ETV Bharat / bharat

ಮಿಸೆಸ್ ವಾಷಿಂಗ್ಟನ್ 2022.. ಪ್ರಶಸ್ತಿ ಗೆದ್ದ ಮೀರತ್ ಉದ್ಯಮಿ ಪುತ್ರಿ ಶಗುನ್ ಅಗರ್ವಾಲ್

ಡಿಸೆಂಬರ್ 5 ರಂದು ವಾಷಿಂಗ್ಟನ್‌ನ ಸಿಯಾಟಲ್ ಸಿಟಿಯಲ್ಲಿ ನಡೆದ ಶ್ರೀಮತಿ ವಾಷಿಂಗ್ಟನ್ 2022 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮೀರತ್ ಉದ್ಯಮಿಯ ಪುತ್ರಿ ಶಗುನ್ ಅಗರ್ವಾಲ್​ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

author img

By

Published : Dec 9, 2022, 10:33 AM IST

Mrs Washington 2022
ಮಿಸೆಸ್ ವಾಷಿಂಗ್ಟನ್ 2022

ಮೀರತ್​(ಉತ್ತರಪ್ರದೇಶ): ಮೀರತ್ ಜಿಲ್ಲೆಯ ಖ್ಯಾತ ಉದ್ಯಮಿ ಶೌರಜ್ ಅಗರ್ವಾಲ್ ಅವರ ಪುತ್ರಿ ಶಗುನ್ ಅಗರ್ವಾಲ್ ಅವರು ಮಿಸೆಸ್ ವಾಷಿಂಗ್ಟನ್ 2022 ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯನ್ನು ಅಮೆರಿಕಾದ ಸಿಯಾಟಲ್​​​ನಲ್ಲಿ ಆಯೋಜಿಸಲಾಗಿತ್ತು.

ಡಿಸೆಂಬರ್ 5 ರಂದು ವಾಷಿಂಗ್ಟನ್‌ನ ಸಿಯಾಟಲ್ ಸಿಟಿಯಲ್ಲಿ ಶ್ರೀಮತಿ ವಾಷಿಂಗ್ಟನ್ ಆಯ್ಕೆಗಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮಗಳು ಶಗುನ್ ಅಗರ್ವಾಲ್ ಜೊತೆಗೆ ಇತರ 18 ಮಂದಿ ಭಾಗವಹಿಸಿದ್ದರು. ಕೊನೆಗೂ ನನ್ನ ಪುತ್ರಿ ಮಿಸೆಸ್ ವಾಷಿಂಗ್ಟನ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಮಗಳ ಯಶಸ್ಸಿಗೆ ನೆರೆಹೊರೆಯವರು ಮತ್ತು ಸಂಬಂಧಿಕರು, ಕುಟುಂಬವನ್ನು ಅಭಿನಂದಿಸಿದ್ದಾರೆ ಎಂದು ಉದ್ಯಮಿ ಶೌರಜ್ ಅಗರ್ವಾಲ್ ತಿಳಿಸಿದ್ದಾರೆ.

ಶ್ರೀಮತಿ ವಾಷಿಂಗ್ಟನ್ 2022 ಸ್ಪರ್ಧೆ

ಬಿಕಾನೇರ್‌ನ ಕೈಗಾರಿಕೋದ್ಯಮಿ ಮಹೇಶ್ ಗುಪ್ತಾ ಅವರ ಮಗ ಕಾರ್ತಿಕೇಯನನ್ನು ಶಗುನ್ ಅಗರ್ವಾಲ್ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಕಾರ್ತಿಕೇಯ ಅಮೆರಿಕದ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಪತಿ-ಪತ್ನಿ ವಾಷಿಂಗ್ಟನ್‌ನಲ್ಲಿ ವಾಸಿಸುತ್ತಿದ್ದಾರೆ. ಶಗುನ್ ಅಗರ್ವಾಲ್ ಫ್ಯಾಷನ್ ಡಿಸೈನರ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಈ ವರ್ಷದ ಜನಪ್ರಿಯ ಸಿನಿಮಾ ತಾರೆಯರು ಯಾರು ಗೊತ್ತೇ?: ಅಗ್ರ ಸ್ಥಾನದಲ್ಲಿ ನಮ್ಮ​ ನಟರು!

ಮಗಳೊಂದಿಗೆ ಮೊಬೈಲ್ ಫೋನ್ ಮೂಲಕ ಮಾತನಾಡಿದ್ದೇವೆ. ಅವಳು ಮಿಸೆಸ್ ವಾಷಿಂಗ್ಟನ್-2022 ಆಗಿ ಹೊರ ಹೊಮ್ಮಿರುವುದು ಬಹಳ ಖುಷಿ ನೀಡಿದೆ ಎಂದು ತಾಯಿ ಮೀನು ಅಗರ್ವಾಲ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.