ಸೋಮವಾರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಿಸಿಲಿನ ಬೇಗೆಯಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ರಾಜಧಾನಿಯಲ್ಲಿ ಕರ್ಫ್ಯೂ ವಿಧಿಸಿದ ಸೂರ್ಯ: ಸೋಮವಾರ ಹೈದರಾಬಾದ್‌ನಲ್ಲಿ ಸೂರ್ಯ ಕರ್ಫ್ಯೂ ವಿಧಿಸಿದ್ದಾನೆ. ಬಿಸಿಲಿನ ತಾಪಕ್ಕೆ ರಸ್ತೆಗಳೆಲ್ಲ ಖಾಲಿ ಖಾಲಿ ಆಗಿ ಗೋಚರಿಸುತ್ತಿದ್ದವು. ಸದಾ ಜನದಟ್ಟಣೆಯಿಂದ ಕೂಡಿದ್ದ ಸಚಿವಾಲಯ, ಲುಂಬಿನಿ ಪಾರ್ಕ್, ತೆಲುಗು ಥಲ್ಲಿ ಮೇಲ್ಸೇತುವೆ ಮತ್ತು ಟ್ಯಾಂಕ್‌ಬಂಡ್ ಮಾರ್ಗಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬರಡಾಗಿ ಕಾಣ ತೊಡಗುತ್ತಿದ್ದವು..

ಆಂಧ್ರದಲ್ಲಿ 46 ಡಿಗ್ರಿ ತಾಪಮಾನ ದಾಖಲು: ಆಂಧ್ರಪ್ರದೇಶದ ನೆಲ್ಲೂರು, ಪ್ರಕಾಶಂ ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 46 ಡಿಗ್ರಿ ದಾಟಿದೆ. ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿ ಇಬ್ಬರು ಹಾಗೂ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಒಬ್ಬರು ಬಿಸಿಲಿನ ಬೇಗೆಗೆ ಮೃತಪಟ್ಟಿದ್ದಾರೆ.

ಓದಿ: ಬ್ರಿಟನ್​ನಲ್ಲಿ ದಾಖಲೆ ಮಟ್ಟಕ್ಕೇರಿದ ಉಷ್ಣಾಂಶ; ನೀರಲ್ಲಿ ಮುಳುಗಿ ಸತ್ತ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.