ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಇತರ ಹಲವು ಪರೀಕ್ಷಾ ಮಂಡಳಿಗಳು ನಡೆಸಲಿರುವ 10 ಮತ್ತು 12ನೇ ತರಗತಿಗಳ ಆಫ್‌ಲೈನ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ನಾಳೆ ಬುಧವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಏಪ್ರಿಲ್‌ನಿಂದ 10 ಮತ್ತು 12ನೇ ತರಗತಿಗೆ 2ನೇ ಹಂತದ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‌ಇ ನಿರ್ಧರಿಸಿದೆ. ಕೋವಿಡ್ ಕಾರಣದಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ಬರೆಯಲು ಆಗುವುದಿಲ್ಲ ಎಂದು ವಕೀಲ ಪ್ರಶಾಂತ್ ಪದ್ಮನಾಭನ್ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಭಾರತೀಯರ ಕರೆತರಲು ಉಕ್ರೇನ್‌ನತ್ತ ಹೊರಟ ಏರ್‌ಇಂಡಿಯಾ ವಿಶೇಷ ವಿಮಾನ, 3 ದಿನ ಕಾರ್ಯಾಚರಣೆ
ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ಅರ್ಜಿಯ ಮುಂಗಡ ಪ್ರತಿಯನ್ನು ಸಿಬಿಎಸ್‌ಇ ಮತ್ತು ಸಂಬಂಧಿಸಿದ ಇತರ ಪ್ರತಿವಾದಿಗಳ ಸ್ಥಾಯಿ ವಕೀಲರಿಗೆ ಸಲ್ಲಿಸಬೇಕು ಎಂದು ಹೇಳಿದ್ದು, ನಾಳೆ ಮನವಿ ಆಲಿಸಲು ಒಪ್ಪಿಗೆ ನೀಡಿದೆ.